Wildllife: ಬಸರಿಕಟ್ಟೆಗ್ರಾಮಸ್ಥರಿಗೆ ಎದುರಾಯ್ತು ಕಾಡಾನೆ ಭೀತಿ

By Kannadaprabha News  |  First Published Mar 3, 2023, 4:38 AM IST

ಬೃಹತ್‌ ಕಾಡು ಮತ್ತು ತೋಟಗಳ ಮಧ್ಯೆ ಇರುವ ತೋಟ, ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ದುರ್ಗಮ ಪ್ರದೇಶವಾದ ತಾಲೂಕಿನ ಬಸ್ರಿಕಟ್ಟೆಭಾಗದಲ್ಲಿ ಕಾಡುಕೋಣಗಳ ಹಾವಳಿಯಿಂದ ಭಯಭೀತರಾಗಿದ್ದ ಗ್ರಾಮಸ್ಥರಿಗೆ ಈಗ ದಿಢೀರ್‌ ಪ್ರತ್ಯಕ್ಷವಾದ ಕಾಡಾನೆಯ ಭೀತಿಯೂ ಆವರಿಸಿದೆ.


ಕೊಪ್ಪ (ಮಾ.3) : ಬೃಹತ್‌ ಕಾಡು ಮತ್ತು ತೋಟಗಳ ಮಧ್ಯೆ ಇರುವ ತೋಟ, ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ದುರ್ಗಮ ಪ್ರದೇಶವಾದ ತಾಲೂಕಿನ ಬಸ್ರಿಕಟ್ಟೆಭಾಗದಲ್ಲಿ ಕಾಡುಕೋಣಗಳ ಹಾವಳಿಯಿಂದ ಭಯಭೀತರಾಗಿದ್ದ ಗ್ರಾಮಸ್ಥರಿಗೆ ಈಗ ದಿಢೀರ್‌ ಪ್ರತ್ಯಕ್ಷವಾದ ಕಾಡಾನೆಯ ಭೀತಿಯೂ ಆವರಿಸಿದೆ.

ಕಳೆದ 2-3 ದಿನಗಳ ಹಿಂದೆ ಹೊರನಾಡು ಕಳಸ(Horanadu kalasa) ಭಾಗದ ಕಲ್ಕೋಡು(Kalkodu) ಬಳಿ ಕಾಣಿಸಿಕೊಂಡಿದ್ದ 3 ಆನೆಗಳಲ್ಲಿ(wild elephants) ಒಂದು ಆನೆ ಗುಂಪಿನಿಂದ ತಪ್ಪಿಸಿಕೊಂಡಿದ್ದು ಗುರುವಾರ ಬಸ್ರಿಕಟ್ಟೆಯ ಕವನಹಳ್ಳ ಭಾಗದಿಂದ ಸಮೀಪದ ಚೆನ್ನೆ ಕಲ್ಲು ರಾಧಾಕೃಷ್ಣ ಭಟ್ಟರ ತೋಟದಲ್ಲಿ ಸೇರಿಕೊಂಡಿದೆ. ವಿಷಯ ತಿಳಿದ ಕೂಡಲೇ ಶಾಸಕ ರಾಜೇಗೌಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಯಾವುದೇ ಪ್ರಾಣಹಾನಿ, ಬೆಳೆ ಹಾನಿಗಳಾಗದಂತೆ ಎಚ್ಚರವಹಿಸಿ ಆನೆ ಓಡಿಸುವ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Latest Videos

undefined

 

