ನೀವು ಬೇಸರಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಅನಿತಾ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಅವರು ಭರವಸೆ ನೀಡಿದ್ದು ಯಾರಿಗೆ
ರಾಮನಗರ (ನ.24): ಕ್ಷೇತ್ರ ವ್ಯಾಪ್ತಿಯ ಮಾಯಗಾನಹಳ್ಳಿ ಹಾಗೂ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ ಶಾಸಕಿ ಅನಿತಾ ಕುಮಾರಸ್ವಾಮಿರವರು ಅಧಿಕಾರಿಗಳೊಂದಿಗೆ ಪ್ರವಾಸ ನಡೆಸಿ ಜನರ ಕುಂದುಕೊರತೆಗಳನ್ನು ವಿಚಾರಿಸಿ, ಅಹವಾಲು ಸ್ವೀಕರಿಸಿದರು.
ಗ್ರಾಪಂನ ಕೆಂಪನಹಳ್ಳಿ ಗ್ರಾಮದಿಂದ ಪ್ರವಾಸ ಆರಂಭಿಸಿದ ಅನಿತಾರವರು, ಮಧ್ಯಾಹ್ನದವರೆಗೆ ಕೆಂಪನಯ್ಯನದೊಡ್ಡಿ, ಮಾಯಗಾನಹಳ್ಳಿ, ಧಾರಾಪುರ, ಕೇತೋಹಳ್ಳಿ, ಸಂಗಬಸವನದೊಡ್ಡಿ, ಬಸವನಪುರ, ಅರಳೀಮರದೊಡ್ಡಿ, ಗಂಗರಾಜನಹಳ್ಳಿ, ರಾಂಪುರ, ಗೋಪಾಲಪುರ, ಮಾದಾಪುರ ಹಾಗೂ ಶಿವನೇಗೌಡದೊಡ್ಡಿಗೆ ಭೇಟಿ ನೀಡಿದರು.
undefined
ಆನಂತರ ಮಧ್ಯಾಹ್ನ ಸುಗ್ಗನಹಳ್ಳಿ ಗ್ರಾಪಂ ವ್ಯಾಪ್ತಿಯ ಸುಗ್ಗನಹಳ್ಳಿ, ಕಲಿಕಲ್ಲುದೊಡ್ಡಿ, ಮಾರೇಗೌಡನದೊಡ್ಡಿ, ಚನ್ನಮಾರೇಗೌಡನದೊಡ್ಡಿ, ಬೊಮ್ಮಚನಹಳ್ಳಿ, ಕಟಮಾನದೊಡ್ಡಿ, ಕಗ್ಗಲಹಳ್ಳಿ, ಸಿದ್ದಯ್ಯನದೊಡ್ಡಿ, ಹಾಗಲಹಳ್ಳಿ, ಗದಗಯ್ಯನದೊಡ್ಡಿ ಗ್ರಾಮಗಳಿಗೆ ಅನಿತಾರವರು ಭೇಟಿ ನೀಡಿ ಜನರಿಂದ ಅಹವಾಲು ಆಲಿಸಿದರು.
ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅನಿತಾರವರು, ಹಳ್ಳಿ ಹಳ್ಳಿಗೂ ಭೇಟಿ ನೀಡಿ ಯಾವ್ಯಾವ ಕೆಲಸ ಆಗಿದೆ. ಯಾವ ಕೆಲಸ ಆಗಬೇಕೆಂಬದು ಕೇಳಿ ತಿಳಿದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಅನಾರೋಗ್ಯದ ಬಗ್ಗೆ ಹೇಳಿದ ಅನಿತಾ ಕುಮಾರಸ್ವಾಮಿ
ಆರ್‌ಡಿಪಿಆರ್‌ನಿಂದ ಗ್ರಾಮೀಣಾಭಿವೃದ್ಧಿಗೆ ಸುಮಾರು 15 ಕೋಟಿ ರುಪಾಯಿ, ಲೋಕೋಪಯೋಗಿ ಇಲಾಖೆಗೆ ಸಾಕಷ್ಟುಅನುದಾನ ಬಂದಿದ್ದು, ಕೆಲಸ ಕಾರ್ಯಗಳು ನಡೆಯುತ್ತಿವೆ. ಡಿಸೆಂಬರ್‌ನಲ್ಲೂ ಅನುದಾನ ಬಿಡುಗಡೆ ಆಗಲಿದೆ. ಕ್ಷೇತ್ರದಲ್ಲಿ ಏನೇ ಬಾಕಿ ಕೆಲಸಗಳಿದ್ದರೂ ಅವುಗಳನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಕ್ಷೇತ್ರದ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರುತ್ತೇನೆ. ಕಾರ್ಯಕರ್ತರು ಬೇಸರಪಟ್ಟುಕೊಳ್ಳುವುದು ಬೇಡ. ಅವರ ಸಮಸ್ಯೆಗಳಿಗೆ ನಾನು, ನನ್ನ ಮಗ ನಿಖಿಲ್ ಹಾಗೂ ಕುಮಾರಸ್ವಾಮಿ ಸ್ಪಂದಿಸುತ್ತೇವೆ. ಕಾರ್ಯಕರ್ತರೊಂದಿಗೆ ನಾವು ಇದ್ದೇ ಇದ್ದೇವೆ. ನಮ್ಮ ಜವಾಬ್ದಾರಿ ಕೂಡ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ಮಾಯಗಾನಹಳ್ಳಿ ಉಪಾಧ್ಯಕ್ಷ ಸತೀಶ್, ತಾಪಂ ಮಾಜಿ ಸದಸ್ಯ ಶಂಕರಪ್ಪ, ಅಜಯ್ ಗೌಡ, ಜಯಕುಮಾರ್, ಕರೀಂ, ಯೋಗೇಶ್, ಗುತ್ತಿಗೆದಾರ ಪ್ರಕಾಶ್, ಮತ್ತಿತರರು ಹಾಜರಿದ್ದರು