MLC Election | JDS ಸೇರಲಿರುವ ಕೈ ಮುಖಂಡಗೆ ಟಿಕೆಟ್‌? ಸಂದೇಶ್‌ರಿಂದಲೂ ಮರಳಿ ಯತ್ನ

By Kannadaprabha News  |  First Published Nov 21, 2021, 2:29 PM IST
  • ಮೈಸೂರು,ಚಾಮರಾಜನಗರ ಕ್ಷೇತ್ರದಿಂದ ತಾಪಂ ಮಾಜಿ ಅಧ್ಯಕ್ಷ ಸಿ.ಎನ್‌. ಮಂಜೇ ಗೌಡರಿಗೆ ಜೆಡಿಎಸ್‌ ಟಿಕೆಟ್‌ ನೀಡುವ ಸಾಧ್ಯತೆ
  • ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಂದ ಮಂಜೇಗೌಡರ ಪರ ಒಲವು 

ಮೈಸೂರು (ನ.21):  ಮೈಸೂರು (Mysuru ),ಚಾಮರಾಜನಗರ (Chamarajanagar) ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ತಾಪಂ ಮಾಜಿ ಅಧ್ಯಕ್ಷ ಸಿ.ಎನ್‌. ಮಂಜೇ ಗೌಡರಿಗೆ (Manjegowda) ಜೆಡಿಎಸ್‌ ಟಿಕೆಟ್‌ (JDS Ticket) ನೀಡುವ ಸಾಧ್ಯತೆ ಇದೆ. ಹಾಲಿ ಜೆಡಿಎಸ್‌ (JDS) ಸದಸ್ಯರಾಗಿರುವ ಸಂದೇಶ್‌ ನಾಗರಾಜ್‌ (Sandesh nagaraj) ಬಿಜೆಪಿ (BJP) ಟಿಕೆಟ್‌ಗಾಗಿ ಕಾದು ಕುಳಿತಿದ್ದರು. ಅದು ಆರ್‌. ರಘು (R Raghu) ಅವರ ಪಾಲಾಗಿದೆ. ಹೀಗಾಗಿ ಅವರು ಮತ್ತೆ ತಮ್ಮ ಪುತ್ರನ ಮೂಲಕ ಶಾಸಕ ಸಾ.ರಾ. ಮಹೇಶ್‌ (Sa Ra Mahesh) ಅವರನ್ನು ಸಂಪರ್ಕಿಸಿ, ಜೆಡಿಎಸ್‌ ಟಿಕೆಟ್‌ ಕೇಳಿದಾರಾದರೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ಮಂಜೇಗೌಡರ ಪರ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಶನಿವಾರ ಮಂಜೇಗೌಡರು ಜಿಲ್ಲಾಧ್ಯಕ್ಷ ಎನ್‌. ನರಸಿಂಹಸ್ವಾಮಿ ಅವರೊಂದಿಗೆ ತೆರಳಿ, ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರನ್ನು(GT Devegowda)  ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನವಾಗಿ ಅವರ ಕುಟುಂಬದವರಿಗೆ ಟಿಕೆಟ್‌ ನೀಡುವುದಕ್ಕೆ ಮನವೊಲಿಸುವ ಪ್ರಯತ್ನ ಸಫಲವಾಗಿಲ್ಲ. ಹೀಗಾಗಿ ಮಂಜೇ ಗೌಡರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Tap to resize

Latest Videos

undefined

ಮಂಜೇಗೌಡ 2008 ರಲ್ಲಿ ಚಾಮುಂಡೇಶ್ವರಿ (Chamundeshwari) ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎರಡನೇ ಸ್ಥಾನ ಪಡೆದಿದ್ದರು. ನಂತರ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಾಲಿ ಕಾಂಗ್ರೆಸ್‌ (congress) ಟಿಕೆಟ್‌ ಆಕಾಂಕ್ಷಿಯಾಗಿದ್ದರು.

ಕಾಂಗ್ರೆಸ್‌ನಲ್ಲಿ ದಲಿತರಲ್ಲಿ ಎಡಗೈಗೆ ಸೇರಿರುವ ಹಾಲಿ ಸದಸ್ಯ ಆರ್‌. ಧರ್ಮಸೇನ ಬದಲು ಆರೋಗ್ಯ ಇಲಾಖೆ (Health Department) ನಿವೃತ್ತ ಯೋಜನಾ ನಿರ್ದೇಶಕ ಡಾ.ಡಿ. ತಿಮಯ್ಯ ಅವರಿಗೆ ಟಿಕೆಟ್‌ (Ticket) ನೀಡುವ ಸಾಧ್ಯತೆ ಇದೆ.

ಸೋಮವಾರ ಎಚ್‌ಡಿಕೆ ಆಗಮನ : ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ನ.22 ರಂದು ಮಧ್ಯಾಹ್ನ 12ಕ್ಕೆ ಮೈಸೂರಿಗೆ (Mysuru) ಆಗಮಿಸುವರು. ಸಿ.ಎನ್‌. ಮಂಜೇಗೌಡ ಪಕ್ಷ ಸೇರ್ಪಡೆಯಾಗಲಿದ್ದಾರೆ. ನಂತರ ನಗರದ ಹೊರವಲಯದ ರೆಸಾರ್ಟಿನಲ್ಲಿ ತಾಲೂಕು ಅಧ್ಯಕ್ಷರು, ಮುಖಂಡರ ಸಭೆ ನಡೆಯಲಿದೆ. ಅಲ್ಲಿ ಎಲ್‌. ವಿವೇಕಾನಂದ, ಅಚ್ಯುತಾನಂದ, ಸಾ.ರಾ. ನಂದೀಶ್‌ ಸೇರಿದಂತೆ ಎಲ್ಲಾ ಆಕಾಂಕ್ಷಿಗಳ ಸಭೆ ನಡೆಸಿ, ಅಭ್ಯರ್ಥಿ ಅಂತಿಮಗೊಳಿಸುವರು. ಬಹುತೇಕ ಮಂಜೇಗೌಡರೇ ಅಭ್ಯರ್ಥಿಯಾಗುವರು.

