ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯು ಹೃದಯಾಘಾತದಿಂದ ಸಾವು| ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಘಟನೆ| ಮಾರುತಿ ಮುಖೆ ಹಾಗೂ ಕಮಲಮ್ಮ ಮೃತಪಟ್ಟ ವೃದ್ಧ ದಂಪತಿ| ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ ದಂಪತಿ|
ಗಂಗಾವತಿ(ಜು.31): ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ 1 ನೇ ವಾರ್ಡಿನಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಪಂಪಾನಗರದ 75 ವರ್ಷದ ಮಾರುತಿ ಮುಖೆ ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಮೂರು ದಿನಗಳ ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಪತಿ ಸಾವಿನ ಸುದ್ದಿ ತಿಳಿದ ಗಂಗಾವತಿ ತಮ್ಮ ನಿವಾಸದಲ್ಲಿದ್ದ ಪತ್ನಿ 65 ವರ್ಷದ ಕಮಲಮ್ಮ ಹೃದಯಾಘಾತದಿಂದ ಗುರುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಕೊಪ್ಪಳ: ಪತ್ನಿ ಸಾವನ್ನಪ್ಪಿದ ಸುದ್ದಿ ಕೇಳಿ ಪತಿ ಸಾವು, ಸಾವಿನಲ್ಲೂ ಒಂದಾದ ಅಜ್ಜ, ಅಜ್ಜಿ..!
ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಗುರುವಾರ ಸಂಜೆ ಇಬ್ಬರ ಅಂತ್ಯ ಸಂಸ್ಕಾರ ಜರುಗಿದೆ.