
ಕಲಬುರಗಿ(ನ. 21) ಬಿಟ್ ಕಾಯಿನ್ (Bitcoin Scam) ವಿಚಾರದಲ್ಲಿ ಪ್ರತಾಪ್ ಸಿಂಹ (Pratap Simha)ಮತ್ತು ಪ್ರಿಯಾಂಕ್ ಖರ್ಗೆ(Priyank Kharge) ನಡುವೆ ಎದ್ದಿದ್ದ ವಾಕ್ ಸಮರ ಈಗ ಸ್ವಾಮೀಜಿಗಳ ಅಖಾಡ ಸೇರಿದೆ. ರಾಜಕೀಯ ನಾಯಕರಿಬ್ಬರ ವಿಚಾರದಲ್ಲಿ ಕಲಬುರಗಿ ಸ್ವಾಮಿಜಿಗಳಿಬ್ಬರು ಮಾತನಾಡಿದ್ದಾರೆ.
ಕಲಬುರಗಿಯ (Kalaburagi) ಸುಲಫಲ ಮಠದ ಶ್ರೀ ಮಹಾಂತ ಸ್ವಾಮಿಜಿ ಮತ್ತು ಆಂದೋಲಾ ಮಠದ ಸಿದ್ದಲಿಂಗ ಸ್ವಾಮಿಗಳ ನಡುವೆ ವಾಕ್ ಸಮರ ಏರ್ಪಟ್ಟಿದೆ.
ಪ್ರಿಯಾಂಕ್ ಖರ್ಗೆ ಗಂಡಸೋ ಹೆಂಗಸೋ ಎಂದಿರುವ ಪ್ರತಾಪ ಸಿಂಹಗೆ ಚಡ್ಡಿ ಬಿಚ್ಚಿ ಹೊಡಿತಿವಿ ಮೈಸೂರಿಗೆ ತೆರಳಿ ಚಡ್ಡಿ ಬಿಚ್ಚಿ ಹೊಡಿತಿನಿ ಎಂದು ಸುಲಫಲ ಶ್ರೀ ಹೇಳಿದ್ದರು. ಸುಲಫಲ ಶ್ರೀಗಳ ಮಾತಿಗೆ ಜೇವರ್ಗಿ ತಾಲೂಕಿನ ಆಂದೋಲಾದ ಶ್ರೀ ಸಿದ್ದಲಿಂಗ ಸ್ವಾಮಿಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಪಂಚೆ-ಚಡ್ಡಿ ವಾರ್ ನಡೆದಿತ್ತು!
ನಿಜಕ್ಕೂ ನಿಮಗೆ ತಾಕತ್ತಿದ್ರೆ ಪ್ರತಾಪ ಸಿಂಹರ ಚಡ್ಡಿ ಬಿಚ್ಚಿ ಹೊಡಿರಿ ಅಂದಾಗ ಮಾತ್ರ ಜನ, ನೀವು ಸ್ವಾಮಿಗಳು ಅಂತ ಒಪ್ಪಿಕೊಳ್ಳುತ್ತಾರೆ. ನೀವು ಕೆಲ ರಾಜಕಾರಣಿಗಳ ಓಲೈಕೆಗೆ ಮುಂದಾಗಿ ಬಕೆಟ್ ಸ್ವಾಮಿಗಳು ಅಂತ ಖ್ಯಾತಿ ಪಡೆದಿದ್ದಿರಿ ಎಂದು ಸುಲಫಲ್ ಸ್ವಾಮಿಜಿ ವಿರುದ್ಧ ಆಂದೋಲಾ ಸಿದ್ದಲಿಂಗ ಸ್ವಾಮಿಜಿ ಆಕ್ರೋಶ ಹೊರಹಾಕಿದ್ದಾರೆ.
