Chamarajanagara ಜಿಲ್ಲೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ

By Suvarna News  |  First Published Jun 24, 2022, 7:19 PM IST
  • ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಕೆರೆ ಬಳಿ ಒಂಟಿ ಸಲಗ ಪ್ರತ್ಯಕ್ಷ.
  • ಗ್ರಾಮದ ತಿಲುಗನ ಕೆರೆಯ ಬಳಿ ಕಾಣಿಸಿಕೊಂಡ ಆನೆ. 
  • ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಆಗಮನ. 
  • ಕಳೆದ ಮೂರು ದಿನಗಳಿಂದ ಚಾಮರಾಜನಗರ ಸುತ್ತಮುತ್ತ ಅಡ್ಡಾಡುತ್ತಿರುವ ಕಾಡಾನೆ..

ವರದಿ: ಪುಟ್ಟರಾಜು. ಆರ್.ಸಿ.  ಏಷ್ಯಾನೆಟ್  ಸುವರ್ಣ ನ್ಯೂಸ್ 

ಚಾಮರಾಜನಗರ (ಜೂನ್ 24): ಆ ಆನೆ ಕಳೆದ ಮೂರು ದಿನಗಳಿಂದ ಊರೂರು ಸುತ್ತುತ್ತಿದೆ. ದಾರಿಯಲ್ಲಿ ಸಿಕ್ಕ ಸಿಕ್ಕ ಬಾಳೆ, ಜೋಳ, ಕಬ್ಬು, ಹಾಗು ಆನೆ ನೆಡೆದದ್ದೆ ದಾರಿ ಅನ್ನೋ ಹಾಗೆ ದಾರಿಗೆ ಅಡ್ಡಲಾಗಿ ಸಿಗುವ ಕಂಬ ಕಲ್ಲುಗಳು ತಂತಿ, ಬೇಲಿ ಹೀಗೆ ಹಾಳು ಮಾಡುತ್ತಾ ಒಮ್ಮೆ ಈ ಊರಲ್ಲಿ ಪ್ರತ್ಯಕ್ಷವಾದ್ರೆ, ಬೆಳಗಾದ್ರೆ ಮತ್ತೊಂದು ಊರಲ್ಲಿ ಕಾಣಿಸಿಕೊಳ್ಳುತ್ತಿದೆ. ಸದ್ಯ ಆನೆ ಕಣ್ಣಮುಚ್ಚಾಲೆ ಆಟಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸುಸ್ತು ಹೊಡೆದೋಗಿದ್ದಾರೆ. ಆನೆ ಕಾಡಿಗಟ್ಟಲ್ಲು ಇನ್ನಿಲ್ಲದ ಸರ್ಕಸ್ ಮಾಡ್ತಿದ್ದಾರೆ..

Tap to resize

Latest Videos

undefined

ಹೊರಗೆ ಬಂದು ಪೋಸ್ ಕೊಟ್ಟು ಪೊದೆಗೋದ್ರೆ ಜಪ್ಪಯ್ಯ ಅಂದ್ರು ಆಚೆ ಬರ್ತಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳಂತು ನೀನಾ ನಾವ ಅಂತ ಟಿಕಾಣಿ ಹೂಡಿದ್ದಾರೆ... ಹೌದು, ಗಜರಾಜ ಕಳೆದುಮೂರು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿಗಳ ಕಣ್ಣಿಗೆ ನಿದ್ದೆಕೊಟ್ಟಿಲ್ಲ. ಕಳೆದ ಮೂರು ದಿನಗಳ ಹಿಂದ ಚಾಮರಾಜನಗರ ತಾಲೂಕಿನ ಬೂದಿತಿಟ್ಟು ಗ್ರಾಮದ ಬೀದಿಗಳಲ್ಲಿ ಸಂಚರಿಸಿ ನಂತರ ಹಲವಾರು ಗ್ರಾಮಗಳು ಹಾಗು ಜಮೀನುಗಳಿಗೆ  ನುಗ್ಗಿ ಚಾಮರಾಜನಗರದ ಮೆಡಿಕಲ್ ಕಾಲೇಜು ಬಳಿ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿದ್ದ ಒಂಟಿ ಸಲಗ ಇದೀಗಾ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯ ಕೆರೆಯ ಪೊದೆಯಲ್ಲಿ ಅವಿತು ಕುಳಿತಿದ್ದಾನೆ.

CHAMARAJNAGARA; ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗಾಗಿ ರೈತ ಸ್ನೇಹಿ ಆ್ಯಪ್

