ಮೈಸೂರಲ್ಲಿ ಅಲೆಮಾರಿ ಮಹಿಳೆಗೆ ಕೊರೋನಾ..?

By Suvarna News  |  First Published Mar 12, 2020, 10:47 AM IST

ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಮೈಸೂರಿನ ಅಲೆಮಾರಿ ಸಮುದಾಯದ ಮಹಿಳೆಯೊಬ್ಬರಿಗೆ ಕೊರೋನಾ ವೈರಸ್ ಬಾಧಿಸಿದೆ ಎಂಬ ಮಾತು ಕೇಳಿ ಬಂದಿದೆ. ಹುಣಸೂರಿನಲ್ಲೂ ಕರೊನಾ ಭೀತಿ ಕಾಣಿಸಿಕೊಂಡಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ.


ಮೈಸೂರು(ಮಾ.12): ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಮೈಸೂರಿನ ಅಲೆಮಾರಿ ಸಮುದಾಯದ ಮಹಿಳೆಯೊಬ್ಬರಿಗೆ ಕೊರೋನಾ ವೈರಸ್ ಬಾಧಿಸಿದೆ ಎಂಬ ಮಾತು ಕೇಳಿ ಬಂದಿದೆ. ಹುಣಸೂರಿನಲ್ಲೂ ಕರೊನಾ ಭೀತಿ ಕಾಣಿಸಿಕೊಂಡಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ.

ಹುಣಸೂರಿನಲ್ಲೂ ಕರೊನಾ ಭೀತಿ ಕಂಡು ಬಂದಿದ್ದು, ಪಕ್ಷಿರಾಜಪುರದಲ್ಲಿ ಹೀಗೊಂದು ವದಂತಿ ಕೇಳಿ ಬಂದಿದೆ. ಅಲೆಮಾರಿ ಸಮುದಾಯದವರು ವಾಸವಿರುವ ಹುಣಸೂರು ತಾಲೂಕಿನ ಗ್ರಾಮದಲ್ಲಿ ಮಹಿಳೆಗೆ ಕರೊನಾ ವೈರಸ್ ಸೋಂಕು ಇದೆ ಎಂದು ವದಂತಿ ಹಬ್ಬಿಸಲಾಗಿದೆ.

Tap to resize

Latest Videos

undefined

Fact check: ಐಸ್‌ಕ್ರೀಮ್‌​ನಿಂದ ದೂರ ಇರಿ ಎಂದು ಯುನಿ​ಸೆಫ್‌ ಹೇಳಿ​ದೆ​ಯೇ?

ಪಕ್ಷಿರಾಜಪುರಕ್ಕೆ ತಾಲೂಕು ಆರೋಗ್ಯಾಧಿಕಾರಿ ಭೇಟಿ ನೀಡಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದ್ದಾರೆ. ನಾಳೆ 20ಕ್ಕೂ ಹೆಚ್ಚು ಜನರು ದಕ್ಷಿಣ ಆಫ್ರಿಕಾ, ದುಬೈನಿಂದ ಬರುವ ನಿರೀಕ್ಷೆ ಇದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲೇ ತಪಾಸಣೆ ಮಾಡುವಂತೆ ಡಿಎಚ್‌ಒ ವೆಂಕಟೇಶ್‌ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

click me!