ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಮೇ 14) : ವಿಜಯಪುರ ಜಿಲ್ಲಾಸ್ಪತ್ರೆಯ (Vijayapura District Hospital ) ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಬಾಣಂತಿಯರು ಅಕ್ಷರಶಃ ನರಳಾಡಿದ್ದಾರೆ. ಸಿಜೆರಿಯನ್ ಹೆರಿಗೆ (Cesarean delivery) ಬಳಿಕ ಸ್ಟಿಚ್ ಹಾಕಿದ್ದು, ಸ್ಟಿಚ್ ಹರಿದ ಪರಿಣಾಮ ಬಾಣಂತಿಯರು ನರಳಾಡಿದ ಘಟನೆ ನಡೆದಿದೆ.
undefined
20ಕ್ಕೂ ಅಧಿಕ ಬಾಣಂತಿಯರ ನರಳಾಟ!
ಕಳೆದ 10ದಿನಗಳ ಅವಧಿಯಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಸಿಜೆರಿಯನ್ ಗೆ ಒಳಗಾದ ಬಾಣಂತಿಯರು ಅಕ್ಷರಶಃ ಪರದಾಡಿದ್ದಾರೆ. ಸಿಜೆರಿಯನ್ ಬಳಿಕ ಹಾಕಲಾದ ಹೊಲಿಗೆಗಳಿಗು ಕೀವು ತುಂಬಿ ಕಿತ್ತು ಬಂದಿದ್ದು ಬಾಣಂತಿಯರು ನೋವಿಂದ ನರಳಾಡಿದ್ದಾರೆ. ಮನೆಗೆ ಹೋಗಿದ್ದ ಕೆಲ ಬಾಣಂತಿಯರು ಅಸಹನೀಯ ನೋವಿನಿಂದ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಗು ಆಸ್ಪತ್ರೆ ಮರಳಿದ ಘಟನೆಯು ನಡೆದಿದೆ..
ಬಾಣಂತಿಯರ ಪರಿಸ್ಥಿತಿ ಕಂಡು ಕಂಗಾಲಾದ ಪೋಷಕರು: ಸಿಜೆರಿಯನ್ ಗೆ ಒಳಗಾದ ಬಾಣಂತಿಯರ ಹೊಲಿಗೆಗಳು ಹರಿದು ಬಂದಿದ್ದರಿಂದ ಆಸ್ಪತ್ರೆಯಲ್ಲಿ ಅಡ್ಮೀಟ್ ಇದ್ದ 20ಕ್ಕು ಅಧಿಕ ಬಾಣಂತಿಯರು ನರಳಾಡಿದ್ದಾರೆ. ಬಾಣಂತಿಯರ ನರಳಾಟ ಕಂಡ ಪೋಷಕರು ಕಂಗಾಲಾಗಿದ್ದಾರೆ. ಇನ್ನು ಕೆಲವರಿಗೆ ಸ್ಟಿಚ್ ಬಿದ್ದ ಸ್ಥಳದಲ್ಲಿ ಕೀವು ಕಾಣಿಸಿಕೊಂಡಿದ್ದರಿಂದ ಅಕ್ಷರಶಃ ಭಯಬಿದ್ದಿದ್ದಾರೆ. ಮುಂದೇನು ಅಂತಾ ವೈದ್ಯರವಿರುದ್ಧ ಹರಿಹಾಯ್ದಿದ್ದಾರೆ..
ಏಷ್ಯಾನೆಟ್ ಸುವರ್ಣ ನ್ಯೂಸ್ ಎದುರು ಕಣ್ಣೀರು: ಇನ್ನು ಏಷ್ಯಾನೆಟ್ ಸುವರ್ಣ ನ್ಯೂಜ್ ಎದುರು ಬಾಣಂತಿಯರು ಕಣ್ಣೀರಿಟ್ಟ ಘಟನೆಯು ನಡೆಯಿತು. 20 ಬಾಣಂತಿಯರ ಪೈಕಿ ಕೆಲವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿ ತಮ್ಮ ಸಂಕಟ ಹೊರಹಾಕಿದ್ದಾರೆ.. ಅದ್ರಲ್ಲು ಅಥಣಿ ತಾಲೂಕಿನ ತೆಲಸಂಗದಿಂದ ಹೆರಿಗೆಗಾಗಿ ಬಂದು ಸ್ಟಿಚ್ ಕಿತ್ತು ಪರದಾಡುತ್ತಿದ್ದ ಬಾಣಂತಿ ತುಂಬಾನೆ ನೋವಾಗ್ತಿದೆ ಎಂದು ಕಣ್ಣೀರು ಹಾಕಿದ್ರು. ವೈದ್ಯರಿಗೆ ಹೇಳಿದ್ರೆ ಅದೇಲ್ಲ ಮಾಮೂಲು ಎಂದು ಬೆದರಿಸಿದ್ದಾರೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.. ಅಲ್ಲದೆ ವೈದ್ಯರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
1st PUC ದಾಖಲಾತಿಗೆ SSLC ಫಲಿತಾಂಶವೇ ವಿದ್ಯಾರ್ಥಿಗಳಿಗೆ ತೊಡಕಾಗುತ್ತಾ!?
