ರಾತ್ರಿ ಎಣ್ಣೆ ಪಾರ್ಟಿ: ಸಿಟ್ಟಿಗೆದ್ದು ಸ್ನೇಹಿತನನ್ನೇ ಕೊಂದ

By Suvarna News  |  First Published Jul 31, 2020, 11:12 AM IST

ರಾತ್ರಿ ಕರ್ಫ್ಯೂ ಇದ್ದರೂ ಅಪರಾಧಗಳು ನಡೆಯುತ್ತಲೇ ಇದೆ. ರಾತ್ರಿ ವೇಳೆ ಮದ್ಯಪಾನ ಮಾಡಿ ಗೆಳೆಯನಿಂದಲೇ ಯುವಕ ಕೊಲೆಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.


ಹಾಸನ(ಜು.31): ರಾತ್ರಿ ಕರ್ಫ್ಯೂ ಇದ್ದರೂ ಅಪರಾಧಗಳು ನಡೆಯುತ್ತಲೇ ಇದೆ. ರಾತ್ರಿ ವೇಳೆ ಮದ್ಯಪಾನ ಮಾಡಿ ಗೆಳೆಯನಿಂದಲೇ ಯುವಕ ಕೊಲೆಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಲಹವಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಜೊತೆಗಿದ್ದ ಸ್ನೇಹಿತನಿಗೆ ಬೈದಿದ್ದಕ್ಕೆ ಪ್ರಶ್ನೆ ಮಾಡಿದ್ದ ಸಂಪತ್ ಇದೇ ವಿಚಾರಕ್ಕೆ ಸಿಟ್ಟಿಗೆದ್ದು ಜನಿವಾರ ಗ್ರಾಮದ ಸಂಪತ್(28) ಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

Tap to resize

Latest Videos

ಬೆಂಗಳೂರು: ಕುಖ್ಯಾತ ಕಳ್ಳನ ಬಂಧನ, 7 ಬೈಕ್‌ ವಶ

ಗೋರಮಾರನಹಳ್ಳಿಯ ಹರೀಶ್ ಎಂಬಾತನಿಂದ ನಿನ್ನೆ ಮಧ್ಯ ರಾತ್ರಿ ಕೃತ್ಯ ನಡೆದಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ಹೊರವಲಯದ ಗದ್ದೆ ಬಳಿ‌ ಘಟನೆ ನಡೆದಿದೆ. ಸಂಪತ್ ರಾತ್ರಿ ಸ್ನೇಹಿತನ ಜೊತೆ ಡಾಬಾ ಸಮೀಪ ಮದ್ಯಪಾನ ಮಾಡುತ್ತಿದ್ದ. ಈ ವೇಳೆ ಅಲ್ಲಿಗೆ ಬಂದ ಹರೀಶ್ ಸಂಪತ್ ಗೆಳೆಯನಿಗೆ ನಿಂದಿಸಿದ್ದಾನೆ.

ಸಂಪತ್ ಹರೀಶನ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿದೆ. ನಿನ್ನೆ ತಾನೆ ಕ್ಷುಲ್ಲಕ ಕಾರಣಕ್ಕೆ ಚನ್ನರಾಯಪಟ್ಟಣ ದಲ್ಲಿ ಯುವಕನ ಹತ್ಯೆಯಾಗಿತ್ತು.

ನಾಯಿ ಮರಿ ಮಾರಾಟದ ನೆಪದಲ್ಲಿ ವಂಚನೆ: ವ್ಯಕ್ತಿಗೆ ಟೋಪಿ ಹಾಕಿದ ಕಳ್ಳರು..!

ಇದಾದ ಮರು ದಿನವೇ ಇಂತಹುದೇ ಕ್ಷುಲ್ಲಕ ಕಾರಣಕ್ಕೆ ಮತ್ತೊಬ್ಬ ಯುವಕನ ಹತ್ಯೆಯಾಗಿದ್ದಾನೆ. ಒಮ್ಮೆ ಜಗಳದ ಬಳಿಕ‌ ಮನೆಗೆ ಹೋಗಿ ಚಾಕು ತಂದು ಸಂಪತ್‌ಗೆ ಇರಿಯಲಾಗಿದೆ. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಕೊಲೆ ಕೇಸು ದಾಖಲಾಗಿದೆ. ಆರೋಪಿ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.

click me!