: ಬಾಲಕಿ ಕವನಶ್ರೀಯನ್ನು ಬಲಿ ಪಡೆದು, ಐವರ ಗಂಭೀರವಾಗಿ ಗಾಯಗೊಳಿಸಿದ್ದ ಪುಂಡ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆಯೂ ಆನೆ ಕ್ಯಾಂಪ್‌ನ ವೈದ್ಯಾಧಿಕಾರಿ ಮೇಲೂ ದಾಳಿ ಮಾಡಿದ್ದು, ಅಂತಿಮವಾಗಿ ಸಕ್ರೆಬೈಲ್‌ನಿಂದ ಬಂದಿದ್ದ ಸಾಕಾನೆಗಳ ಮುಂದೆ ನ್ಯಾಮತಿ ತಾಲೂಕು ಕೆಂಚಿಕೊಪ್ಪದ ಬಳಿ ಮಂಗಳÜವಾರ ಸೆರೆಯಾಗಿದ್ದು, ಚನ್ನಗಿರಿ-ನ್ಯಾಮತಿ- ಹೊನ್ನಾಳಿ ತಾಲೂಕಿನ ರೈತರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.
ದಾವಣಗೆರೆ (ಏ.11) : ಬಾಲಕಿ ಕವನಶ್ರೀಯನ್ನು ಬಲಿ ಪಡೆದು, ಐವರ ಗಂಭೀರವಾಗಿ ಗಾಯಗೊಳಿಸಿದ್ದ ಪುಂಡ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆಯೂ ಆನೆ ಕ್ಯಾಂಪ್‌ನ ವೈದ್ಯಾಧಿಕಾರಿ ಮೇಲೂ ದಾಳಿ ಮಾಡಿದ್ದು, ಅಂತಿಮವಾಗಿ ಸಕ್ರೆಬೈಲ್‌ನಿಂದ ಬಂದಿದ್ದ ಸಾಕಾನೆಗಳ ಮುಂದೆ ನ್ಯಾಮತಿ ತಾಲೂಕು ಕೆಂಚಿಕೊಪ್ಪದ ಬಳಿ ಮಂಗಳÜವಾರ ಸೆರೆಯಾಗಿದ್ದು, ಚನ್ನಗಿರಿ-ನ್ಯಾಮತಿ- ಹೊನ್ನಾಳಿ ತಾಲೂಕಿನ ರೈತರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಕ್ಯಾಂಪ್‌ನ ವೈದ್ಯಾಧಿಕಾರಿ ಡಾ.ವಿನಯ್ ಆನೆ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚನ್ನಗಿರಿ ತಾಲೂಕಿನಿಂದ ರಾತ್ರೋ ರಾತ್ರಿ ಕಾಣೆಯಾಗಿದ್ದ ಕಾಡಾನೆ ಸೆರೆಗೆ ಆನೆ ಹೆಜ್ಜೆ ಗುರುತು, ಲದ್ದಿಯನ್ನು ಬೆನ್ನು ಹತ್ತಿ ಹೊರಟ ಅರಣ್ಯ ಇಲಾಖೆ ಕಾರ್ಯಾಚರಣೆ ಅಧಿಕಾರಿ, ಸಿಬ್ಬಂದಿಗಳ ನೆರವಿಗೆ ಡ್ರೋಣ್ ನೆರವಿಗೆ ಬಂದಿತು. ಅಂತಿಮವಾಗಿ ಪುಂಡ ಕಾಡಾನೆ ನ್ಯಾಮತಿ ತಾ. ಕೆಂಚಿಕೊಪ್ಪದ ಬಳಿ ಇರುವುದು ಬೆಳಿಗ್ಗೆ ಸ್ಪಷ್ಟವಾಗಿದೆ.
Wildlife: ಚನ್ನಗಿರಿಯಲ್ಲಿ ಕಾಡಾನೆ ಆತಂಕ: ಗ್ರಾಮಸ್ಥರು ಎಚ್ಚರಿಕೆ ಇರುವಂತೆ ಅರಣ್ಯ ಇಲಾಖೆ ಸೂಚನೆ
ಚನ್ನಗಿರಿ ತಾಲೂಕು ಸೋಮಲಾಪುರ ಗ್ರಾಮದಲ್ಲಿ ಹೊಲದಲ್ಲಿ ತಾಯಿ, ಕುಟುಂಬದ ಜೊತೆಗೆ ಅವರೆಕಾಯಿ ಬಿಡಿಸುತ್ತಿದ್ದ ಬಾಲಕಿ ಕವನಶ್ರೀಯನ್ನು ಸೊಂಡಿಲಿನಿಂದ ಎತ್ತಿ ಹಾಕಿ, ಕೊಂದಿದ್ದ ಕಾಡಾನೆ ಮೃತಳ ತಾಯಿ, ಕಾಶೀಪುರದಲ್ಲಿ ನಾಲ್ವರು ಸೇರಿ 5 ಜನರ ಮೇಲೆ ದಾಳಿ ಮಾಡಿ, ಗಾಯಗೊಳಿಸಿತ್ತು. ನಂತರ ಅರಿಶಿನಘಟ್ಟ, ಸೂಳೆಕೆರೆ ಹಿನ್ನೀರು ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು ನಂತರ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಪುಂಡಾನೆ ಸೆರೆಗಾಗಿ ಸಕ್ರೆಬೈಲುನಿಂದ ಆನೆಗಳನ್ನು, ಮಾವುತರನ್ನು ಕರೆಸಲಾಗಿತ್ತು. ಡ್ರೋಣ್ ತಜ್ಞರ ನೆರವಿನಿಂದ ಹತ್ತು ತಂಡಗಳಾಗಿ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಅರಿವಳಿಕೆ ನೀಡಿದ ಬಳಿಕವೂ ಡಾ.ವಿನಯ್ ಮೇಲೆ ದಾಳಿ
ಕಾರ್ಯಾಚರಣೆ ವೇಳೆ ಕೆಂಚಿಕೊಪ್ಪದ ಬಳಿ ಪುಂಡಾನೆ ಇರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಇಡೀ ತಂಡ ಅತ್ತ ತೆರಳಿತು. ಡ್ರೋಣ್ ತಂಡ, ಮಾವುತರು, ಪಶು ವೈದ್ಯಾಧಿಕಾರಿ ಗಳ ತಂಡವು ಪುಂಡಾನೆಯು ಸೋಮವಾರ ರಾತ್ರಿ ಬಸವಾಪಟ್ಟಣದ ಶೃಂಗಾರಭಾಗ್ ಬಳಿ ಇದ್ದದ್ದು, ಮಂಗಳವಾರ ಬೆಳಿಗ್ಗೆ ನ್ಯಾಮತಿ ತಾ. ಕೆಂಚಿಕೊಪ್ಪದ ಸಮೀಪದ ಹನುಮಾಪುರ ಗಡಿ ಭಾಗ ಜಾಲಿ ಹೊಸೂರು ಬಳಿ ಇರುವುದನ್ನು ಕಂಡಿದೆ. ಆನೆದ ಜಾಡು ಹಿಡಿದು ಶೋಧ ಕೈಗೊಂಡ ಅರಣ್ಯಾಧಿಕಾರಿ, ಸಿಬ್ಬಂದಿ ಕಣ್ಣಿಗೆ ಕೆಂಚಿಕೊಪ್ಪದ ಬಳಿ ಆನೆ ಕಂಡು ಬಂದಿದೆ.
ಇದೇ ವೇಳೆ ಆನೆ ಸೆರೆಗೆ ಸಕ್ರೆಬೈಲು ಆನೆ ಕ್ಯಾಂಪ್‌ನ ವೈದ್ಯಾಧಿಕಾರಿ ಡಾ.ವಿನಯ್ ಬಂದೂಕಿನಿಂದ ಅರಿವಳಿಕೆ ಚುಚ್ಚುಮದ್ದು ಪ್ರಯೋಗಿಸಿದ್ದಾರೆ. ಗಜ ಪಡೆಗಳ ಜೊತೆಗೆ ಬಂದಿದ್ದ ಡಾ.ವಿನಯ್ ಅರಿವಳಿಕೆ ಚುಚ್ಚು ಮದ್ದು ನೀಡಿ, ಡಾರ್ಚ್ ಮಾಡಿದ ನಂತರ ಪುಂಡ ಸಲಗವು ನೆಲಕ್ಕುರುಳಿದ್ದರಿಂದ ಪರಿಶೀಲಿಸಲು ಡಾ.ವಿನಯ್ ಮತ್ತು ಇತರೆ ಅಧಿಕಾರಿ, ಸಿಬ್ಬಂದಿ ತೆರಳಿದ್ದಾರೆ. ಆ ಸದ್ದನ್ನು ಆಲಿಸಿದ ಪುಂಡ ಕಾಡಾನೆ ಏಕಾಏಕಿ ಎದ್ದು ನಿಂತು, ಹೂಂಕರಿಸುತ್ತಾ, ದಾಳಿ ಮಾಡಿದೆ. ಮೊದಲೇ ಪುಂಡಾನೆ ಘೀಳಿಡುತ್ತಾ ಎದ್ದು ನಿಂತಿದ್ದರಿಂದ ಗಾಬರಿಯಿಂದ ವಿನಯ್, ಸಿಬ್ಬಂದಿ ಓಡುತ್ತಿದ್ದ ವೇಳೆ ಪುಂಡಾನೆಯು ದಾಳಿ ಮಾಡಿ, ಡಾ.