
ಹಾಸನ(ಜೂ.14): ಜಿಲ್ಲೆಯಲ್ಲಿ ನೆನ್ನೆ ಕೊರೋನಾ ಸೋಂಕಿಗೆ ವೃದ್ಧ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯ, ಸಿಬ್ಬಂದಿ ಸೇರಿ ಒಟ್ಟು 11 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ವೃದ್ಧನು ಅನಾರೋಗ್ಯದಿಂದ ಸಾಲಗಾಮೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ಬಳಿಕ ಹಾಸನದ ಖಾಸಗಿ ಅಸ್ಪತ್ರೆಯಲ್ಲೂ ಪರೀಕ್ಷೆ ಮಾಡಲಾಗಿತ್ತು.
ಹಾಸನ ತಾಲೂಕಿನ ಸಾಲಗಾಮೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಹಾಗೂ ಇಬ್ಬರು ಸಿಬ್ಬಂದಿಯನ್ನು, ಖಾಸಗಿ ಆಸ್ಪತ್ರೆಯ ಓರ್ವ ನರ್ಸ್ ಹಾಗೂ ಡಿ ಗ್ರೂಪ್ ನೌಕರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.
ಕೊರೋನಾ ಸಾವಿನಿಂದ ಪಾರಾದ ವೃದ್ಧನಿಗೆ 181 ಪುಟದ ಹಾಸ್ಪಿಟಲ್ ಬಿಲ್..! ಮೊತ್ತ ನೋಡಿದ್ರೆ ತಲೆ ಸುತ್ತುತ್ತೆ..!
ವೃದ್ಧನ ಸಂಪರ್ಕದಲ್ಲಿದ್ದವರಿಗೂ ಸೋಂಕು ತಗುಲಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೃತವೃದ್ಧನ ಜೊತೆ ಸಂಪರ್ಕದಲ್ಲಿದ್ದ ಅವರ ಕುಟುಂಬದ ಆರು ಜನರು ಕ್ವಾರಂಟೈನ್‌ಗೆ ಕಳಿಸಲಾಗಿದೆ. ನಿನ್ನೆಯೇ ಆರೋಗ್ಯ ಇಲಾಖೆಯಿಂದ ಎಲ್ಲಾ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಸ್ವಾ್ಯಬ್ ಪಡೆಯಲಾಗಿದೆ.