ಪತಿ ಅಗಲಿದ ನೋವು ಸಹಿಸಲಾಗದೆ ಮಡದಿ ಕೂಡ ಸಾವು: ಸಾವಿನಲ್ಲೂ ಒಂದಾದ ಆದರ್ಶ ದಂಪತಿ

Kannadaprabha News   | Asianet News
Published : Sep 28, 2020, 11:00 AM IST
ಪತಿ ಅಗಲಿದ ನೋವು ಸಹಿಸಲಾಗದೆ ಮಡದಿ ಕೂಡ ಸಾವು: ಸಾವಿನಲ್ಲೂ ಒಂದಾದ ಆದರ್ಶ ದಂಪತಿ

ಸಾರಾಂಶ

ಗಂಡನ ಶವಸಂಸ್ಕಾರ ಮುಗಿಸಿ ಮನೆಗೆ ಮರಳುವ ಸಮಯಕ್ಕೆ ಅವರ ಪತ್ನಿ ಕೂಡ ಹೃದಯಾಘಾತದಿಂದ ಸಾವು| ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ನಡೆದ ಘಟನೆ| ಸಾವಿನಲ್ಲೂ ಒಂದಾದ ಫರಿದ್ಧೀನ್‌ ಇಮಾಮಸಾಬ್‌ ಪಠಾಣ್‌ ಹಾಗೂ ಹುಸೇನಬಿ ಫರಿದ್ಧೀನ್‌ ಪಠಾಣ್‌| 

ಕುಂದಗೋಳ(ಸೆ.28): ಸತಿ ಪತಿಗಳಿಬ್ಬರೂ ಸಾವಿನಲ್ಲೂ ಒಂದಾದ ಅಪರೂಪದ, ಭಾವುಕ ಘಟನೆಯೊಂದು ಕುಂದಗೋಳ ಪಟ್ಟಣದಲ್ಲಿ ಭಾನುವಾರ ನಡೆದಿದೆ. ಪತಿ ಅಗಲಿದ ನೋವು ಸಹಿಸಲಾಗದೆ ವೃದ್ಧ ಮಡದಿ ತಾನೂ ಸಹ ಪತಿ ಮೃತರಾದ 10 ಗಂಟೆಯೊಳಗೆ ಇಹಲೋಕ ತ್ಯಜಿಸಿದ್ದಾರೆ. ಇಬ್ಬರೂ ವೃದ್ಧರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ವೃತ್ತಿಯಲ್ಲಿ ದರ್ಜಿಯಾಗಿದ್ದ ಫರಿದ್ಧೀನ್‌ ಇಮಾಮಸಾಬ್‌ ಪಠಾಣ್‌(74) ಎಂಬವರು ಭಾನುವಾರ ಬೆಳಗ್ಗೆ 6.30ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಟುಂಬಸ್ಥರು, ಸಂಬಂಧಿಗಳು ಅವರ ಶವಸಂಸ್ಕಾರ ಮುಗಿಸಿ ಮನೆಗೆ ಮರಳುವ ಸಮಯಕ್ಕೆ ಅವರ ಪತ್ನಿ ಹುಸೇನಬಿ ಫರಿದ್ಧೀನ್‌ ಪಠಾಣ್‌(70) ಪತಿಯ ಸಾವಿನ ದುಃಖ ತಾಳಲಾರದೆ ಸಂಜೆ 4 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ಲಾಸ್ಟಿಕ್‌ ಮುಕ್ತ

ಈ ಮೂಲಕ ಸಾವಿನಲ್ಲೂ ದಂಪತಿಗಳು ಒಂದಾಗಿದ್ದಾರೆ. ತಂದೆ- ತಾಯಿ ಇಬ್ಬರನ್ನು ಒಂದೇ ದಿನ ಕಳೆದುಕೊಂಡ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು. ಈ ದಂಪತಿಗಳಿಗೆ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC