ಸುಂದರವಾದ ದಾಂಪತ್ಯ ಜೀವನ ಕಟ್ಟಿಕೊಂಡಿದ್ದ ಆ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಗಂಡನ ಹಾದಿಯನ್ನೇ ಹೆಂಡತಿ ತುಳಿದಿದ್ದಾಳೆ.
ಕೊಪ್ಪಳ[ಡಿ.30] ಗಂಡನ ಸಾವಿನಿಂದ ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕು ಹುಳ್ಕಿಹಾಳ ಗ್ರಾಮದಲ್ಲಿ ಗಂಡ -ಹೆಂಡತಿ ಇಬ್ಬರು ಸಾವಿನ ಮನೆ ಪ್ರವೇಶಿಸಿದ್ದು ಮಕ್ಕಳು ಅನಾಥರಾಗಿದ್ದಾರೆ.
ಈರಪ್ಪ ಎಡೆಬಾಳ (50), ಉಮಾದೇವಿ (43) ಮೃತ ದಂಪತಿ. ಹೃದಾಯಘಾತದಿಂದ ಈರಪ್ಪ ಮಲಗಿದ್ದಲ್ಲೇ ನಿಧನರಾಗಿದ್ದರು. ಗಂಡನ ಸಾವಿನ ನೋವು ತಡೆಯಲಾರದೆ ಮನನೊಂದ ಪತ್ನಿ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂಥಾ ಕಿಲಾಡಿ.. ಚಿಕ್ಕಮಗಳೂರಿನಲ್ಲಿ ಮುಳುಗಿ ಪ್ರೇಯಸಿಯೊಂದಿಗೆ ದೇಶ ಸುತ್ತುತ್ತಿದ್ದ..!
ಆದರೆ ಮಕ್ಕಳು ಪಕ್ಕದ ಮನೆಯಲ್ಲಿ ಮಲಗಿದ್ದರು. ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದರು ಸಂಬಂಧಿಕರ ರೋದನೆ ಹೇಳತೀರದಾಗಿದೆ.