ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಗಟ್ಟಿಗಿತ್ತಿ ಮಹಿಳೆ..!

Kannadaprabha News   | Asianet News
Published : Jun 14, 2020, 02:23 PM ISTUpdated : Jun 14, 2020, 02:30 PM IST
ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಗಟ್ಟಿಗಿತ್ತಿ ಮಹಿಳೆ..!

ಸಾರಾಂಶ

ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಶೀಲಾಬಾಯಿ ಎಂಬುವರಿಗೆ ಕಚ್ಚಿದ ಹಾವು|  ಕಚ್ಚಿದ ಹಾವನ್ನು ಸ್ಥಳದಲ್ಲಿಯೇ ಕಲ್ಲಿನಿಂದ ಜಜ್ಜಿ ಕೊಂದ ಮಹಿಳೆ| ಚಿಕಿತ್ಸೆ ನೀಡಲು ಅನುಕೂಲವಾಗಲೆಂದು ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಶೀಲಾಬಾಯಿ|

ಬೀದರ್‌(ಜೂ.14): ಮಹಿಳೆಯೊಬ್ಬರು ತನಗೆ ಕಚ್ಚಿದ ವಿಷಪೂರಿತ ದಾಮಿನಿ ಹಾವನ್ನೇ ಕಲ್ಲಿನಿಂದ ಜಜ್ಜಿ ಕೊಂದು ಆಸ್ಪತ್ರೆಗೆ ತಂದ ಅಚ್ಚರಿಯ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ತಳವಾಡ(ಎಂ) ಗ್ರಾಮದಲ್ಲಿ ಶನಿವಾರ ಸಂಭವಿಸಿದೆ. 

ಗ್ರಾಮದ ರೈತ ಮಹಿಳೆ ಶೀಲಾಬಾಯಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕಚ್ಚಿದ ಹಾವನ್ನು ಸ್ಥಳದಲ್ಲಿಯೇ ಕಲ್ಲಿನಿಂದ ಜಜ್ಜಿ ಕೊಂದಿದ್ದಲ್ಲದೇ ವೈದ್ಯರಿಗೆ ಚಿಕಿತ್ಸೆ ನೀಡಲು ಅನುಕೂಲವಾಗಲೆಂದು ಹಾವಿನೊಂದಿಗೆ ಆಸ್ಪತ್ರೆಗೆ ಬಂದ್ದಿದ್ದಾರೆ.

ಡಿಡಿಪಿಐ ಆದೇಶಕ್ಕೆ ಕಿಮ್ಮತ್ತಿಲ್ಲ; ಫೀಸ್ ವಸೂಲಿಗೆ ಮುಂದಾದ ಪ್ರತಿಷ್ಠಿತ ಶಾಲೆಗಳು

ಅವರ ಈ ಜಾಣ್ಮೆ, ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿವೆ. ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!