ವಿನಯ್ ಮೇಲೆ ದಾಳಿ ಮಾಡಿ, ಆನೆ ಸೊಂಟದ ಮೇಲೆ ಕಾಲಿಟ್ಟು, ತುಳಿಯಲು ಯತ್ನಿಸಿದೆ. ತಕ್ಷಣವೇ ಗಜಪಡೆ ಅತ್ತ ನುಗ್ಗಿ ಬಂದಿದ್ದು, ಅರಣ್ಯ ಸಿಬ್ಬಂದಿ ಏರ್‌ಗನ್‌ನಿಂದ ಫೈಯರ್ ಮಾಡಿ, ಡಾ.ವಿನಯ್ ರಕ್ಷಿಸಿ, ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ. ಗಾಬರಿಗೊಂಡ ಆನೆ ಮತ್ತೊಂದು ಕಡೆ ಓಡಿದೆ. ಸದ್ಯ ಡಾ.ವಿನಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಪುಂಡಾನೆ ಸೆರೆಗೆ ಭಾನುಮತಿ ಪ್ರಯೋಗ ವಿಫಲ
ಸಕ್ರೆಬೈಲ್ ಆನೆ ಶಿಬಿರದ ಹೆಣ್ಣಾನೆ ಭಾನುಮತಿಯನ್ನು ಕರೆ ತಂದಿದ್ದು, ಪುಂಡ ಕಾಡಾನೆ ಸೆರೆಗೆ ಭಾನುಮತಿಯನ್ನು ಮುಂದೆ ಬಿಟ್ಟು, ಹನಿಟ್ರ್ಯಾಪ್ ಮಾಡಲಾಗಿತ್ತು. ಆದರೆ, ಅದು ವಿಫಲವಾದ್ದರಿಂದ ರಾತ್ರೋರಾತ್ರಿ ಆನೆಗಳು ಸುಮಾರು 30 ಕಿಮೀ ಕ್ರಮಿಸುವ ಹಿನ್ನೆಲೆಯಲ್ಲಿ ಹೊಲ, ತೋಟ, ಊರುಗಳಿಗೆ ಆನೆ ದಾಳಿ ಮಾಡಿದರೆ ತಕ್ಷಣ ಮಾಹಿತಿ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಕಾರ್ಯಾಚರಣೆ ತಂಡಕ್ಕೆ ಪುಂಡಾನೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿತ್ತು. ಆದರೆ, ಅಂತಿಮವಾಗಿ ಆನೆ ಸೆರೆಗೆ ಅರಣ್ಯ ಇಲಾಖೆ ರಣತಂತ್ರವನ್ನೇ ಬದಲಿಸಿತು.
ಕ್ರೇನ್ ನೆರವಿನಿಂದ ಲಾರಿಗೆ ಹತ್ತಿಸಿದ ಸಿಬ್ಬಂದಿ
ಆನೆ ಸೆರೆಗೆ ಎರಡು ತಂಡ ರಚಿಸಿದ್ದು, ಜೀನಹಳ್ಳಿ, ಕೆಂಚಿಕೊಪ್ಪ ಬಳಿ ಆನೆ ಸಂಚಾರ ಮಾಡಿದ್ದನ್ನು ಕಂಡ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು ಆನೆ ಸೆರೆಗೆ ನೆರವಾಯಿತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ತಂಡವು ಬಂದೂಕಿನಿಂದ ಅರಿವಳಿಕೆ ಮದ್ದು ಪ್ರಯೋಗಿಸಿ, ಪುಂಡಾನೆ ಸೆರೆ ಹಿಡಿದ ನಂತರವಷ್ಟೇ ಮೂರೂ ತಾಲೂಕಿನ ಜನತೆ ನಿಟ್ಟಿಸಿರು ಬಿಟ್ಟಿದ್ದಾರೆ. ಕಾರ್ಯಾಚರಣೆ ನಂತರ ಸೆರೆ ಸಿಕ್ಕ ಅರಿವಳಿಕೆ ಮಂಪರಿನಲ್ಲಿದ್ದ ಪುಂಡಾನೆಯ ಕ್ರೇನ್ ನೆರವಿನಿಂದ ಲಾರಿಗೆ ಹತ್ತಿಸಿ, ಬಲವಾದ ಹಗ್ಗಗಳಿಂದ ಲಾರಿಗೆ ಬಿಗಿಯಾಗಿ ಕಟ್ಟಿ, ಸಕ್ರೆಬೈಲಿನ ಆನೆ ಶಿಬಿರಕ್ಕೆ ಕಳಿಸಲಾಯಿತು. ಆನೆ ಸೆರೆ ಹಿಡಿದ ಖುಷಿಯಲ್ಲಿ ಅರಣ್ಯಾಧಿಕಾರಿಗಳು, ಸಿಬ್ಬಂದಿ, ಮಾವುತರ ಮೊಗದಲ್ಲಿ ಸಂಭ್ರಮವಿದ್ದರೂ, ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಡಾ.ವಿನಯ್ ಆರೋಗ್ಯದ್ದೇ ಎಲ್ಲರಿಗೂ ದೊಡ್ಡ ಚಿಂತೆಯಾಗಿತ್ತು.
ದಾವಣಗೆರೆಯಲ್ಲಿ ಕಾಡಾನೆ ದಾಳಿಗೆ 16 ವರ್ಷದ ಬಾಲಕಿ ಬಲಿ: ಗ್ರಾಮಕ್ಕೆ ನುಗ್ಗಿದ ಆನೆಗಳು
ಕಾಡಾನೆ ಕಾರ್ಯಾಚರಣೆ ಹೇಗಾಯಿತು?