Koppala ಮೊಬೈಲ್ ಟವರ್ ನಿರ್ಮಾಣಕ್ಕೆ ವಿರೋಧ

By Suvarna News  |  First Published May 14, 2022, 5:26 PM IST

ಕೊಪ್ಪಳ‌ ನಗರದ  26 ನೇ ವಾರ್ಡಿನ ಕಲ್ಯಾಣ ನಗರದಲ್ಲಿ ಎಸ್ ಸಿ ಜೋಗಿನ್ ಎನ್ನುವರ ಮನೆ ಮೇಲೆ ಎಟಿಸಿ ಎನ್ನುವ ಕಂಪನಿ ಮೊಬೈಲ್ ಟಾವರ್ ನಿರ್ಮಾಣ ಮಾಡುತ್ತಿದ್ದು ಸ್ಥಳಿಯರ ವಿರೋಧ ವ್ಯಕ್ತವಾಗಿದೆ.


ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಮೇ.14): ಅದೊಂದು ಜನವಸತಿ ಪ್ರದೇಶದ ಹೈ ಫೈ ಏರಿಯಾ, ಆದರೆ ಇದೀಗ ಆ ಏರಿಯಾದಲ್ಲಿ ನಿರ್ಮಾಣವಾಗುತ್ತಿರುವ ಟವರ್ ಗೆ  ಅಲ್ಲಿನ‌ ನಿವಾಸಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೊಪ್ಪಳ (Koppala) ನಗರದ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರವಾಗಿದೆ. ನಗರದ ಬೆಳವಣಿಗೆಗೆ ತಕ್ಕಂತೆ ಮೊಬೈಲ್ ಟವರ್ (Mobile Tower) ಗಳ ಅವಶ್ಯಕತೆಯೂ ಸಹ ಹೆಚ್ಚಳವಾಗುತ್ತಿದೆ. ಈ ಹಿನ್ನಲೆಯಲ್ಲಿ ಕೊಪ್ಪಳ‌ ನಗರದ  26 ನೇ ವಾರ್ಡಿನ ಕಲ್ಯಾಣ ನಗರದಲ್ಲಿ ಎಸ್ ಸಿ ಜೋಗಿನ್ ಎನ್ನುವರ ಮನೆ ಮೇಲೆ ಎಟಿಸಿ ಎನ್ನುವ ಕಂಪನಿ ಮೊಬೈಲ್ ಟವರ್ ನಿರ್ಮಾಣ ಮಾಡುತ್ತಿದೆ.

Latest Videos

undefined

ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧ:  ನಗರದ 26 ನೇ ವಾರ್ಡಿನ ಕಲ್ಯಾಣ ನಗರದಲ್ಲಿ ಎಸ್ ಸಿ ಜೋಗಿನ್ ಎನ್ನುವರ ಮನೆ ಮೇಲೆ ಎಟಿಸಿ ಕಂಪನಿ ನಿರ್ಮಾಣ ಮಾಡುತ್ತಿರುವ ಮೊಬೈಲ್ ಟವರ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಇನ್ನು ಕಲ್ಯಾಣ ನಗರದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳು (Residents) ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಟವರ್ ನಿರ್ಮಾದಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎನ್ನುವ ಕಾರಣಕ್ಕೆ  ಸ್ಥಳೀಯರು ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

HUBBALLI ಊಟ ಮಾಡಿ ಮನೆಯಿಂದ ಹೊರ ಹೋದವ ಸಿಕ್ಕಿದ್ದು ಹೆಣವಾಗಿ!

