ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಬಹಿಷ್ಕಾರದ ಹೆಚ್ಚಾಗುತ್ತಿದೆ. ಭೌಗೋಳಿಕತೆಯಲ್ಲಿ ಅರ್ಧಕರ್ಧ ಅರಣ್ಯ-ಕಾಫಿತೋಟಗಳಿಂದಲೇ ಕೂಡಿರೋ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ಚುನಾವಣೆ ಬಹಿಷ್ಕಾರದ ಕೂಗು ಜೋರಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮಾ.03): ಮಲೆನಾಡಿನಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಬಹಿಷ್ಕಾರದ ಹೆಚ್ಚಾಗುತ್ತಿದೆ. ಭೌಗೋಳಿಕತೆಯಲ್ಲಿ ಅರ್ಧಕರ್ಧ ಅರಣ್ಯ-ಕಾಫಿತೋಟಗಳಿಂದಲೇ ಕೂಡಿರೋ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ಚುನಾವಣೆ ಬಹಿಷ್ಕಾರದ ಕೂಗು ಜೋರಾಗಿದೆ. ಅದಕ್ಕೆ ಕಾರಣ ಹತ್ತಾರಿವೆ. ಜನ ನೂರು ಕಾರಣಗಳನ್ನಿಟ್ಟುಕೊಂಡು ಎಲೆಕ್ಷನ್ ಬೈಕಾಟ್‍ಗೆ ಮುಂದಾಗಿದ್ದಾರೆ.
ಮೂಲಭೂತ ಸೌಲಭ್ಯಕ್ಕೆ ಮತದಾನ ಬಹಿಷ್ಕಾರದ ಅಸ್ತ್ರ: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ರಸ್ತೆ, ನೀರು, ಸೂರು ಸೇರಿದಂತೆ ಮೂಲಭೂತ ಸೌಲಭ್ಯಗಳಿಗಾಗಿಯೇ ಮಲೆನಾಡು ಭಾಗದಲ್ಲಿ 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬಹಿಷ್ಕಾರದ ಕೂಗು ಕೇಳುತ್ತಿದೆ. ಮೂಡಿಗೆರೆ, ಕಳಸ, ಎನ್.ಆರ್.ಪುರ, ಶೃಂಗೇರಿ ಹಾಗೂ ಕೊಪ್ಪ ಕಾಫಿನಾಡ ಮಲೆನಾಡು ಭಾಗ. ಇಲ್ಲಿ ಜನವಸತಿಗಿಂತ ಅರಣ್ಯ-ಕಾಫಿತೋಟವೇ ಹೆಚ್ಚಿದೆ. ಅದೇ ಸಮಸ್ಯೆಗಳು ಅಷ್ಟೆ ಇವೆ. ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ, ಬಿದಿರುತಳ, ಮಧುಗುಂಡಿ, ದಿಣ್ಣೆಕೆರೆ. ಕಳಸ ತಾಲೂಕಿನ ಶಂಕರಕೂಡಿಗೆ, ಸಂಸೆ, ಬಸ್ತಿಗದ್ದೆ, ಮೊಬೈಲ್ ಟವರ್‍ಗಾಗಿ ಬಲಿಗೆ ಗ್ರಾಮ. ಕೊಪ್ಪ ತಾಲೂಕಿನಲ್ಲಿ ಹಾಡುಗಾರ ಗ್ರಾಮ. ಶೃಂಗೇರಿಯಲ್ಲಿ ಚಿತ್ರವಳ್ಳಿ. ಇಷ್ಟೆ. ಇಂತಹಾ ಹಳ್ಳಿಗಳು ಇನ್ನೂ ಹತ್ತಾರಿವೆ.
ಅವೈಜ್ಞಾನಿಕ ಮೀನುಗಾರಿಕೆ ವಿರುದ್ಧ ಮೀನುಗಾರರ ಆಕ್ರೋಶ: ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ
ಎಲ್ಲರ ಬೇಡಿಕೆಯೂ ಒಂದೇ. ರಸ್ತೆ, ನೀರು, ಸೂರು. ಹಾಗಾದ್ರೆ, ಸರ್ಕಾರ-ಅಧಿಕಾರಿಗಳು ,ಜನಪ್ರತಿನಿಧಿಗಳು ಇಷ್ಟು ದಿನ ಏನ್ ಮಾಡಿದ್ರು ಅನ್ನೋ ಪ್ರಶ್ನೆ ಮೂಡೋದು ಸಹಜವಾಗಿದೆ. ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ, ಬಿದಿರುತಳ, ಮಧುಗುಂಡಿ ಜನ 2019ರ ಭಾರೀ ಮಳೆಗೆ ಸರ್ಕಾರದಿಂದಲೇ ಪುನರ್ವತಿಗೊಂಡವರು. ಆದ್ರೆ, ಇಂದಿಗೂ ಅವರಿಗೆ ರಸ್ತೆ, ಚರಂಡಿ, ನೀರು, ವಿದ್ಯುತ್ ಯಾವ ಸೌಲಭ್ಯವೂ ಇಲ್ಲ. ಹಾಗಾಗಿ, ಮಲೆನಾಡು ತಾಲೂಕುಗಳ ಒಂದೊಂದು ಹಳ್ಳಿಯಲ್ಲಿ ಒಂದೊಂದು ಸಮಸ್ಯೆ. ಸರ್ಕಾರ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿ ಸುಸ್ತಾದ ಜನ ಈಗ ಕೆಲ್ಸ ಮಾಡಿ ಓಟ್ ತಗೋಳಿ ಅಂತಾ ಗ್ರಾಮಗಳ ಮುಂದೆಯೇ ಬಹಿಷ್ಕಾರ ಬ್ಯಾನರ್ ಹಾಕಿ ಸರ್ಕಾರದ ವಿರುದ್ಧ ಕಿಡಿಕಾರ್ತಿದ್ದಾರೆ. ಜಿಲ್ಲಾಡಳಿತ ನಮ್ಮ ಸ್ಪಂದನೆ ನೀಡಬೇಕೆಂದು ಗ್ರಾಮಸ್ಥ ಸವಿಂಜಯ್ ಒತ್ತಾಯಿಸಿದ್ದಾರೆ.