ಇದೇ ಪ್ರಿಯಾಂಕ್ ಖರ್ಗೆ ಈ ಹಿಂದೆ ಪ್ರಧಾನಿ ಮೋದಿ ಹುಟ್ಟಿನ ಬಗ್ಗೆ ಅವಹೇಳಕಾರಿಯಾಗಿ ಮಾತಾಡಿದ್ದರು ಆಗ ಎಲ್ಲಿ ಹೋಗಿದ್ರೆ ಸುಲಫಲ ಸ್ವಾಮಿಗಳೇ ? ಕೂಡಲೇ ನೀವು ಬೇಷರತ್ತಾಗಿ ಕ್ಷಮೆ ಕೇಳಿ .. ಇಲ್ಲದಿದ್ರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸುಲಫಲ ಮಠದ ಶ್ರೀ ಮಹಾಂತ ಸ್ವಾಮೀಜಿಗೆ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದು ಕಡೆ ಪ್ರತಾಪ ಸಿಂಹ ಕ್ಷಮೆ ಕೇಳಲು 15 ದಿನಗಳ ಡೆಡ್ ಲೈನ್ ನೀಡಲಾಗಿದೆ. ಕಲಬುರಗಿಯ ಸುಲಫಲ ಮಠದ ಮಹಾಂತ ಶಿವಾಚಾರ್ಯ ಶ್ರೀ ಡೆಡ್ ಲೈನ್ ನೀಡಿದ್ದಾರೆ. ಡೆಡ್ ಲೈನ್ ಒಳಗೆ ಕ್ಷಮೆ ಕೇಳದಿದ್ದರೆ ಚಪ್ಪಲಿಯಿಂದ ಹೊಡೆಯುತ್ತೇವೆ. ಮೈಸೂರಿನಲ್ಲಿರೋ ಮನೆಗೆ ಹೋಗಿ ಹೊಡೆದು ಬರ್ತೇವೆ ಎಂದು ಆಡಿದ್ದ ಮಾತುಗಳು ವೈರಲ್ ಆಗಿವೆ. ನಿನ್ನೆ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸ್ವಾಮೀಜಿ ಪ್ರತಾಪ್ ಸಿಂಹ ಮೇಲೆ ವಾಗ್ದಾಳಿ ಮಾಡುವ ಭರದಲ್ಲಿ ನಾಲಗೆ ಹರಿಬಿಟ್ಟಿದ್ದರು.
ಹ್ಯಾಕರ್ ಶ್ರೀಕಿಯ ರಣ ರೋಚಕ ಇತಿಹಾಸ
ಬಿಟ್ ಕಾಯಿನ್ (Bitcoin) ಹಗರಣಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತರ ಕಚೇರಿಯಿಂದ ಸ್ಪಷ್ಟನೆ ನೀಡಿತ್ತು. ಅನೇಕ ಅನುಮಾನಗಳಿಗೆ ಉತ್ತರ ಇಲ್ಲಿ ಸಿಗುವ ಕೆಲಸ ಮಾಡಿತ್ತು.
ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನ ಪಾರದರ್ಶಕವಾಗಿ ನಡೆಸಲಾಗಿದೆ ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗಿ ಪ್ರಕರಣದ ತನಿಖೆ ನಡೆಸಿಲ್ಲ. ಕೆ.ಜಿ.ನಗರ, ಸೈಬರ್ ಕ್ರೈಮ್, ಅಶೋಕನಗರ 3 ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಕೆ.ಜಿ.ನಗರ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಈಗಾಗಲೇ ಚಾರ್ಜಶೀಟ್ ಸಹ ಸಲ್ಲಿಸಲಾಗಿದೆ ಎಂದು ತಿಳಿಸಿತ್ತು.
ಹ್ಯಾಕರ್ ಶ್ರೀಕಿಯನ್ನು ಡ್ರಗ್ಸ್ ಕೇಸ್ ನಲ್ಲಿ ಬಂಧಿಸಲಾಗಿತ್ತು. ಇದಾದ ಮೇಲೆ ಒಂದಾದ ಮೇಲೆ ಒಂದು ವಿಚಾರಗಳು ತೆರೆದುಕೊಂಡವು. ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ ಮೇಲೆ ಹೊತ್ತಿಕೊಂಡ ಬೆಂಕಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ ಸಮರಕ್ಕೆ ವೇದಿಕೆ ಮಾಡಿಕೊಟ್ಟಿತು. ಟ್ವಿಟರ್ ನಲ್ಲಿ ಸಿದ್ದರಾಮಯ್ಯ ಮತ್ತು ಬಿಜೆಪಿ ನಡುವೆ ದೊಡ್ಡ ಯುದ್ಧವೇ ನಡೆದಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿ ವಾಕ್ ಸಮರಗಳು ನಡೆಯುತ್ತಲೇ ಇವೆ. ಪೊಲೀಸ್ ವಶದಲ್ಲಿ ಶ್ರೀಕಿ ಇದ್ದಾಗಲೇ ಬಿಟ್ ಕಾಯಿನ್ ವರ್ಗಾವಣೆಯಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿಕೊಂಡು ಬಂದಿದೆ.
"