ಗಂಡನನ್ನು ಹೆಂಡತಿಯೆ ಕೊಂದು ಮಲಗಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮೃತ ದೇಹದ ಮೇಲೆಲ್ಲಾ ಇದ್ದವು ಗಾಯದ ಗುರುತಗಳು
ಕಡೂರು (ನ.24): ಹೆಂಡತಿಯೇ ಇತರರೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿರುವ ಘಟನೆ ತಾಲೂಕು ಸಖರಾಯಪಟ್ಟಣದ ದೊಡ್ಡಹಟ್ಟಿಗ್ರಾಮದಿಂದ ವರದಿಯಾಗಿದೆ.
ಗಾರೆ ಕೆಲಸಗಾರ ಪ್ರದೀಪ ಮೃತಪಟ್ಟವ್ಯಕ್ತಿ. ದೊಡ್ಡಹಟ್ಟಿಯ ಗ್ರಾಮದ ಹೂವಿನ ವ್ಯಾಪಾರಿ ರಂಗನಾಥ ಎಂಬುವರ ಮನೆಯಲ್ಲಿ ಪ್ರದೀಪ ಮತ್ತು ಆತನ ಹೆಂಡತಿ ರಾಗಿಣಿ ಮಕ್ಕಳೊಂದಿಗೆ 2 ವರ್ಷದಿಂದ ವಾಸವಾಗಿದ್ದರು. ನ.23ರಂದು ಬೆಳಗ್ಗೆ 8-30 ಗಂಟೆಗೆ ಪ್ರದೀಪ ಮೃತಪಟ್ಟಿದ್ದನು. ಮಂಚದ ಮೇಲೆ ಪ್ರದೀಪನು ಅಂಗಾತವಾಗಿ ಮಲಗಿದ್ದ ಸ್ಥಿತಿಯಲ್ಲಿದ್ದ. ಆತನ ಕಣ್ಣುಗಳ ರಪ್ಪೆಗಳು ಇರಲಿಲ್ಲ, ಕುತ್ತಿಗೆಯಲ್ಲಿ ಕಪ್ಪು ಗಾಯದ ಗುರುತು, ಮುಖದ ಮೂಗಿನ ಮತ್ತು ಕೈ ಬಳಿ ಗಾಯದ ಗುರುತುಗಳು ಕಂಡುಬಂದಿದೆ.
ವೋಟರ್ ಐಡಿಯಿಂದ ಬಯಲಾಯ್ತು ಆ ಕೊಲೆ ರಹಸ್ಯ
ಪ್ರದೀಪ ಮತ್ತು ರಾಗಿಣಿ ದಂಪತಿ ಆಗಾಗ್ಗೆ ಗಲಾಟೆ ಮಾಡಿಕೊಳ್ಳುತ್ತಿದ್ದುರ. 22ರ ಭಾನುವಾರ ರಾತ್ರಿ 7-30 ಗಂಟೆಗೆ ಪ್ರದೀಪನು ಮನೆಗೆ ಬಂದಿದ್ದು, ರಾತ್ರಿ ಸಹ ಗಲಾಟೆ ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ರಾಗಿಣಿ ಮತ್ತು ಇತರರು ಸೇರಿ ಯಾವುದೋ ಕಾರಣಕ್ಕೆ ಪ್ರದೀಪನನ್ನು ರಾತ್ರಿ ಕೊಲೆ ಮಾಡಿರುವ ಸಾಧ್ಯತೆ ಇದೆ.
ರಾಗಿಣಿ ಮತ್ತು ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಖರಾಯಪಟ್ಟಣದ ಗ್ರಾಪಂ ಸದಸ್ಯ ಎಸ್.ಆರ್.ಯೋಗೀಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಪ್ರದೀಪನ ಹೆಂಡತಿ ರಾಗಿಣಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.