ಹುಬ್ಬಳ್ಳಿಯ ಬೈರಿದೇವರಕೊಪ್ಪ ಬಳಿ ಘಟನೆ ನಡೆದಿದೆ. BRTS ಮೈಮೆಲೆ ಬಂತು ಎಂಬ ಕಾರಣಕ್ಕೆ ಬೈರಿಕೊಪ್ಪದ ಮಣಿಕಂಠ ಗದಗಿನ ಎಂಬ ಯುವಕ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಮಹಾಂತೇಶ ಗುರಿಕಾರ ಹಲ್ಲೆಗೊಳಗಾಗಿ ಬಸ್ ಚಾಲಕರಾಗಿದ್ದಾರೆ.
ಹುಬ್ಬಳ್ಳಿ(ಆ.29): ಚಿಗರಿ ಬಸ್ ಚಾಲಕನ ಮೇಲೆ ಯುವಕನೋರ್ವ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಇಂದು(ಗುರುವಾರ) ನಗರದಲ್ಲಿ ನಡೆದಿದೆ.
ಹುಬ್ಬಳ್ಳಿಯ ಬೈರಿದೇವರಕೊಪ್ಪ ಬಳಿ ಘಟನೆ ನಡೆದಿದೆ. BRTS ಮೈಮೆಲೆ ಬಂತು ಎಂಬ ಕಾರಣಕ್ಕೆ ಬೈರಿಕೊಪ್ಪದ ಮಣಿಕಂಠ ಗದಗಿನ ಎಂಬ ಯುವಕ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಮಹಾಂತೇಶ ಗುರಿಕಾರ ಹಲ್ಲೆಗೊಳಗಾಗಿ ಬಸ್ ಚಾಲಕರಾಗಿದ್ದಾರೆ.
ಕೋಚಿಂಗ್‌ಗೆ ಬಂದ ಬಾಲಕಿಗೆ ಲೈಂಗಿಕ ಕಿರುಕುಳ: ಶಿಕ್ಷಕನಿಗೆ ರಕ್ತ ಬರುವಂತೆ ಥಳಿಸಿದ ಜನ
ರಸ್ತೆ ದಾಟುವಾಗ ಚಿಗರಿ ಬಸ್‌ಗೆ ಯುವಕ ಅಡ್ಡ ಬಂದಿದ್ದನು. ಸೈಡ್‌ಗೆ ಹೋಗು ಎಂದಿದ್ದಕ್ಕೆ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಹಣೆಗೆ ತೀವ್ರ ಪೆಟ್ಟಾಗಿ ಚಾಲಕನಿಗೆ ರಕ್ತಸ್ರಾವವಾಗಿದೆ.
ಸಾರ್ವಜನಿಕರು, ಇತರೆ ಚಾಲಕರು ಸೇರಿ ಯುವಕನನ್ನು ಹಿಡಿದು ನವನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ರಕ್ತಸ್ರಾವವಾಗುತ್ತಿದ್ದರೂ ಚಾಲಕ ಬಸ್ ಚಾಲನೆ ಮಾಡುತ್ತ ಠಾಣೆಗೆ ಒಯ್ದಿದ್ದಾನೆ. ನಂತರ ಕಿಮ್ಸ್ ಆಸ್ಪತ್ರೆಯಲ್ಲಿ ಬಸ್ ಚಾಲಕನಿಗೆ ಚಿಕಿತ್ಸೆ ಕೊಡಿಸಲಾಗಿದೆ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.