ಕಲಬುರಗಿ: ಶೀಘ್ರ ಫ್ಲೈಟ್‌ ಸಿಮುಲೇಷನ್‌ ಟ್ರಯಲ್‌

By Kannadaprabha News  |  First Published Apr 11, 2023, 1:46 PM IST

ವಿಮಾನಯಾನ ಪ್ರಾಧಿಕಾರದಿಂದ ಡಿಜಿಸಿಎಗೆ ಪ್ರಸ್ತಾವ, ಕೋರಿಕೆ ಪರಿಶೀಲಿಸುತ್ತಿರುವ ಡಿಜಿಸಿಎ, ರಾಜ್ಯಸಭೆ ವಿಪಕ್ಷ ನಾಯಕ ಡಾ. ಖರ್ಗೆ ಪತ್ರಕ್ಕೆ ವಿಮಾನಯಾನ ಸಚಿವರ ಉತ್ತರ, ಕಲಬುರಗಿ ಏರ್‌ಪೋರ್ಟ್‌ ನೈಟ್‌ ಲ್ಯಾಂಡಿಂಗ್‌ ಸವಲತ್ತಿನ ಸುತ್ತಮುತ್ತ ಬೆಳವಣಿಗೆ. 


ಕಲಬುರಗಿ(ಏ.11):  ಕಳೆದ ವಾರವಷ್ಟೇ ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಇಲ್ಲಿನ ರಾತ್ರಿ ಲ್ಯಾಂಡಿಂಗ್‌ ಸವಲತ್ತುಗಳ ಪರಿಶೀಲನೆ ಮಾಡಿರುವ ಭಾರತೀಯ ವಿಮಾನ ಯಾನ ಪ್ರಾಧಿಕಾರ (ಎಎಐ) ಇದೀಗ ತಾನು ಕಲೆ ಹಾಕಿರುವ ಹಾಗೂ ಕಲಬುರಗಿಯ ಏರ್ಪೋರ್ಟ್‌ನಲ್ಲಿ ಲಭ್ಯವಿರುವ ಎಲ್ಲಾ ಸವಲತ್ತುಗಳ ಬಗ್ಗೆ ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ವಿಸ್ತೃತ ವರದಿ ಸಲ್ಲಿಸಿದೆ.

ಇದರ ಜೊತೆಗೇ ಭಾರತೀಯ ವಿಮಾನ ಯಾನ ಪ್ರಾಧಿಕಾರದ ವಿಮಾನಗಳನ್ನು ಬಳಸಿ ಫ್ಲೈಟ್‌ ಸಿಮ್ಯುಲೇಷನ್‌ ಟ್ರಯಲ್‌ ನಡೆಸುವಂತೆಯೂ ಕೋರಿದೆ. ಎಎಐ ಸಲ್ಲಿಸಿರುವ ಕಲಬುರಗಿ ಏರ್ಪೋರ್ಚ್‌ ರಾತ್ರಿ ವಿಮಾನಯಾನಕ್ಕೆ ಅಗತ್ಯವಿರುವ ಸವಲತ್ತುಗಳನ್ನು ಹೊಂದಿರುವ ಬಗಗೆ ದಾಖಲೆಗಳ ಪರಿಶೀಲನೆಗೆ ಮುಂದಾಗಿರುವ ಡಿಜಿಸಿಎ ಒಮ್ಮೆ ತನ್ನ ಈ ಮಹತ್ವದ ಪರಿಶೀಲನೆ ಕಾರ್ಯ ಪೂರೈಸಿದ ನಂತರ ಎಎಐ ಏರ್‌ಕ್ರಾಫ್‌್ಟಬಳಸಿ ಫ್ಲೈಟ್‌ ಸಿಮ್ಯುಲೇಷನ್‌ ಟ್ರಯಲ್‌ಗೆ ಮುಂದಾಗಲಿದೆ ಎಂದು ವಿಮಾನ ಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

Latest Videos

undefined

ಕಲಬುರಗಿಯಲ್ಲಿ ಸತತ 2ನೇ ದಿನವೂ 40 ಡಿಗ್ರಿ ತಾಪಮಾನ..!

ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರಾಗಿರುವ, ಕಲಬುರಗಿವರೇ ಆಗಿರುವ ಡಾ. ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ತವರೂರು ಕಲಬುರಗಿಯಲ್ಲಿರೋ ವಿಮಾನ ನಿಲ್ದಾಣದಲ್ಲಿ ಕೈಗೆತ್ತಿಕೊಳ್ಳಬೇಕಾಗಿರುವ ಹಲವು ಕೆಲಸಕಾರ್ಯಗಳ ಕುರಿತಂತೆ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು.

ಡಾ. ಖರ್ಗೆಯವರ ಪತ್ರಕ್ಕೆ ವಿಸ್ತೃತ ಮಾಹಿತಿ ನೀಡಿವು ಜ್ಯೋತಿರಾದಿತ್ಯ ಸಿಂಧಿಯಾ ಕಲಬುರಗಿ ವಿಮಾನ ನಿಲಾಣದಿಂದ ಶೀಘ್ರವೇ ಫ್ಲೈಟ್‌ ಟ್ರಯಲ್‌ ನಡೆಸಿ ಇಲ್ಲಿ ರಾತ್ರಿ ಲ್ಯಾಂಡಿಂಗ್‌ಗೆ ಅನುಮಿ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ ಎಂದಿದ್ದಾರೆ.

