
ದಾವಣಗೆರೆ. (ಜು;4): ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಮೂರು ಕೋಟಿ ಬೆಲೆಬಾಳುವ ಖರಾಬು ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎಂದು ಮಾಜಿ ಎಪಿಎಂಸಿ ಅಧ್ಯಕ್ಷ ಹಾಗೂ ಲೋಕಿಕೆರೆ ಗ್ರಾಮಸ್ಥರಾದ ಎಂ.ಬಸವರಾಜಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಯಕೊಂಡ ಹೋಬಳಿಯ ಲೋಕಿಕೆರೆ ಗ್ರಾಮದಲ್ಲಿ ರಿ.ನಂ 178 ರಲ್ಲಿ 22 ಎಕರೆ ಇದ್ದು ಈ ಪೈಕಿ 5 ಎಕರೆ ಆರು ಗುಂಟೆ ಜಮೀನನ್ನು ಗ್ರಾಮದ ವ್ಯಕ್ತಿಯೊಬ್ಬರು (ದಾಸರ ಮಂಜಪ್ಪ) ಒತ್ತುವರಿ ಮಾಡಿಕೊಂಡಿದ್ದಾರೆ ಈ ಬಗ್ಗೆ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಅರ್ಜಿ ನೀಡಲಾಗಿದೆ. ಯಾವುದೇ ಪ್ರಯೋಜನ ಅಗಿಲ್ಲ ಎಂದು ದೂರಿದರು.
ಆದರೆ ತಹಶೀಲ್ದಾರ್ ಅಳತೆ ಮಾಡುವಂತೆ ಹೇಳಿದ್ದರು. ಅದರಂತೆ ಭೂಮಾಪಕರು ಅಳತೆ ಮಾಡಿದ್ದರು ಹಾಗೂ ರಿ.ನಂ 178 ರಲ್ಲಿ 22 ಎಕರೆ ಜಮೀನು ಇರುವುದಿಲ್ಲ ಎಂದು ವರದಿ ನೀಡಿದ್ದಾರೆ. ಇದೀಗ ಒತ್ತುವರಿ ಮಾಡಿದ ವ್ಯಕ್ತಿ ಅಧಿಕಾರಿಗಳ ಮೂಲಕ ಅರ್ಜಿದಾರರಾದ ನಮಗೇ ಕೋರ್ಟ್ ನೋಟೀಸ್ ನೀಡಿದ್ದಾರೆ ಎಂದು ಅಳಲು ತೋಡಿಕೊಂಡರು.
ಜಾನುವಾರುಗಳ ದೊಡ್ಡಿಯಂತಾದ ಚಿತ್ರದುರ್ಗ ನಗರ ಪಾರ್ಕ್ ಗಳು!
ಈ ವೇಳೆ ಮತ್ತೊಮ್ಮೆ ಜಿಲ್ಲಾಧಿಕಾರಿಗಳಿಗೆ ಅಳತೆ ಮಾಡಿಸುವಂತೆ ಗ್ರಾಮಸ್ಥರ ಮೂಲಕ ಮನವಿ ನೀಡಿದ್ದೆವು. ಮತ್ತೊಮ್ಮೆ ಅಳತೆ ಮಾಡಿ ಕೋಡಿಹಳ್ಳಿ ದಾರಿ ಸೇರಿ 22 ಎಕರೆ ಜಮೀನು ಇರುತ್ತದೆ ಎಂದು ತಿಳಿಸಿದ್ದರು. ಆದರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿರುವ ಬಗ್ಗೆ ಏಳೆಂಟು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ 2ಎಕರೆ 22 ಗುಂಟೆ ಅ ಖರಾಬು ಉಳಿದ 2 ಎಕರೆ 24 ಗುಂಟೆ ಬ ಖರಾಬು ಇದನ್ನು ಸರಿಪಡಿಸಿಕೊಂಡಿದ್ದಾರೆ. ಡವಲ್ಮೆಂಟ್ ಮಾಡಿಕೊಂಡಿರುವ ಜಮೀನು ರೈತನಿಗೆ ಸೇರಿದ್ದು ಎನ್ನುತ್ತಾರೆ. ಸದರಿ ಜಮೀನಿಗೆ ಸರ್ಕಾರಿ ವೆಚ್ಚದಲ್ಲಿ 3 ಕೋಟಿ ಹಣ ಬಿಡುಗಡೆ ಮಾಡಿ ತಡೆಗೋಡೆ ಕಟ್ಟಿ ಸರಿಪಡಿಸಿದ್ದಾರೆ. ತಡೆಗೋಡೆ ನಿರ್ಮಾಣದಲ್ಲು ಅಕ್ರಮವಾಗಿದ್ದು ಈ ಬಗ್ಗೆ ಭ್ರಷ್ಟಾಚಾರವಾಗಿದೆ ಎಂದು ದೂರು ನೀಡಿದ ನಂತರ ಜಿಲ್ಲಾಧಿಕಾರಿಗಳು ಐದು ಜನದ ಕಮಿಟಿ ಮಾಡಿ ನಿಮಗೆ ನ್ಯಾಯ ದೊರಕಿಸಲಾಗುವುದು ಎಂದರು. ಈ ಪ್ರಕರಣ ನ್ಯಾಯಾಲಯದಲ್ಲಿದೆ. ಅದಕ್ಕಾಗಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಒತ್ತುವರಿ ಮಾಡಿಕೊಂಡಿರುವ ಜಮೀನು ಮೂರು ಕೋಟಿ ಬೆಲೆ ಬಾಳುತ್ತದೆ ಆದ್ದರಿಂದ ಒತ್ತುವರಿ ಮಾಡಿಕೊಂಡ ಜಮೀನಿನಲ್ಲಿ ಲೋಕಿಕೆರೆ ಗ್ರಾಮಸ್ಥರಿಗೆ ಸ್ಮಶಾನ ಹಾಗೂ ನಿವೇಶನ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಇಲಾಖೆ ಗಮನಕ್ಕೆ ಬಾರದೇ ಸರ್ಕಾರಿ ಶಾಲೆ ನೆಲಸಮ: ದಾವಣಗೆರೆ ತಾಲ್ಲೂಕ್ ಲೋಕಿಕೆರೆ ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನೇ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ಬಾರದೇ ನೆಲಸಮ ಮಾಡಿದ್ದು, ಈ ಕುರಿತಂತೆ ಇನ್ನೂ 15ದಿನದೊಳಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಗ್ರಾಮ ಪಂಚಾಯತ ಕಚೇರಿಗೆ ಹಾಗೂ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಲೋಕಿಕೆರೆಯ ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಆರ್.ರಾಮಸ್ವಾಮಿ ಎಚ್ಚರಿಕೆ ನೀಡಿದರು.
Dharwad; ಕಾನೂನು ಕಾಲೇಜಿನಲ್ಲಿ ಮರಗಳ ಮಾರಣಹೋಮ, ವಿದ್ಯಾರ್ಥಿಗಳ ಆಕ್ರೋಶ
ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, 45 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಖಾಸಗಿ ಶಾಲೆಯಾದ ಮಾರುತಿ ಶಾಲೆಯನ್ನು 1989-81ರಲ್ಲಿ ಸರ್ಕಾರಕ್ಕೆ ವಹಿಸಿ ಕೊಡಲಾಗಿತ್ತು. ಅಂದಿನಿಂದ ಶ್ರೀ ಮಾರುತಿ ಸರ್ಕಾರಿ ಪ್ರೌಢಶಾಲೆಯು ನಡೆದುಕೊಂಡು ಬಂದಿತ್ತು. ಆದರೆ, ಇದೀಗ ಕಳೆದ ಬೇಸಿಗೆ ರಜೆ ಸಂದರ್ಭದಲ್ಲಿ ಶಾಲೆಯಲ್ಲಿನ ಆರು ಕೊಠಡಿಗಳನ್ನು ಯಾವುದೇ ಇಲಾಖೆ ಗಮನಕ್ಕೆ ತಾರದೇ ಎಲ್ಲವನ್ನೂ ನೆಲಸಮ ಮಾಡಿ ಕೇವಲ ಹತ್ತು ಸಾವಿರ ಹಣವನ್ನು ಮಾತ್ರ ಶಾಲೆಯ ಮುಖ್ಯೋಪಾಧ್ಯಾಯರ ಖಾತೆಗೆ ಹಾಕಲಾಗಿದ್ದು, ಲಕ್ಷಾಂತರ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ದೂರಿದರು.
ಯಾವುದೇ ಸರ್ಕಾರಿ ಅಸ್ತಿಯನ್ನು ಹರಾಜು ಮಾಡುವ ಮುನ್ನ ಪಿಡಬ್ಲ್ಯೂಡಿ, ಡಿಡಿಪಿಐ, ಬಿಇಓ ಅನುಮತಿ ಪಡೆದ ನಂತರದಲ್ಲಿ ಶಾಲೆಯ ಕೊಠಡಿಗಳನ್ನು ನೆಲಸಮ ಮಾಡಬೇಕಿತ್ತು. ಈ ಕುರಿತಂತೆ ಶಿಕ್ಷಣ ಇಲಾಖೆಯ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸರ್ಕಾರದ ಕಾರ್ಯದರ್ಶಿಗಳು, ರಾಜ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರಿಗಳು ಭಾಗವಹಿಸಿಲ್ಲ. ವೀಡಿಯೋ, ಫೋಟೋ, ಗ್ರಾಮಸ್ಥರು ಇರುವುದಿಲ್ಲ. ಈ ಕೂಡಲೇ ಹರಾಜು ಪ್ರಕ್ರಿಯೆ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಪುರಂದರ ಲೋಕಿಕೆರೆ, ಎಸ್. ಹೆಚ್. ನಾಗಪ್ಪ, ಕೆ.ಹೆಚ್.ಅಣ್ಣಪ್ಪ, ಟಿ.ವಿ.ಮೂರ್ತಿ, ಹನುಮಂತಪ್ಪ ಇತರರು ಇದ್ದರು.