ದೇಶಾದ್ಯಂತ ಕೊರೋನಾ ಲಾಕ್‌ಡೌನ್‌ನಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಲವು ತಿಂಗಳಿನಿಂದ ಮನೆಯಲ್ಲೇ ಇರುವಂತಾಗಿದೆ. ಹೀಗಿರುವಾಗ ಮಕ್ಕಳು ಒಂದಲ್ಲಾ ಒಂದು ರೀತಿಯಲ್ಲಿ ಸಮಯವನ್ನು ಕಳೆಯುವ ಹೊಸ ದಾರಿಯನ್ನು ಹುಡುಕುತ್ತಾರೆ. ಹಾಗೆಯೇ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುರಕ್ಷಾ ತನ್ನ ಪೆನ್ಸಿಲ್ ಸ್ಕೆಚ್ ಹವ್ಯಾಸದಿಂದ ದೇಶಕ್ಕೆ ತನ್ನಿಂದಾದ ಸಹಾಯಹಸ್ತ ಚಾಚಲು ಮುಂದಾಗಿದ್ದಾಳೆ.
ಮಂಗಳೂರು(ಜೂ.17): ದೇಶಾದ್ಯಂತ ಕೊರೋನಾ ಲಾಕ್‌ಡೌನ್‌ನಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಲವು ತಿಂಗಳಿನಿಂದ ಮನೆಯಲ್ಲೇ ಇರುವಂತಾಗಿದೆ. ಹೀಗಿರುವಾಗ ಮಕ್ಕಳು ಒಂದಲ್ಲಾ ಒಂದು ರೀತಿಯಲ್ಲಿ ಸಮಯವನ್ನು ಕಳೆಯುವ ಹೊಸ ದಾರಿಯನ್ನು ಹುಡುಕುತ್ತಾರೆ. ಹಾಗೆಯೇ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುರಕ್ಷಾ ತನ್ನ ಪೆನ್ಸಿಲ್ ಸ್ಕೆಚ್ ಹವ್ಯಾಸದಿಂದ ದೇಶಕ್ಕೆ ತನ್ನಿಂದಾದ ಸಹಾಯಹಸ್ತ ಚಾಚಲು ಮುಂದಾಗಿದ್ದಾಳೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಸಾಧಕಿ ಸುಧಾಮೂರ್ತಿ, ಅಣ್ಣಾಮಲೈ ಐಪಿಎಸ್ ಹೀಗೆ ಅನೇಕ ಗಣ್ಯ ವ್ಯಕ್ತಿಗಳ ಭಾವಚಿತ್ರ ರಚಿಸಿ ಅವರಿಂದ ಶಹಭಾಷ್ ಗಿರಿ ಗಿಟ್ಟಿಸಿಕೊಂಡಿರುವ ಈಕೆ ತನ್ನ ಗುರುಗಳ ಚಿತ್ರವನ್ನು ರಚಿಸಿ ಅವರ ಪ್ರೀತಿಗೂ ಪಾತ್ರಳಾಗಿದ್ದಾಳೆ.
ಉಪ್ಪಿನಂಗಡಿ ಯುವಕನಿಗೆ ಕೊರೋನಾ ಪಾಸಿಟಿವ್: ಮನೆಗಳು ಸೀಲ್‌ಡೌನ್..?
ಲಾಕ್‌ಡೌನ್‌ಗೂ ಮೊದಲು ಆಕೆ ತನ್ನ ಗುರುಗಳೊಬ್ಬರ ಭಾವಚಿತ್ರ ರಚಿಸಿ ಅವರಿಗೆ ಕೊಡುಗೆಯಾಗಿ ನೀಡಿದ್ದಾಳೆ. ಆದರೆ ಉಡುಗೊರೆಯನ್ನು ಯಾವತ್ತೂ ಬಯಸದ ಗುರುಗಳು ಅದನ್ನು ಮೊದಲ ಬಾರಿಗೆ ಶಿಷ್ಯೆಯ ಉಡುಗೊರೆಯಾಗಿ ಸ್ವೀಕರಿಸಿದಿದ್ದರು. ಬಳಿಕ ಆಕೆಯ ಗುರುಗಳು ಆಕೆಗೆ ನೀಡಿದ ಚಿತ್ರಕ್ಕೆ ಪ್ರತಿಯಾಗಿ 2 ಸಾವಿರ ರು. ಗೌರವಧನ ನೀಡ ಬಯಸಿದ್ದರು. ಬಡವರಿಗೆ ತನ್ನಿಂದಾದಷ್ಟುಸಹಾಯವನ್ನು ಮಾಡಬೇಕೆಂಬ ಕನಸು ಸುರಕ್ಷಾಳದ್ದಾಗಿತ್ತು. ಚಿತ್ರಕ್ಕೆ ತಾವು ನೀಡಬಯಸಿದ ಹಣದಲ್ಲಿ ಬೇಕಾದಷ್ಟನ್ನು ಆಕೆ ಇರಿಸಿಕೊಂಡು ಮಿಕ್ಕ ಹಣವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಲು ಗುರುಗಳು ಸಲಹೆ ನೀಡಿದ್ದಾರೆ. ಈ ಮೂಲಕ ಆಕೆಯ ಕನಸು ಸಾಕಾರಗೊಳ್ಳುವ ಕಾರ್ಯ ತನ್ನಿಂದಲೇ ಆರಂಭವಾಗಲಿ ಎಂದು ಆಶೀರ್ವದಿಸಿದ್ದಾರೆ.
ಮಂಗಳೂರಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 79 ಪಾಸಿಟಿವ್
ತನ್ನ ಗುರುಗಳ ಸಲಹೆಯನ್ನು ಸ್ವೀಕರಿಸಿದ ವಿದ್ಯಾರ್ಥಿನಿ ಸುರಕ್ಷಾ ಅವರು ಇದೀಗ ಚಿತ್ರಗಳನ್ನು ರಚಿಸಿ ಅದರಿಂದ ಸಿಗುವ ಗೌರವಧನವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾಳೆ. ಈಗ ಸುರಕ್ಷಾಳಲ್ಲಿ ಅನೇಕ ಮಂದಿ ತಮ್ಮ ಚಿತ್ರ ರಚಿಸಿಕೊಡುವಂತೆ ಕೇಳಿಕೊಂಡಿದ್ದು, ಅದರಂತೆ ಅವರ ಚಿತ್ರವನ್ನು ಬಿಡಿಸಿ ನೀಡುತ್ತಿದ್ದಾಳೆ. ಪ್ರತಿ ಚಿತ್ರಗಳಿಂದ ಬರುತ್ತಿರುವ ಪೂರ್ತಿ ಹಣವನ್ನು ಆಕೆ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಇತರರಿಗೆ ಮಾದರಿಯಾಗಿದ್ದಾಳೆ.