ರನ್‌ ವೇ ನಿರ್ವಹಣೆ ಕಾಮಗಾರಿ:

635 ಮೀಚರ್‌ ಉದ್ದದ ರನ್‌ವೈ ರಿಸರ್ಫೇಸಿಂಗ್‌ ಕಾಮಗಾರಿ ಈಗಾಗಲೇ ಚಾಲ್ತಿಯಲ್ಲಿದೆ. ಇದಲ್ಲದೆ ಪಾರ್ಕಿಂಗ್‌ ಬೇ ಸೇರಿದಂತೆ ಇನ್ನುಳಿದ ಕಾಮಗಾರಿಯನ್ನು ಟೆಂಡರ್‌ ಮಾಡಲಾಗಿದ್ದು ಅಕ್ಟೋಬರ್‌ ಒಳಗಾಗಿ ಅವೆಲ್ಲ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಸಿಂಧಿಯಾ ಹೇಳಿದ್ದಾರೆ.

ಈಗಾಗಲೇ ನಿಲ್ದಾಣದಲ್ಲಿ ವಿಮಾನ ನಿಲ್ಲಲು 3 ಪಾರ್ಕಿಂಗ್‌ ಸ್ಥಳಗಳಿವೆ. ವೈಮಾನಿಕ ಸೇವೆ ಕೊಡುವ ಸಂಸ್ಥೆಗಳ ಬೇಡಿಕೆಗೆ ಅನುಗುಣವಾಗಿ ಬರುವ ದಿನಗಳಲ್ಲಿ ಇಲ್ಲಿನ ಪಾರ್ಕಿಂಗ್‌ ಸ್ಥಳಗಳ ಹೆಚ್ಚಳಕ್ಕೆ ಚಿಂತನೆ ನಡೆಸಲಾಗುತ್ತದೆ. ಇಲ್ಲಿನ ಟರ್ಮಿನಲ್‌ ಬಿಲ್ಡಿಂಗ್‌ ವಿಸ್ತರಣೆಯೂ ಸಚಿವಾಲಯದ ಪರಿಗಣನೆಯಲ್ಲಿದೆ ಎಂದು ಸಿಂಧಿಯಾ ಹೇಳಿದ್ದಾರೆ.

ಕಲಬುರಗಿ: ಮತದಾನ ಜಾಗೃತಿಗೆ ಮೊಂಬತ್ತಿ ಮೆರವಣಿಗೆ

ಕಲಬುರಗಿ ದೆಹಲಿ ನೇರ ವಿಮಾನ ಸೇವೆ:

ಕಲಬರಗಿಯಿಂದ ದೇಶದ ರಾಜಧಾನಿ ದೆಹಲಿಗೆ ನೇರ ವೈಮಾನಿಕ ಸೇವೆ ಆರಂಭಿಸುವ ಬಗ್ಗೆ ಡಾ. ಖರ್ಗೆಯವರ ಮನವಿಗೂ ಸಪಂದಿಸುರುವ ಸಚಿವ ಸಿಂಧಿಯಾ ಈ ಸೇವೆ ನೀಡುವ ವಿಮಾನಯಾನ ಂಸಸ್ಥೆಗಳ ಗಮನಕ್ಕೆ ಇದನ್ನು ತರಲಾಗುತ್ತದೆ ಎಂದಿದ್ದಾರೆ.

ಏರ್‌ ಕಾರ್ಪೋರೇಷನ್‌ ಆಕ್ಟ್ 1994ರ ಪ್ರಕಾರ ವೈಮಾನಿಕ ಸೇವೆಗಳನ್ನು ವಿಭಜಿಸಲಾಗಿದ್ದು ಸೇವೆ ನೀಡುವತ ಸಂಸ್ಥೆಯವರೇ ಪಯಾಣಿಕರ ಬೇಡಿಕೆ, ವಾಣಿಜ್ಯ ಸಂಗತಿಗಳನ್ನೆಲ್ಲ ಪರಿಶೀಲಿಸಿ ಹೊಸ ವಾಯುಮಾರ್ಗ ಸೇವೆಗಳನ್ನು ನೀಡುವ ಅಧಿಕಾರ ಹೊಂದಿದ್ದಾರೆ. ಅದರಂತೆಯೇ ಕಲಬುರಗಿ- ದೆಹಲಿ ಹೊಸ ಮಾರ್ಗದ ಬೇಡಿಕೆಯ ಬಗ್ಗೆಯೂ ವಾಯುಯಾನ ಸಂಸ್ಥೆಯವರೇ ನಿರ್ಧರಿಸಲಿದ್ದಾರೆಂದು ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟಪಡಿಸಿದ್ದಾರೆ.

click me!