ಟವರ್‌ಗಾಗಿ ಮತದಾನ ಬಹಿಷ್ಕಾರ ಮಾಡಿರುವ ಗ್ರಾಮಸ್ಥರು: ಇನ್ನು ಊರಿಗೆ ಟವರ್ ಬರಲಿ, ಮೊಬೈಲ್‍ಗೆ ಓಟಿಪಿ ಬರಲಿ, ನಾವು ಬೂತಿಗೆ ಬರ್ತೀವಿ ಅಂತ ಕಳಸ ತಾಲೂಕಿನ ಬಲಿಗೆ, ಮೆಣಸಿನಹಾಡ್ಯ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜನ ಸಾರಾಸಗಟಾಗಿ ಎಲೆಕ್ಷನ್ ಬೈಕಾಟ ಮಾಡಿದ್ದಾರೆ. ಈ ಕುಗ್ರಾಮದ ಜನರ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಬಿ.ಎಸ್.ಎನ್.ಎಲ್.ಗೆ ಸರ್ಕಾರ ಹಾಲು-ತುಪ್ಪ ಬಿಟ್ಟ ಮೇಲೆ ಇಲ್ಲಿನ ಜನ ಸಂಪರ್ಕಕ್ಕೆ ಸಿಗದಂತಾಗಿದ್ದಾರೆ. ಇಲ್ಲಿನ ಜನಕ್ಕೆ ಮೊಬೈಲ್ ಟವರ್ ಕೂಡ ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದೆ. ಬ್ಯಾಂಕ್, ಪಡಿತರ ಸೇರಿದಂತೆ ಎಲ್ಲಿಗೆ ಹೋದ್ರು ಒಟಿಪಿ ಕೇಳ್ತಾರೆ. ಆದ್ರೆ, ಟವರ್ ಇಲ್ದೆ ಇವ್ರಿಗೆ ಒಟಿಪಿ ಬರ್ತಿಲ್ಲ.
4 ಸಚಿವರು ಸೇರಿ ಬಿಜೆಪಿಯ 8 ಶಾಸಕರು ಕಾಂಗ್ರೆಸ್ ಸೇರುವುದು ಖಚಿತ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಹಾಗಾಗಿ, ಇಲ್ಲಿನ ಜನ ನಾವು ಯಾವುದೇ ಕಾರಣಕ್ಕೂ ಮತಕೇಂದ್ರಕ್ಕೆ ಹೋಗಲ್ಲ. ಟವರ್ ಬಂದ್ರೆ ಹೋಗ್ತೀವಿ ಅಂತಿದ್ದಾರೆ. ಈ ಭಾಗದಲ್ಲಿ ಕಳ್ಳತನ ಕೂಡ ಹೆಚ್ಚಾಗ್ತಿದೆ. ಹೇಳೋರಿಲ್ಲ-ಕೇಳೋರಿಲ್ಲ. ಈ ಮಧ್ಯೆ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ಐದು ಕಿ.ಮೀ.ದೂರ ಹೋಗಿ ಫೋನ್ ಮಾಡಿ ಗಾಡಿ ತರಬೇಕು. ಹಾಗಾಗಿ, ನಮಗೆ ಟವರ್ ಅತ್ಯಗತ್ಯವಾಗಿದೆ. ಟವರ್ ಇಲ್ದೆ ಓಟಿಲ್ಲ ಅಂತ ವ್ಯವಸ್ಥೆ ವಿರುದ್ಧ ರೆಬಲ್ ಆಗಿದ್ದಾರೆ. ಈ ಮಧ್ಯೆ ಚಿಕ್ಕಮಗಳೂರು ತಾಲೂಕಿನ ಜನ ಕೂಡ ಹಕ್ಕುಪತ್ರ ನೀಡದೆ ಓಟು ಹಾಕಲ್ಲ ಅಂತ ಎಲೆಕ್ಷನ್ ಬೈಕಾಟ್ ಮಾಡಿದ್ದಾರೆ. ಒಟ್ಟಾರೆ, ಕಾಫಿನಾಡ ಮಲೆನಾಡು ಭಾಗದ ಹಳ್ಳಿಗಳಲ್ಲಿ ನೂರಾರು ಸಮಸ್ಯೆಗಳಿವೆ. ಹತ್ತಾರು ವರ್ಷಗಳಿಂದ ಸರ್ಕಾರ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿ, ಬೇಡಿಕೊಂಡ ರೀತಿ ಎಲ್ಲಾ ಮುಗಿದಿರೋದ್ರಿಂದ ಜನ ಅನಿವಾರ್ಯವಾಗಿ ಬಹಿಷ್ಕಾರದ ಮೊರೆ ಹೋಗಿದ್ದಾರೆ.