Chitradurga ರಾಗಿ ಖರೀದಿ ಕೇಂದ್ರ ಬಂದ್ ನಿಂದ ರೈತರು ಕಂಗಾಲು

By Suvarna News  |  First Published May 14, 2022, 4:40 PM IST
  • ಸರ್ವರ್ ಸಮಸ್ಯೆಯಿದೆ ಎಂದು ಬೋರ್ಡ್ ಹಾಕಿರೋ ಅಧಿಕಾರಿಗಳು.
  • ರೈತರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡ್ತಿದ್ದಾರೆ ಅಧಿಕಾರಿಗಳು 
  • ಮುಂಗಾರು, ಹಿಂಗಾರಿನಲ್ಲಿ ಬೆಳೆದ ರಾಗಿ ಮಾರಾಟ ಮಾಡಲಾಗದೇ ಸಂಕಷ್ಟಕ್ಕೆ ಸಿಲುಕಿದ ರೈತ‌ರು

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಮೇ.14): ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ‌ ಸಿಗಲಿ ಅಂತ ರಾಗಿ ಖರೀದಿ ಕೇಂದ್ರೆ ಓಪನ್ ಮಾಡಲಾಗಿದೆ‌. ದೇವ್ರು ವರ ಕೊಟ್ಟು ಪೂಜಾರಿ ಕೊಡ್ಲಿಲ್ಲ ಎಂಬಂತೆ ಕೇಂದ್ರಗಳು ಸ್ಥಾಪನೆ ಆಗಿದ್ರು ಅಲ್ಲಿನ ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ರೈತರು ಹೈರಾಣಾಗಿ ಹೋಗಿದ್ದಾರೆ.   ರಾಜ್ಯದಲ್ಲಿ ರಾಗಿ (Finger millet ) ಖರೀದಿ ಕೇಂದ್ರದ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರತೀ ಕೇಂದ್ರಗಳಲ್ಲೂ ಒಂದಲ್ಲ ಒಂದು ಸಮಸ್ಯೆಯನ್ನ ರೈತರು ಅನುಭವಿಸುತ್ತಲೇ ಇದ್ದಾರೆ‌. ಅಂತೆಯೇ ಚಿತ್ರದುರ್ಗ (Chitradurga) ನಗರದಲ್ಲಿರೋ ರಾಗಿ ಖರೀದಿ ಕೇಂದ್ರವನ್ನು ಕಳೆದ ಮೂರ್ನಾಲ್ಕು ದಿನಗಳಿಂದಲೂ ಬಂದ್ ಮಾಡಿದ್ದಾರೆ. 

Tap to resize

Latest Videos

ಇತ್ತ ರೈತರು ಯಾವು ಬೆಳೆದ ರಾಗಿಯನ್ನು ಮಾರಲಾಗದೇ ಬಿಡಲಾಗದೇ ಅತಂತ್ರಕ್ಕೆ‌ ಸಿಲುಕಿದ್ದಾರೆ‌. ಅಧಿಕಾರಿಗಳನ್ನ ವಿಚಾರಿಸಿದ್ರೆ ಹತ್ತು ಹಲವು ಕಾರಣಗಳು ಕೊಟ್ಟು ರೈತರಿಗೆ (farmers) ಬಂದ ದಾರಿಗೆ ಸುಂಕ ಇಲ್ಲ ಎಂಬಂಯೆ ವಾಪಸ್ ಕಳಿಸ್ತಿದ್ದಾರೆ. ಅಲ್ಲದೇ ಕಳೆದ ಎರಡ್ಮೂರು ದಿನಗಳಿಂದ ರಾಗಿ ಕೇಂದ್ರದ ಮುಂದೆಯೇ ಸರ್ವಸ್ ಸಮಸ್ಯೆಯಿದೆ ರೈತರು ಸಹಕರಿಸಿ ಎಂದು ಬೋರ್ಡ್ ಹಾಕಿರೋದು ರೈತರಿಗೆ ಇನ್ನಷ್ಟು ತೊಂದರೆಗೀಡು ಮಾಡಿದಂತಾಗಿದೆ.

PROFESSOR RECRUITMENT SCAM ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಸರ್ಕಾರ ರೈತರಿಗೆ ಅನುಕೂಲ ಆಗಲಿ ಅಂತ ರಾಗಿ ಖರೀದಿ ಕೇಂದ್ರ ಓಪನ್ ಮಾಡಿದ್ರೆ, ಅಲ್ಲಿರೋ ಅಧಿಕಾರಿಗಳು ರೈತರಿಗೆ ದಿನಕ್ಕೊಂದು ಸಬೂಬು ಹೇಳಿಕೊಂಡೆ ಕಾಲ ಕಳೆಯುತ್ತಿರೋದು ರಾಗಿ ಬೆಳೆದಿರೋ ರೈತರಲ್ಲಿ ನಿರಾಸೆ ಮೂಡಿಸಿದೆ.

ಇನ್ನೂ ಈ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ತಂದ್ರೆ, ಬಹಳಷ್ಟು ಕಡೆ ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ತೊಂದರೆ ಅಗ್ತಿದೆ ಎಂದು ನನಗೂ ದೂರುಗಳು ಬಂದಿವೆ. ನಮ್ಮ ಜಿಲ್ಲೆಯಲ್ಲಿ ಸರ್ವರ್ ಸಮಸ್ಯೆ ಆಗಿದೆ ಎಂದು ನಿಮ್ಮ ಮೂಲಕ ಮಾಹಿತಿ ತಿಳಿದ ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮೇ 19ರಂದು SSLC Result, ಶಿಕ್ಷಣ ಸಚಿವರಿಂದ ಟ್ವೀಟ್ ಸ್ಪಷ್ಟನೆ

ರೈತರು ಬೆಳೆದ ಬೆಳೆಯನ್ನು MSP ದರಕ್ಕೆ ಖರೀದಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದನ್ನು ಹೊರತು ‌ಪಡಿಸಿಯೂ ನೊಂದಾಣಿ ಕಾರ್ಯ ಇಂದು ನಾಳೆಯೂ ನಡೆಯುತ್ತದೆ. ಹಾಗೇನಾದ್ರು ರೈತರಿಗೆ ಸಮಸ್ಯೆ ಆದ್ರೆ ನನ್ನ ಗಮನಕ್ಕೆ ಬಂದ್ರೆ ಕೂಡಲೇ ಆ ಖರೀದಿ ಕೇಂದ್ರಕ್ಕೆ ತೆರಳಿ ಸಮಸ್ಯೆ ಸರಿಪಡಿಸ್ತೀನಿ ಎಂದು ಭರವಸೆ ನೀಡಿದರು.

 ಒಟ್ನಲ್ಲಿ ರೈತರು ಬೆಳೆದ ಬೆಳೆ ಉತ್ತಮ ಬೆಲೆಗೆ ಮಾರಾಟ ಮಾಡಿ ಅವರಿಗೆ ಅನೂಕಲ ಆಗಲಿ ಎಂದು ರಾಗಿ ಖರೀದಿ ಕೇಂದ್ರಗಳು ಸ್ಥಾಪನೆ ಆಗಿವೆ. ಆದ್ರೆ ಆಯಾ ಭಾಗದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲ ರೈತರಿಗೆ ಸಮಸ್ಯೆ ಆಗ್ತಿದ್ದು ಕೂಡಲೇ ಈ ಬಗ್ಗೆ ಮೇಲಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

click me!