ಸಿಕ್ಕಿಬಿದ್ದ ಮಹಿಳೆ ಪರ್ಸ್ ಪರಿಶೀಲಿಸಿದಾಗ ಬಯಲಾಯ್ತು ಅವಳ ಅಸಲಿ ಮುಖ

By Kannadaprabha NewsFirst Published Nov 5, 2020, 11:26 AM IST
Highlights

ಪ್ರವಾಸದ ನೆಪದಲ್ಲಿ ಬಂದ ಮಹಿಳೆ ಸಿಕ್ಕಿಬಿದ್ದಳು.. ಆಕೆ ಪರ್ಸ್ಪರಿಶೀಲಿಸಿದಾಗ ಅಸಲಿ ಮುಖ ಬಯಲಾಗಿದೆ. 

ಸಕಲೇಶಪುರ (ನ.05):  ಪ್ರವಾಸಿಗರ ಸೋಗಿನಲ್ಲಿ ಬಂದು ನಕಲಿ ನೋಟು(ಖೋಟಾ) ಚಲಾವಣೆಗೆ ಯತ್ನಿಸಿದ ಮೂವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನಲ್ಲಿ  ನಡೆದಿದೆ.

ತಾಲೂಕಿನ ಮಂಜ್ರಾಬಾದ್‌ ಕೋಟೆ ಸಮೀಪದ ಕ್ಯಾಂಟೀನ್‌ನಲ್ಲಿ ತಿನಿಸುಗಳನ್ನು ಖರೀದಿ ಮಾಡಿ ನೋಟೊಂದನ್ನು ಅಂಗಡಿಯವನಿಗೆ ನೀಡಿ ಕೋಟೆ ನೋಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಂಗಡಿ ಮಾಲೀಕನಿಗೆ ನೋಟಿನ ಬಗ್ಗೆ ಅನುಮಾನ ಬಂದು ಹೈವೇ ಗಸ್ತು ತಿರುಗುವ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಹುಬ್ಬಳ್ಳಿ-ಧಾರವಾಡದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌: ಏಳು ಜನರ ಬಂಧನ

ಈ ವೇಳೆ ಕೋಟೆ ನೋಡಿಕೊಂಡು ಬಂದ ಮಹಿಳೆಯ ಪರ್ಸ್‌ ಪರಿಶೀಲಿಸಿದಾಗ 500 ರು.ಗಳ ಹಲವು ನಕಲಿ ನೋಟು ಕಂಡು ಬಂದಿದೆ. ಈ ವೇಳೆ ಮಹಿಳೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು ಮಹಿಳೆಯನ್ನು ಹಿಡಿದಿದ್ದಾರೆ.

ಬೆಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಮಹಿಳೆ ಹಾಗೂ ಈಕೆಯ ಜೊತೆ ಇನ್ನಿಬ್ಬರು ಬಂದಿದ್ದರು. ತಾಯಿ, ತಂದೆ, ಮಗ ಎಂದು ಹೇಳಲಾಗುತ್ತಿದೆ. ಹೆದ್ದಾರಿ ಗಸ್ತಿನವರು ಆರೋಪಿಗಳನ್ನು ನಗರ ಠಾಣೆಗೆ ಒಪ್ಪಿಸಿದ್ದು, ಈ ಕುರಿತು ದೂರು ದಾಖಲಿಸಿಕೊಂಡು ಮೂವರನ್ನೂ ತನಿಖೆಗೆ ಒಳಪಡಿಸಿದ್ದಾರೆ.

click me!