ಬಿಜೆಪಿಯಿಂದ ಒಬಿಸಿ, ಕಾಂಗ್ರೆಸ್‌ನಿಂದ ಎಡಗೈಗೆ ಛಾನ್ಸ್‌ 

ಮೈಸೂರು- ಚಾಮರಾಜನಗರ (Mysuru - chamarajanagar) ಸ್ಥಳೀಯ ಸಂಸ್ಥೆಗಳ ದ್ವಿಸದಸ. ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಡಿ.10 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಯು ಹಿಂದುಳಿದ ವರ್ಗದ ಆರ್‌. ರಘು ಕೌಟಿಲ್ಯ ಅವರಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದ್ದರೆ ಕಾಂಗ್ರೆಸ್‌ನಲ್ಲಿ ಸಂಪ್ರದಾಯದಂತೆ ದಲಿತ ಜನಾಂಗದ ಎಡಗೈನವರಿಗೆ ಅವಕಾಶ ಹೆಚ್ಚಿದೆ. ಹಾಲಿ ಸದಸ್ಯ ಆರ್‌. ಧರ್ಮಸೇನ ಅಥವಾ ಆರೋಗ್ಯ ಇಲಾಖೆ ನಿವೃತ್ತ ಯೋಜನಾ ನಿರ್ದೇಶಕ ಡಾ.ಡಿ. ತಿಮ್ಮಯ್ಯ ಅವರಲ್ಲಿ ಒಬ್ಬರಿಗೆ ಅವಕಾಶ ನೀಡುವ ಸಾಧ್ಯತೆ ಕಂಡು ಬಂದಿದೆ. ಜೆಡಿಎಸ್‌ನಿಂದ (JDS) ಮೇಲ್ವರ್ಗದ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

1988 ರಿಂದ ಇಲ್ಲಿಯವರೆಗೆ ನಡುವೆ ಮೂರು ವರ್ಷ ಹೊರತುಪಡಿಸಿದರೆ ಐದು ಬಾರಿ ಚುನಾವಣೆ (Election) ನಡೆದಿದೆ. ಒಮ್ಮೆ ಒಂದು ಸ್ಥಾನಕ್ಕೆ ಉಪ ಚುನಾವಣೆಯೂ (By election) ನಡೆದಿದೆ.

ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ (Congress) ಟಿ.ಎನ್‌. ನರಸಿಂಹಮೂರ್ತಿ (ಎಡಗೈ) ಜನತಾಪಕ್ಷದ ವಿ.ಎಚ್‌. ಗೌಡ (ಒಕ್ಕಲಿಗ), ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್‌ ಸಿ. ರಮೇಶ್‌ (ಎಡಗೈ)- ಜನತಾದಳದ ವೈ. ಮಹೇಶ್‌ (ಒಕ್ಕಲಿಗ), ಮೂರನೇ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್‌. ಮಂಜುನಾಥ್‌ (ಎಡಗೈ)- ಜೆಡಿಎಸ್‌ನ ಬಿ. ಚಿದಾನಂದ (ವೀರಶೈವ ಲಿಂಗಾಯತ), ನಾಲ್ಕನೇ ಚುನಾವಣೆಯಲ್ಲಿ ಜೆಡಿಎಸ್‌ನ ಸಂದೇಶ್‌ ನಾಗರಾಜ್‌ (ಒಕ್ಕಲಿಗ)- ಬಿಜೆಪಿಯ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ (ವೀರಶೈವ ಲಿಂಗಾಯತ) ಗೆದ್ದಿದ್ದರು. ಮಲ್ಲಿಕಾರ್ಜನಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ 2013 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್‌. ಧರ್ಮಸೇನ (ಎಡಗೈ) ಗೆದ್ದಿದ್ದರು.

2010 ರಲ್ಲಿ ನಡೆದ ಚುನಾವಣೆಯಲ್ಲಿ ಮಂಜುನಾಥ್‌ ಅವರಿಗೆ ಎರಡನೇ ಬಾರಿ ಟಿಕೆಟ್‌ ನೀಡಲಾಗಿತ್ತು. ಅಲ್ಲಿಯವರೆಗೆ ಯಾವುದೇ ಪಕ್ಷ ಸತತ ಎರಡನೇ ಬಾರಿಗೆ ಟಿಕೆಟ್‌ ನೀಡಿರಲಿಲ್ಲ. ಆ ಚುನಾವಣೆಯಲ್ಲಿ ಮಂಜುನಾಥ್‌ ಸೋತರು. 2016 ರಲ್ಲಿ ನಡೆದ ಚುನಾವಣೆಯಲ್ಲಿ

ಕಾಂಗ್ರೆಸ್‌ ಹಾಗೂ ಜೆಡಿಎಸ್‌- ಎರಡೂ ಹಾಲಿ ಸದಸ್ಯರಿಗೆ ನೀಡಿದ್ದವು. ಆರ್‌. ಧರ್ಮಸೇನ (ಎಡಗೈ) ಹಾಗೂ ಸಂದೇಶ್‌ ನಾಗರಾಜ್‌ (ಒಕ್ಕಲಿಗ) ಪುನಾರಾಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದರು. ಏಕೆಂದರೆ ಆವರೆಗೆ ಸತತ ಎರಡನೇ ಬಾರಿಗೆ ಯಾರೂ ಆಯ್ಕೆಯಾಗಿರಲಿಲ್ಲ.

click me!