ಪ್ರಾಕ್ಟಿಕಲ್‌ಗೆ ಬಂದ ಮೆಡಿಕಲ್ ವಿದ್ಯಾರ್ಥಿಗಳಿಂದ ಸ್ಟಿಚ್!
ಜಿಲ್ಲಾ ತಾಯಿ ಮಗು ಆಸ್ಪತ್ರೆಯಲ್ಲಿ ತರಬೇತಿ, ಪ್ರಾಕ್ಟಿಕಲ್ ಗಾಗಿ ಬರುವ ವಿದ್ಯಾರ್ಥಿಗಳಿಂದಲೇ ಸಿಜೆರಿಯನ್ ಮಾಡಿಸಿದ್ದಾರೆ ಎನ್ನುವ ಆರೋಪವನ್ನು ಬಾಣಂತಿ ಪೋಷಕರು ಮಾಡಿದ್ದಾರೆ. ಇದರಿಂದಾಗಿಯೇ ಹೊಲಿಗೆ ಕಿತ್ತು ಬಂದಿವೆ. ಹೊಲಿಗೆ ಸರಿಯಾಗಿ ಹಾಕದೇ ಕೀವು ತುಂಬಿ ಬಾಣಂತಿಯರು ನರಳಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹೆರಿಗೆ ಆಸ್ಪತ್ರೆ ಸಿಬ್ಬಂದಿಯಿಂದ ದುರ್ವರ್ತನೆ:
ಇತ್ತ ಬಾಣಂತಿಯರು ಹೀಗೆ ನರಳಾಡಿದ್ರೆ ಇನ್ನೊಂದೆಡೆ ಇದನ್ನ ಪ್ರಶ್ನಿಸಿದ ಪೋಷಕರ ಜೊತೆಗೆ ಆಸ್ಪತ್ರೆ ಸಿಬ್ಬಂದಿ ದುರ್ವರ್ತನೆ ತೋರಿದ್ದಾರೆ. ನಿಮ್ಮ ಪೆಶೆಂಟ್ ಬ್ಲಡ್ ನಲ್ಲೆ ಹಿಮೋಗ್ಲೋಬಿನ್ ಕಡಿಮೆ ಇದೆ ಎಂದು ಬೆದರಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಅಸಲಿಗೆ ಆಗಿದ್ದೇನು? ಬೆಚ್ಚಿ ಬೀಳಿಸುವ ಮಾಹಿತಿ!
ಅಸಲಿಗೆ ಒಟ್ಟೊಟ್ಟೊಗೆ 20ಕ್ಕು ಅಧಿಕ ಬಾಣಂತಿಯರಿಗೆ ಸಿಜೆರಿಯನ್ ವೇಳೆ ಹಾಕಿದ ಸ್ಟಿಚ್ ಬಿಚ್ಚಿದ್ದು ಯಾಕೆ ಎನ್ನುವ ಪ್ರಶ್ನೆಗಳನ್ನ ಬೆನ್ನಟ್ಟಿದಾಗ ಗೊತ್ತಾಗಿದ್ದು, ಇನ್ಪೆಕ್ಶನ್ ಅನ್ನೋದು. ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಒಂದೆ ಒಂದು ಮಹಾ ಶಸ್ತ್ರಚಿಕಿತ್ಸಾ ಕೊಠಡಿ ಇದ್ದು. ಇಡಿ ಕೊಠಡಿ ಇನ್ಪೆಕ್ಶೆನ್ ಗೆ ಒಳಗಾಗಿದೆಯಂತೆ. ಇದು ಜಿಲ್ಲಾಸ್ಪತ್ರೆಯ ಡಿಎಸ್‌ಓ ನೀಡಿರುವ ಮಾಹಿತಿ.
