ಮಲೆನಾಡಿನ ಹೆಬ್ಬಾಗಿಲು ಎಂದೇ ಕರೆಯಲ್ಪಡುವ ಶಿವಮೊಗ್ಗದಲ್ಲಿ ಕೊರೋನಾ ಸೋಂಕು ನಿಧಾನವಾಗಿ ಲಗ್ಗೆಯಿಡಲಾರಂಭಿಸಿದ್ದು, ಸೋಂಕಿತರ ಸಂಖ್ಯೆ ಮಂಗಳವಾರ(ಜೂ.16)ದ ವೇಳೆಗೆ ನೂರರ ಗಡಿ ದಾಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.17): ಜಿಲ್ಲೆಯಲ್ಲಿ ಮಂಗಳವಾರ ಮೂರು ವರ್ಷದ ಬಾಲಕ ಸೇರಿ ಏಳು ಮಂದಿಗೆ ಕೊರೋನಾ ಸೋಂಕು ತಗುಲಿದೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದಂತಾಗಿದೆ.
ಮಂಗಳವಾರ ಪತ್ತೆ ಆಗಿರುವ 7 ಪ್ರಕರಣಗಳಲ್ಲಿ 5 ಮಂದಿ ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿ ಬಂದವರು. ಇನ್ನಿಬ್ಬರಿಗೆ ಈಗಾಗಲೇ ಸೋಂಕಿಗೊಳಗಾದ ವ್ಯಕ್ತಿಯ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದೆ. ಏಳು ಜನರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
19 ವರ್ಷದ ಯುವಕ ಪಿ-7265, 25 ವರ್ಷದ ಮಹಿಳೆ ಪಿ-7266, 63 ವರ್ಷದ ಪುರುಷ ಪಿ-7267, ಮೂರು ವರ್ಷದ ಬಾಲಕ ಪಿ-7268, 28 ವರ್ಷದ ಪುರುಷ ಪಿ-7269 ಮಹಾರಾಷ್ಟ್ರದಿಂದ ಶಿವಮೊಗ್ಗಕ್ಕೆ ಹಿಂದಿರುಗಿದವರು. ಪಿ-6149 ಸೋಂಕಿತನ ಸಂಪರ್ಕದಿಂದ 78 ವರ್ಷದ ಮಹಿಳೆ ಪಿ-7270 ಹಾಗೂ 80 ವರ್ಷದ ಪುರುಷ ಪಿ-7271ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
19 ವರ್ಷದ ಯುವಕ ಪಿ-7265, 25ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ
ಜಿಲ್ಲೆಯಲ್ಲಿ ಈವರೆಗೂ ಒಟ್ಟು ಸೋಂಕಿತರ ಸಂಖ್ಯೆ 101ಕ್ಕೆ ಏರಿಕೆಯಾಗಿದೆ. ಅವರಲ್ಲಿ ಒಟ್ಟು 54 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇಂದಿನ 7 ಪ್ರಕರಣ ಒಳಗೊಂಡಂತೆ 47 ಜನರಿಗೆ ಚಿಕಿತ್ಸೆ ಮುಂದುವರೆದಿದೆ.