ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದಲ್ಲಿರುವ ಪೇಜಾವರ ಮಠದ ಗೋಶಾಲೆಯಲ್ಲಿ ಕಂಡುಬಂದ ಹೆಬ್ಬಾವಿಯ ಮರಿಯನ್ನು ಮಠದ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥರು ರಕ್ಷಣೆ ಮಾಡಿದ್ದಾರೆ.
ಬ್ರಹ್ಮಾವರ(ಜೂ.17): ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದಲ್ಲಿರುವ ಪೇಜಾವರ ಮಠದ ಗೋಶಾಲೆಯಲ್ಲಿ ಕಂಡುಬಂದ ಹೆಬ್ಬಾವಿಯ ಮರಿಯನ್ನು ಮಠದ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥರು ರಕ್ಷಣೆ ಮಾಡಿದ್ದಾರೆ.
ಗೋಶಾಲೆಯ ಆವರಣಕ್ಕೆ ಬಂದಿದ್ದ ಈ ಹಾವನ್ನು ಶ್ರೀಗಳು ಸಣ್ಣದೊಂದು ಪೈಪ್‌ನೊಳಗೆ ಹೊಕ್ಕುವಂತೆ ಮಾಡಿ, ನಂತರ ಅದನ್ನು ಗೋಶಾಲೆಯ ತೋಟಕ್ಕೆ ತಂದು ಬಿಟ್ಟಿದ್ದಾರೆ. ಗೋಶಾಲೆಯಲ್ಲಿ ಹೋಗುತಿದ್ದ ಈ ಹಾವು ಹಸುಗಳ ಕಾಲಿನಡಿ ಸಿಲುಕಬಾರದೆಂದು ಸ್ವಾಮೀಜಿ ಅವರು ರಕ್ಷಸಿದ್ದಾರೆ.
ಚಿತ್ರ ರಚಿಸಿ ಪಿಎಂ ಕೇರ್ಸ್‌ಗೆ ದೇಣಿಗೆ ನೀಡುತ್ತಿರುವ ವಿದ್ಯಾರ್ಥಿನಿ
ಪರಿಸರ ರಕ್ಷಣೆಯ ಬಗ್ಗೆ ಬಹುಕಾಳಜಿ ಹೊಂದಿರುವ ಶ್ರೀಗಳ ಈ ಮಾನವೀಯ ನಡೆ ಶ್ಲಾಘನೆಗೆ ಪಾತ್ರವಾಗಿದೆ. ಈ ಹಿಂದೆಯೂ ಉಡುಪಿಯ ಮಠಕ್ಕೆ ಬಂದಿದ್ದ ಹಾವು, ಗಾಯಗೊಂಡ ಗಿಡುಗಗಳನ್ನು ರಕ್ಷಿಸಿದ್ದರು.
ಮಾಮೂಲಿಯಾಗಿ ಹೆಬ್ಬಾವು ಹತ್ತಾರು ಸಂಖ್ಯೆಯಲ್ಲಿ ಮೊಟ್ಟೆಯಿಟ್ಟು ಮರಿ ಮಾಡುತ್ತದೆ. ಮೊಟ್ಟೆಯೊಡೆದು ಮರಿಗಳು ಹೊರಗೆ ಬಂದು ಹರಿದಾಡಲು ಶುರುವಾಗುತ್ತಿದ್ದಂತೆ ಅವು ಸ್ವತಂತ್ರ ಆಗುತ್ತವೆ. ಹೀಗೆ ಗುಂಪಿನಿಂದ ಬೇರ್ಪಟ್ಟಹೆಬ್ಬಾವಿನ ಮರಿ ಮಠದೊಳಗೆ ಬಂದಿರಬೇಕು ಎಂದು ಶ್ರೀಗಳು ಹೇಳಿದ್ದಾರೆ.