ಕಾಫಿನಾಡಲ್ಲಿ 4 ಎಕರೆ ಕಾಫಿ ತೋಟ ಕಡಿದು ಹಾಕಿದ ಅಧಿಕಾರಿಗಳು

By Kannadaprabha News  |  First Published Mar 12, 2020, 10:45 AM IST

ತುಮಕೂರಿನಲ್ಲಿ ಮರಗಳ ಮಾರಣಹೋಮ ನಡೆಸಿದ ಬೆನ್ನಲ್ಲೇ  ಇದೀಗ ಚಿಕ್ಕಮಗಳೂರಿನಲ್ಲಿಯೂ ಇಂತಹದ್ದೆ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಎಕರೆಗಟ್ಟಲೇ ತೋಟ ಹಡಿದು ಹಾಕಲಾಗಿದೆ. 


ಚಿಕ್ಕಮಗಳೂರು [ಮಾ.12]: ತುಮಕೂರಿನಲ್ಲಿ ಎರಡು ಕಡೆ ಅಡಕೆ, ತೆಂಗು ಮರಗಳ ಮಾರಣಹೋಮ ನಡೆಸಿದ ಬೆನ್ನಲ್ಲೇ ಇದೀಗ ಮತ್ತೊಂದು ಕಡೆ ಬೆಳೆಗಳ ಮಾರಣಹೋಮ ನಡೆಸಿರುವುದು ಬೆಳಕಿಗೆ ಬಂದಿದೆ. 

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ದೇವಗೂಡು ಗ್ರಾಮದ ದಿನೇಶ್ ಹೆಬ್ಬಾರ್ ಎಂಬುವವರಿಗೆ ಸೇರಿದ್ದ ಇನ್ನೇನು ಫಸಲು ಬರಲು ಸಿದ್ಧವಾಗಿದ್ದ ಗಿಡಗಳಿಗೆ ಕೊಡಲಿ ಹಾಕಲಾಗಿದೆ. 

Tap to resize

Latest Videos

  ಹೂ ಬಿಟ್ಟ ಕಾಫಿ ಗಿಡಗಳನ್ನು ಅಧಿಕಾರಿಗಳು ಕಡಿದು ಉರುಳಿಸಿದ್ದಾರೆ. 4ಎಕರೆಯಲ್ಲಿದ್ದ ಕಾಫಿ ಗಿಡಗಳನ್ನು ನಾಶ ಮಾಡಿದ್ದಾರೆ.ಅಧಿಕಾರಿಗಳ ದಿಢೀರ್ ನಿರ್ಧಾರದಿಂದ ರೈತ ಕಂಗಾಲಾಗಿದ್ದಾರೆ.

ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ...

ಸರ್ವೆ ನಂಬರ್ 78ರಲ್ಲಿರುವ ತೋಟದಲ್ಲಿ ಒತ್ತುವರಿ ಆರೋಪದಡಿಯಲ್ಲಿ ಅಧಿಕಾರಿಗಳು ಕಾಫಿ ಗಿಡಗಳನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. 

ತುಮಕೂರಿನ ಗುಬ್ಬಿ ತಾಲೂಕಿನಲ್ಲಿಯೂ ಎರಡು ಕಡೆ ನೂರಾರು ಅಡಕೆ ಹಾಗೂ ತೆಂಗಿನ ಮರಗಳನ್ನು ಮಾರಣಹೋಮ ನಡೆಸಿದ್ದು, ಇದರ ಬೆನ್ನಲ್ಲೇ ಇದೀಗ ಚಿಕ್ಕಮಗಳೂರಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

click me!