ಮಂಡ್ಯದಲ್ಲಿ ಬಿರುಸಿನ ರಾಜಕೀಯ : ಜೆಡಿಎಸ್ ಸೇರಿದ, ಕೆಂಪೇಗೌಡ, ಕೃಷ್ಣ

By Kannadaprabha NewsFirst Published Sep 28, 2020, 10:58 AM IST
Highlights

ಮಂಡ್ಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು ಪಕ್ಷಾಂತರ ಪರ್ವಗಳು ಜೋರಾಗಿ ನಡೆಯುತ್ತಿದೆ. ಜೆಡಿಎಸ್‌ನತ್ತ ಕೆಲ ಮುಖಂಡರು ಮುಖ ಮಾಡಿದ್ದಾರೆ

ಕೆ.ಆರ್ ಪೇಟೆ (ಸೆ.28): ತಾಲೂಕಿನಲ್ಲಿ ಟಿಎಪಿಸಿಎಂಎಸ್ ಚುನಾವಣೆ ಆರಂಭಗೊಳ್ಳುತ್ತಿದ್ದಂತೆ ಪಕ್ಷಾಂತರ ಪರ್ವವೂ ಕೂಡ ಜೋರಾಗಿದೆ.

ತಾಲೂಕಿನ ಹರಳಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಸಂತಪುರ ಕೆಂಪೇಗೌಡ, ಶೀಳನೆರೆ ಗ್ರಾಂ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ತಮ್ಮ ಬೆಂಬಲಿಗರೊಂದಿಗೆ  ಕಾಂಗ್ರೆಸ್ ತೊರೆದ ಜೆಡಿಎಸ್ ಗೆ ಸೇರ್ಪಡೆಗೊಂಡರು. 

ಜಿ ಪಂ ಸದಸ್ಯ ಎಚ್ ಟಿ ಮಂಜು ತಮ್ಮ ನಿವಾಸದಲ್ಲಿ ಮಾಲಾಪರ್ಣೆ ಮಾಡಿ ಮುಖಂಡರು ಪಕ್ಷಕ್ಕೆ ಸ್ವಾಗತಿಸಿದರು. 

ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದ ಜೆಡಿಎಸ್‌ ನಾಯಕ

ಈ ವೇಳೆ ಮಾಯನಾಡಿದ ವಸಂತಪುರ ಕೆಂಪೇಗೌಡರು ಕ್ಷೇತ್ರದಲ್ಲಿ  ಕಾಂಗ್ರೆಸ್  ಪಕ್ಷದ ಕಾರ್ಯಕರ್ತರಿಗೆ  ಉತ್ಸಾಹ ತುಂಬುವಲ್ಲಿ ಪಕ್ಷದ ನಾಯಕರು ವಿಫಲರಾಗಿದ್ದಾರೆ ಎಂದು ದೂರಿದರು. 

ಪ್ರಸ್ತುತ ಕಾಂಗ್ರೆಸ್ ಆಡಳಿತ ಇದ್ದರೂ ನಾಮಪತ್ರ ಸಲ್ಲಿಸಿದ್ದ ಕೈ ಬೆಂಬಲಿಗರನ್ನು ಕಣದಿಂದ ಹಿಂದೆ ಸರಿಸುವ ಮೂಲಕ ನಾಯಕರು ಪಲಾಯನ ಮಾಡಿ ಕಾರ್ತಕರ್ತರನ್ನು ಅಪಮಾನಿಸಿದ್ದಾರೆ ಎಂದು ಕಿಡಿ ಕಾರಿದರು. 

ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಚುನಾವಣಾ ಕಣದಿಂದಲೇ ಹಿಂದೆ ಸರಿಯುವುದಾದರೆ ನಾವು ಯಾರನ್ನು ನಂಬಿ ಪಕ್ಷದಲ್ಲಿರಬೇಕು ಎಂದರು.

click me!