ಕಳೆದ ಮೂರು ದಿನಗಳ ಹಿಂದೆ ಚಾಮರಾಜನಗರ ಬೂದಿತಿಟ್ಟು ಗ್ರಾಮ, ಹಾಗೂ ದೊಡ್ಡಮೋಳೆ ಗ್ರಾಮದ ಜಮೀನುಗಳಲ್ಲಿ ಓಡಾಟ ನಡೆಸಿದೆ. ಬಳಿಕ ನಿನ್ನೆ ಸಂಜೆ ಚಾಮರಾಜನಗರ ಮೇಡಿಕಲ್ ಕಾಲೇಜಿನ ಗುಡ್ಡದ ಬಳಿ ಕಾಣಿಸಿಕೊಂಡ ಆನೆ, ನಂತರ ಬೆಳಗಾಗೋವಷ್ಟರಲ್ಲಿ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ತಿಲುಗನಕೆರೆಯಲ್ಲಿ ಬೀಡು ಬಿಟ್ಟಿದೆ. ತೆರಕಣಾಂಬಿ ಊರಿನ ಸಮೀಪವೆ ಕೆರೆ ಇರುವುದರಿಂದ ಕ್ಷಣಾರ್ಧದಲ್ಲಿ ಊರಿನವರಿಗೆಲ್ಲ ಆನೆ ಇಲ್ಲಿರೋದ ಗೊತ್ತಾಗಿ ಆನೆ ನೋಡಲು ಜನರು ಮುಗಿಬಿದ್ದಿದ್ದಾರೆ. ಸದ್ಯ ಆನೆ ಕಾರ್ಯಚರಣೆ ಮಾಡಲು ಸಮಸ್ಯೆಯಾಗಿದ್ದು,ಜಮೀನುಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರ ಮೇಲೆ ದಾಳಿ ಮಾಡುವ ಆತಂಕವು ಇದೆ.ಇದ್ರಿಂದ ರಾತ್ರಿ ವೇಳೆ ಕಾರ್ಯಚರಣೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿಗಳು ಮುಂದಾಗಿದ್ದಾರೆ.

ಇನ್ನು ಕಳೆದ ಮೂರು ದಿನಗಳಿಂದ ಊರೂರಾ ಮೇಲೆ ಓಡಾಟ ನಡೆಸಿದ್ರು, ಸಣ್ಣಪುಟ್ಟ ಹಾನಿ ಮಾಡಿರುವುದು ಬಿಟ್ರೆ  ಆನೆ ಯಾರಿಗು ಏನು ತೊಂದರೆ ಕೊಟ್ಟಿಲ್ಲ. ಆದರು ಅದು ಆನೆ ಯಾವ ಸಮಯದಲ್ಲಿ ಏನಾದರು ಹಾಗಬಹುದು, ಜಮೀನಿನಲ್ಲಿ ಕೆಲಸ ಮಾಡುವ ರೈತರು ಜೀವ ಕೈಯಲ್ಲಿ ಹಿಡಿದು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ. ತೆರಕಣಾಂಬಿಯ  ಜನ ವಸತಿ  ಪ್ರದೇಶದ ಪಕ್ಕದಲ್ಲೆ ಇರುವ ಮಾರುಕಟ್ಟೆ ಸಮೀಪದ ಕೆರೆಯಲ್ಲೆ ಬಿಡು ಬಿಟ್ಟಿದ್ದು ಜನರು ಭಯ ಬೀತರಾಗಿದ್ದಾರೆ.    ಆದ್ರೆ ಆನೆ ಕಳೆದ ಮೂರು ದಿನಗಳ ಕಾಲ ಓಡಾಡಲು ಯಾಕೆ ಬಿಟ್ಟರು, ತಕ್ಷಣ ಕಾಡಿಗಟ್ಟಿದ್ದರೆ ಈ ಆತಂಕ ಇರುತ್ತಿರಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳು ನಿರ್ಲಕ್ಷ್ಯದಿಂದ ಆನೆ ಊರೂರು ಸುತ್ತುತ್ತಿದೆ. ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಕಳೆದ ವಾರ ರೈತನೊಬ್ಬ ಜೀವ ಕಳೆದುಕೊಂಡಿದ್ದಾನೆ ಅಂತ ಸ್ಥಳಿಯ ರೈತ ಮುಖಂಡರು ಆರೋಪಿಸುತ್ತಿದ್ದಾರೆ.

Chikkamagaluru; 30 ವರ್ಷಗಳ ದೀರ್ಘಕಾಲದ ಸಮಸ್ಯೆಗೆ ಕೇವಲ 7 ದಿನಗಳಲ್ಲಿ ಪರಿಹಾರ!

 ಸದ್ಯ ಆನೆ ತೆರಕಣಾಂಬಿ ಕೆರೆಯಲ್ಲಿ ಬಿಡು ಬಿಟ್ಟಿದ್ದು ಪ್ರಶಾಂತವಾಗಿ ನಿಶ್ಯಬ್ದದಿಂದ ಕೊಡಿರುವ ಕೆರೆಯ ಪಕ್ಕ ಆನೆಗೆ ಬೇಕಾದ ಆಹಾರ ಸಿಗುತ್ತಿರುವುದರಿಂದ ಆಹಾರ ಸೇವಿಸಿ ಕೆರೆ  ನೀರು ಕುಡಿದು ಅಲ್ಲೆ ಬೀಡು ಬಿಟ್ಟಿದ್ದು ಹೊರಗೆ ಬರುವುದು ನೀರು ಕುಡಿದು ಮತ್ತೆ ಒಳಗೆ ಹೋಗುವುದು ಹೀಗೆ   ಕಣ್ಣಮುಚ್ಚಾಲೆ ಆಟವಾಡುತ್ತಿದ್ದು, ಆನೆಯಿಂದ ಅನಾಹುತ ಸಂಭವಿಸುವುದಕ್ಕು ಮುನ್ನವೆ ಆನೆಯನ್ನ  ಕಾಡಿಗಟ್ಟಬೇಕಿದೆ. ಇಲ್ಲದಿದ್ದರೆ ಅನಾಹುತ ಸಂಭವಿಸುವ ಆತಂಕ ಇರೋದು ಸುಳ್ಳಲ್ಲ.

click me!