ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಸಮೀಪದಲ್ಲಿರುವ ಕನ್ನಡ ಮಠದ ಕಾಫಿ ತೋಟಕ್ಕೆ ನುಗ್ಗಿರುವ ಕಾಡಾನೆ ಅಲ್ಲಿನ ಕೆರೆಯಲ್ಲಿ ನೀರು ಕುಡಿಯಲು ಇಳಿದಿದೆ. ಆದರೆ ಮೇಲೆ ಬರಲಾರದೆ ನೀರಿನಲ್ಲಿಯೇ ಸಿಲುಕಿ ಸಾವನ್ನಪ್ಪಿದೆ.
ಕೊಡಗು(ಆ.29): ನೀರು ಕುಡಿಯಲು ಹೋದ ಕಾಡಾನೆಯೊಂದು ನೀರಿನಲ್ಲಿಯೇ ಸಿಲುಕಿ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಕನ್ನಡಮಠದ ಕಾಫಿ ತೋಟದ ಕೆರೆಯಲ್ಲಿ ಇಂದು(ಗುರುವಾರ) ನಡೆದಿದೆ.
ತಾಲ್ಲೂಕಿನ ಅಮ್ಮತ್ತಿ ಸಮೀಪದಲ್ಲಿರುವ ಕನ್ನಡ ಮಠದ ಕಾಫಿ ತೋಟಕ್ಕೆ ನುಗ್ಗಿರುವ ಕಾಡಾನೆ ಅಲ್ಲಿನ ಕೆರೆಯಲ್ಲಿ ನೀರು ಕುಡಿಯಲು ಇಳಿದಿದೆ. ಆದರೆ ಮೇಲೆ ಬರಲಾರದೆ ನೀರಿನಲ್ಲಿಯೇ ಸಿಲುಕಿ ಸಾವನ್ನಪ್ಪಿದೆ.
ಕಾಡಾನೆ ಹಾವಳಿ ಹೆಚ್ಚಳ : ಬಂಡೀಪುರಕ್ಕೆ ಎಲಿಫೆಂಟ್ ಟಾಸ್ಕ್ ಫೋರ್ಸ್!
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಆನೆಯ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಆನೆಯ ಕಳೇಬರಕ್ಕೆ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಿದ್ದಾರೆ.