ಅನಧಿಕೃತ ಕಟ್ಟಡದ ಮೇಲೆ ಮೊಬೈಲ್ ಟವರ್ ನಿರ್ಮಾಣದ ಆರೋಪ: ಇನ್ನು ಕಲ್ಯಾಣ ನಗರದಲ್ಲಿ ಮೊಬೈಲ್ ಟವರ್ ನಿರ್ಮಾಣದ ಕುರಿತು ಕಲ್ಯಾಣ ನಗರ ನಿವಾಸಿಗಳು ಕೋರ್ಟ್ ಮೆಟ್ಟಿಲೆರಿದ್ದರು, ಕೋರ್ಟ್ ಇಬ್ಬರಿಗೂ ನೋಟಿಸ್ ನೀಡಿದೆ. ಇದರ ಮದ್ಯೆ ಕೋರ್ಟ್ ವಿಚಾರಣಗೆ ಹಾಜರಾಗದೆ ಎಟಿಸಿ ಕಂಪನಿ  ಹಾಗೂ ಎಸ್ ಸಿ ಜೋಗಿನ್ ಅವರು ಟವರ್ ನಿರ್ಮಾಣ ಮಾಡಿದ್ದಾರೆ‌ ಎನ್ನಲಾಗಿದೆ. ಇನ್ನು ಎಸ್ ಸಿ ಜೋಗಿನ್ ಅವರ ಮನೆಯ ಮೊದಲನೇ ಮಹಡಿ ಕಟ್ಟಡ ಕಟ್ಟಲು ನಗರಸಭೆಯಿಂದ ಯಾವುದೇ ಅನುಮತಿ ಇಲ್ಲ ಎನ್ನಲಾಗಿದೆ. ಹೀಗಾಗಿ ಎಟಿಸಿ ಕಂಪನಿ ಹಾಗೂ ಎಸ್ ಸಿ ಜೋಗಿನ್ ಅನಧಿಕೃತ ಕಟ್ಟಡದ ಮೇಲೆ ಮೊಬೈಲ್ ಟವರ್ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪ.

ಮೊಬೈಲ್ ಟವರ್ ನಿರ್ಮಾಣ ವಿರೋಧಿಸಿ ಪ್ರತಿಭಟನೆ: ಇನ್ನು ಮೊಬೈಲ್ ಟವರ್ ನಿರ್ಮಾಣ ಕೈಬಿಡಬೇಕೆಂದು ಹಲವಾರು ಬಾರಿ ಸ್ಥಳೀಯರು ನಗರಸಭೆ ಅಧಿಕಾರಿಗಳು ಸೇರಿದಂತೆ ಮೊಬೈಲ್ ಟವರ್ ಕಂಪನಿಯವರನ್ನು ಒತ್ತಾಯಿಸುದ್ದರು. ಆದರೆ ಪ್ರಯೋಜ ಮಾತ್ರ ಏನೂ ಆಗಿದ್ದಿಲ್ಲ. ಈ ಹಿನ್ನಲೆಯಲ್ಲಿ ಇಂದು ಕಲ್ಯಾಣ ನಗರದ ನಿವಾಸಿಗಳು ಪ್ರತಿಭಟನೆ ಸಹ ನಡೆಸಿದರು. 

1st PUC ದಾಖಲಾತಿಗೆ SSLC ಫಲಿತಾಂಶವೇ ವಿದ್ಯಾರ್ಥಿಗಳಿಗೆ ತೊಡಕಾಗುತ್ತಾ!?

ಇನ್ನು ಮೊಬೈಲ್ ಟವರ್ ತೆರವುಗೊಳಿಸವುದಾಗಿ ಕಲ್ಯಾಣ ನಗರ ನಿವಾಸಿಗಳು ಹೇಳಿದ್ದರು. ಈ ಹಿನ್ನಲೆಯಲ್ಲಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಇನ್ನು ಪ್ರತಿಭಟನಾ ಸ್ಥಳಕ್ಕೆ ಬಂದ ನಗರಸಭೆ  ಆಧಿಕಾರಿಗಳು ಮೊಬೈಲ್ ಟವರ್ ನಿರ್ಮಾನ ಕಾರ್ಯ ಸ್ಥಗಿತ ಮಾಡಿ, ಯಥಾಸ್ಥಿತಿ ಕಾಯ್ದುಕೊಳ್ಳಲು ನೋಟಿಸ್ ನೀಡಿದ್ದಾರೆ.ಆದರೆ  ಕಟ್ಟಡ ಹಾಗೂ ಟವರ್ ನಿರ್ಮಾಣ ಸಂಸ್ಥೆಯವರು ಟವರ್ ಕಾಮಗಾರಿ ನಿಲ್ಲಿಸುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

click me!