Wild Animal attack: ಕಾಡುಪ್ರಾಣಿಗಳ ದಾಳಿ: ಮೆಕ್ಕೆಜೋಳ ಬೆಳೆ ನಾಶ

ಆಗಸ್ಟ್‌ ತಿಂಗಳಲ್ಲಿ ಹೇರೂರು ಭಾಗದಲ್ಲಿ ಹಾವೇರಿ ಟಸ್ಕರ್‌ ಒಂಟಿ ಸಲಗದ ಹಾವಳಿ ಅತಿಯಾಗಿತ್ತು. ಈ ಸಮಯದಲ್ಲಿ ತಿಂಗಳಿಗಿಂತ ಹೆಚ್ಚು ಕಾಲ ಆನೆ ಓಡಿಸಲು ಸಾಧ್ಯ ವಾಗದೆ ಇದ್ದಾಗ ನಿಯಮದಂತೆ ಬೆಂಗಳೂರಿನ ವನ್ಯಜೀವಿ ವಿಭಾಗದ ಅಧಿಕಾರಿಗಳಿಗೆ ವಿಷಯ ತಿಳಿಸಿ ಆನೆ ಹಿಡಿಯಲು ಆದೇಶ ಕೊಡಿಸಿದ್ದೆ. ಈ ಭಾಗದಲ್ಲೂ ಕೂಡ ಆನೆ ಓಡಿಸಲು ವಿಳಂಬವಾದಲ್ಲಿ ವನ್ಯಜೀವಿ ವಿಭಾಗದ ಅಧಿಕಾರಿಗಳಿಗೆ ವಿಷಯ ತಿಳಿಸಿ ಆನೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗ್ರಾಮಸ್ಥರು ಆತಂಕ ಕ್ಕೊಳಗಾಗಬಾರದು. ಗ್ರಾಮಸ್ಥರು ಎಚ್ಚರಿಕೆಯಿಂದ ಇದ್ದು ಆನೆ ಕಂಡ ಕೂಡಲೇ ಕಲ್ಲು ಹೊಡೆಯುವುದು, ಕೇಕೆ ಹಾಕುವುದು ಮುಂತಾದ ಹುಚ್ಚಾಟಗಳಿಗೆ ಮುಂದಾಗದೆ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಅನುವು ಮಾಡಿಕೊಡಬೇಕು.

- ಶಾಸಕ ಟಿ.ಡಿ.ರಾಜೇಗೌಡ

ಭದ್ರಾ ಹಿನ್ನೀರಿನಲ್ಲಿ ಸತ್ತ ಚಿರತೆ ಪತ್ತೆ: 3 ಆರೋಪಿಗಳ ಬಂಧನ 

ಉಪರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೊಪ್ಪ, ಶೃಂಗೇರಿ, ಕಳಸ ಭಾಗದ ಸುಮಾರು 30 ಜನ ಅರಣ್ಯ ಇಲಾಖಾ ಸಿಬ್ಬಂದಿ ಬಸ್ರಿಕಟ್ಟೆಯ ಚೆನ್ನೆಕಲ್ಲು ಭಾ ಗದಲ್ಲಿ ಆನೆ ಓಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಗುಂಪಿನಿಂದ ಬೇರ್ಪಟ್ಟಸುಮಾರು 20 ವರ್ಷ ವಯಸ್ಸಿನ ಗಂಡಾನೆ ದಾರಿತಪ್ಪಿ ತೋಟದಲ್ಲಿ ಸೇರಿಕೊಂಡಿದೆ. ಮೂರ್ನಾಲ್ಕು ಬಾರಿ ರಸ್ತೆ ಬಳಿ ಬಂದ ಆನೆ ಜನರನ್ನು ಕಂಡು ಭಯಭೀತವಾಗಿ ವಾಪಾಸು ತೋಟದಲ್ಲಿ ಸೇರಿಕೊಂಡಿದೆ. ರಾತ್ರಿಯೂ ಕಾರ್ಯಾಚರಣೆ ಮುಂದುವರೆಯಲಿದ್ದು ಆನೆ ಬೇರೆ ತೋಟಗಳಿಗೆ, ಜನವಸತಿ ಪ್ರದೇಶಗಳಿಗೆ ಹೋಗದಂತೆ ಎಚ್ಚರವಹಿಸಿ ಕಾರ್ಯಾಚರಣೆ ನಡೆಯಲಿದೆ. ಗ್ರಾಮಸ್ಥರು ಗಾಬರಿ ಮತ್ತು ಆತಂಕಕ್ಕೊಳಗಾಗಬಾರದು.

- ಪ್ರವೀಣ್‌ ಕುಮಾರ್‌, ಕೊಪ್ಪ ವಲಯ ಅರಣ್ಯಾಧಿಕಾರಿ

click me!