ಜೆಡಿಎಸ್‌ಗೆ ರಾಜೀನಾಮೆ ನೀಡಲು ಮುಂದಾದ ಮುಖಂಡ : ನಿರ್ಧಾರ ವಾಪಸ್

By Suvarna NewsFirst Published Nov 5, 2020, 10:49 AM IST
Highlights

ಜೆಡಿಎಸ್ ಮುಖಂಡರೋರ್ವರು ತಮ್ಮ ನಿರ್ಧಾರದಿಂದ ವಾಪಸಾಗಿದ್ದಾರೆ. ಮುಖಂಡರ ಮನ ಒಲಿಕೆಯಿಂದ ಮನ ಬದಲಾಯಿಸಿದ್ದಾರೆ

ಪಾವಗಡ (ನ.05) :  ಠಾಣೆಗೆ ಹೋದ ಅಮಾಯಕರ ಮೇಲೆ ಪಿಎಸ್‌ಐಯೊಬ್ಬರ ದೌರ್ಜನ್ಯ ಹಿನ್ನೆಲೆಯಲ್ಲಿ ಬೇಸತ್ತು ಜೆಡಿಎಸ್‌ ತ್ಯಜಿಸಲು ಮುಂದಾದ ಸುದ್ದಿ ಹೊರಬೀಳುತ್ತಿದ್ದಂತೆ ಬುಧವಾರ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ತಾಲೂಕಿನ ಬಿ. ಹೊಸಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮುಖಂಡ ಹಾಗೂ ಪಕ್ಷದ ಕಾರ್ಯಕರ್ತರ ಜತೆ ಚರ್ಚಿಸುವ ಮೂಲಕ ಅಸಮಾಧಾನ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಕ್ರಿಮಿನಲ್‌ ಸಮಸ್ಯೆಗಳ ಹಿನ್ನೆಲೆಯಲ್ಲಿ ದೂರು ಸಲ್ಲಿಸಲು ಹೋದವರಿಗೆ ತಾಲೂಕಿನ ವೈ.ಎನ್‌. ಹೊಸಕೋಟೆ ಪೊಲೀಸ್‌ ಠಾಣೆ ಪಿಎಸ್‌ಐ ಏಕವಚನ ಪ್ರಯೋಗ ಮತ್ತು ದೌರ್ಜನ್ಯ ಮಾಡುವಲ್ಲಿ ನಿರತರಾಗಿದ್ದು ಈ ಸಂಬಂಧ ಗಮನ ಸೆಳೆದರೂ ಪಕ್ಷದ ಮುಖಂಡರು ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ತಾಲೂಕಿನ ಮರಿದಾಸನಹಳ್ಳಿ ಗ್ರಾಪಂ ವ್ಯಾಪ್ತಿಯ ಹಿರಿಯ ಮುಖಂಡ ವಿ.ಚಿಂತಲರೆಡ್ಡಿ ತಾ,ಜೆಡಿಎಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲು ತೀರ್ಮಾನಿಸಿ ಸುದ್ದಿಗೋಷ್ಠಿ ನಡೆಸಿದ್ದರು. ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ತಾ,ಬಿ.ಹೊಸಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮುಖಂಡ ವಿ.ಚಿಂತಲರೆಡ್ಡಿ ಹಾಗೂ ಅವರ ನೇತೃತ್ವದ ಕಾರ್ಯಕರ್ತರ ಜತೆ ಸುದೀರ್ಘ ಚರ್ಚೆ ನಡೆಸುವ ಮೂಲಕ ಪಕ್ಷ ನಿಮ್ಮ ಜತೆ ಇರುವ ಭರವಸೆ ನೀಡಿ ಅತೃಪ್ತರನ್ನು ಸಮಾಧಾನಗೊಳಿಸುರುವುದಾಗಿ ತಿಳಿದಿದೆ.

ಬಿಜೆಪಿಯೇ 2 ಸೀಟು ಗೆಲ್ಲಲಿದೆ : ಗುಪ್ತಚರ ಇಲಾಖೆಯಿಂದ ಮಾಹಿತಿ ...

ಬಳಿಕ ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಬಿ. ಹೊಸಹಳ್ಳಿ ಗ್ರಾಮ ತಾಲೂಕಿನ ವೈ.ಎನ್‌. ಹೊಸಕೋಟೆ ಪೊಲೀಸ್‌ ಠಾಣೆ ವ್ಯಾಪ್ತಿಗೆ ಬರಲಿದ್ದು ಸಮಸ್ಯೆಗಳ ಹಿನ್ನೆ್ನಲೆಯಲ್ಲಿ ಠಾಣೆಗೆ ದೂರು ಸಲ್ಲಿಸಲು ಹೋದ ಪಕ್ಷ ಭೇದ ಮಾಡುವ ಮೂಲಕ ಜೆಡಿಎಸ್‌ ಕಾರ್ಯಕರ್ತರ ಮೇಲೆ ಅಲ್ಲಿನ ಪಿಎಸ್‌ಐ ರಾಮಯ್ಯ ವಿನಾ ಕಾರಣ ಬೆದರಿಕೆ ಮತ್ತು ದೌರ್ಜನ್ಯ ವೆಸಗುವಲ್ಲಿ ನಿರತರಾಗಿದ್ದಾರೆ. ಅಲ್ಲದೇ ಏಕವಚನ ಪದ ಬಳಕೆ ಮಾಡುವ ಮೂಲಕ ಸುಳ್ಳು ಪ್ರಕರಣ ದಾಖಲಿಸುವಲ್ಲಿ ನಿರತರಾಗಿದ್ದು ಹೊಸಹಳ್ಳಿ ವಿವಾದಕ್ಕೆ ಸಂಬಂಧಪಟ್ಟಂತೆ ಘಟನೆ ವಿವರಿಸುವ ವೇಳೆ ಜೆಡಿಎಸ್‌ ಮುಖಂಡರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂಬಂಧ ಮೊಬೈಲ್‌ನಲ್ಲಿ ಕಾಲ್‌ ರೆಕಾರ್ಡ ಮಾಡಲಾಗಿದ್ದು ಈ ಸಂಬಂಧ ಮುಖಂಡ ವಿ.ಚಿಂತಲರೆಡ್ಡಿ ಪಕ್ಷದ ತಾ,ಘಟಕದ ಬಳಿ ನೋವು ತೋಡಿಕೊಂಡಿದ್ದರು.

click me!