ಮೇ 19ರಂದು SSLC Result, ಶಿಕ್ಷಣ ಸಚಿವರಿಂದ ಟ್ವೀಟ್ ಸ್ಪಷ್ಟನೆ
ಇನ್ಪೆಕ್ಶೆಕ್ಷನ್ ಗೆ ಕಾರಣ ಏನು?
ಇನ್ನು ಇನ್ಪೆಕ್ಶನ್ ಗೆ ಕಾರಣ ಎನೆಂದು ಹುಡುಕಿದಾಗ ಗೊತ್ತಾಗಿದ್ದು, ನಿತ್ಯ ಹೆರಿಗೆಗೆ ಬರುವವ ಗರ್ಭೀಣಿಯರ ಸಂಖ್ಯೆ. ಹೆರಿಗೆ ಆಸ್ಪತ್ರೆಯಲ್ಲಿ ಒಂದೆ ಶಸ್ತ್ರಚಿಕಿತ್ಸಾ ಕೊಠಡಿ ಇದ್ದು, ಆಸ್ಪತ್ರೆಗೆ ಹೆರಿಗೆಗೆ ಬರುವವರ ಸಂಖ್ಯೆ 40ಕ್ಕು ಅಧಿಕ. ಅದ್ರಲ್ಲಿ 15 ಸಿಜೇರಿಯನ್ ಕೇಸ್ ಗಳಿರುತ್ವೆ. ಹೀಗಾಗಿ ನಿರಂತರ ಹೆರಿಗೆ, ಸಿಜೆರಿಯನ್ ಸ್ವಚ್ಛತೆ ಕಾಪಾಡದೆ ಇರೋದು ಹಾಗೂ ಇನ್ಪೆಕ್ಶನ್ ಪ್ರಮಾಣ ಹೆಚ್ಚಾಗಿರೋದು ಕಾರಣ ಎನ್ನಲಾಗಿದೆ.
ಜಿಲ್ಲಾಸ್ಪತ್ರೆ ಡಿಎಸ್‌ಓ ಹೇಳೋದೇನು?
ಇಡೀ ಪ್ರಕರಣ ಹೊರ ಬಿದ್ದ ಬಳಿಕ ಡಿಎಸ್‌ಓ ಡಾ ಲಕ್ಕನ್ನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ್ದಾರೆ. ಇನ್ಪೆಕ್ಶನ್ ಆಗಿರೋದು ನಿಜ ಇದೆ. ನಿತ್ಯ ೪೦ಕ್ಕು ಅಧಿಕ ಹೆರಿಗೆ ಕೇಸ್ ಗಳನ್ನ ಅಟೆಂಡ್ ಮಾಡ್ತಿರೋದ್ರಿಂದ ಈ ಘಟನೆಗೆ ಕಾರಣವಾಗಿದೆ. ಬುಧುವಾರವೇ ಈ ಪ್ರಕರಣಗಳು ಬೆಳಕಿಗೆ ಬಂದಿವೆ. ಒಟ್ಟು 18 ಬಾಣಂತಿಯರಲ್ಲಿ ಇನ್ಪೆಕ್ಶನ್ ಕಾಣಿಸಿಕೊಂಡಿದೆ. ಈಗಾಗಲೇ ೫ ಬಾಣಂತಿಯರಿಗೆ ಅಗತ್ಯ ಚಿಕಿತ್ಸೆ ನೀಡಿ, ಪುನಃ ಆಫರೇಶನ್ ಮಾಡಲಾಗಿದೆ. ಅವರು ಚೇತರಿಸಿಕೊಂಡಿದ್ದಾರೆ. ಮೂವರಿಗೆ ಸೋಮವಾರ ಆಫರೇಶನ್ ನಡೆಯಲಿದೆ. ಇನ್ನುಳಿದ 10 ಬಾಣಂತಿಯರಲ್ಲಿ ವಾಟರ್ ಇನ್ಪೆಕ್ಶನ್ ಕಾಣಿಸಿಕೊಂಡಿದ್ದು ಕಳೆದ ಮೂರ್ನಾಲ್ಕು ದಿನಗಳಿಂದ ಚಿಕಿತ್ಸೆ ನೀಡಲಾಗ್ತಿದೆ ಎಂದಿದ್ದಾರೆ..