Republic Day 2022: ವಿಜಯನಗರದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡುವವರು ಯಾರು?

Suvarna News   | Asianet News
Published : Jan 25, 2022, 12:15 PM IST
Republic Day 2022: ವಿಜಯನಗರದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡುವವರು ಯಾರು?

ಸಾರಾಂಶ

ಗಣರಾಜ್ಯೋತ್ಸವ ದಿನದಂದು ವಿಜಯನಗರದಲ್ಲಿ ಧ್ವಜಾರೋಹಣ ಮಾಡುವವರು ಯಾರು ಎಂಬ ಪ್ರಶ್ನೆ ಇದೀಗ ಮೂಡಿದೆ. ಹೌದು! ವಿಜಯನಗರ ನೂತನ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಕೊರೋನಾ ಪಾಸಿಟಿವ್ ಆಗಿದೆ. 

ವಿಜಯನಗರ (ಜ.25): ಗಣರಾಜ್ಯೋತ್ಸವ ದಿನದಂದು (Republic Day) ವಿಜಯನಗರದಲ್ಲಿ ಧ್ವಜಾರೋಹಣ ಮಾಡುವವರು ಯಾರು ಎಂಬ ಪ್ರಶ್ನೆ ಇದೀಗ ಮೂಡಿದೆ. ಹೌದು! ವಿಜಯನಗರ ನೂತನ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ (Shashikala Annasaheb Jolle) ಅವರಿಗೆ ಕೊರೋನಾ ಪಾಸಿಟಿವ್ (Corona Positive) ಆಗಿದೆ. ಹಾಗಾಗಿ ಅವರು ಈ ಕಾರ್ಯಕ್ರಮಕ್ಕೆ ಆಗಮಿಸುವುದಿಲ್ಲ. ಅಲ್ಲದೇ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ (Aniruddh Shravan) ಅವರಿಗೂ ಅನಾರೋಗ್ಯ ಹಿನ್ನಲೆಯಲ್ಲಿ ಗೈರಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಅವರು ಬರುವುದು ಅನುಮಾನ. 

ವಿಜಯನಗರ ಜಿಲ್ಲೆಯ ಮೊದಲ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡುವವರು ಯಾರು ಎಂಬುದು ಸದ್ಯದ ಯಕ್ಷ ಪ್ರಶ್ನೆಯಾಗಿದ್ದು, ಜಿಲ್ಲೆಯ ಧ್ವಜಾರೋಹಣವನ್ನು ಸಚಿವ ಆನಂದ್ ಸಿಂಗ್ (Anand Singh) ಮಾಡಬೇಕು ಅನ್ನೋದು ಅಭಿಮಾನಿಗಳ ಒತ್ತಾಯವಾಗಿದೆ. ಹೀಗಾಗಿ ಹಳೆಯ ಉಸ್ತುವಾರಿಗಳಿಂದಲೇ ಧ್ವಜಾರೋಹಣ ನೆರೆವೆರುತ್ತಾ? ಅಥವಾ ಪರ್ಯಾಯ ವ್ಯವಸ್ಥೆ ಮಾಡುತ್ತಾ ರಾಜ್ಯ ಸರ್ಕಾರ ಎಂಬುದು ಕಾದು ನೋಡಬೇಕು. ಇನ್ನು ಆನಂದ್ ಸಿಂಗ್ ಅವರು ಹೊಸಪೇಟೆಯ ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿ ಮೊದಲು ಧ್ವಜಾರೋಹಣ ಮಾಡಲಿದ್ದಾರೆ. ಆದರೆ ಸರ್ಕಾರಿ ಕಾರ್ಯಕ್ರಮ ಅಂದರೆ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡೋರು ಯಾರು ಎಂಬುದು ಸದ್ಯದ ಪ್ರಶ್ನೆಯಾಗಿದೆ.

BJP Politics: ಬೆಳಗಾವಿ ರಹಸ್ಯ ಸಭೆಗೆ ಜಾರಕಿಹೊಳಿ ಬ್ರದರ್ಸ್‌ ಅಸಮಾಧಾನ

ವಿಜಯನಗರದಿಂದ ಆನಂದ್‌ ಸಿಂಗ್‌ಗೆ ಕೋಕ್: ಬೊಮ್ಮಾಯಿ ಸರ್ಕಾರ ಹೊಸ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನ ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ. ಆದ್ರೆ, ಸ್ವಂತ ಜಿಲ್ಲೆಯ ಸಚಿವರುಗಳಿಗೆ ಬೇರೆ ಜಿಲ್ಲೆ ಉಸ್ತುವಾರಿ ನೀಡಲಾಗಿದೆ. ಈ ಹಿಂದೆ ವಿಜಯನಗರ ಜಿಲ್ಲಾ ಉಸ್ತುವಾರಿಯಾಗಿದ್ದ ಆನಂದ್‌ ಸಿಂಗ್‌ ಅವರಿಗೆ ಇದೀಗ ಕೊಪ್ಪಳ ಜಿಲ್ಲೆ ಜವಾಬ್ದಾರಿ ನೀಡಲಾಗಿದೆ. ವಿಜಯನಗರ ಜಿಲ್ಲಾ ಉಸ್ತುವಾರಿಯನ್ನು ಶಶಿಕಲಾ ಜೊಲ್ಲೆ ಅವರಿಗೆ ನೀಡಲಾಗಿದೆ. ಇದರಿಂದ ಆನಂದ್ ಸಿಂಗ್ ಅಭಿಮಾನಿಗಳು ಹೊಸಪೇಟೆಯಲ್ಲಿ ದಿಢೀರ್ ಪ್ರತಿಭಟನೆಗಿಳಿದಿದ್ದಾರೆ.

ವಿಜಯನಗರದಿಂದ ಆನಂದ್‌ ಸಿಂಗ್ ಅವರನ್ನ ಬದಲಾವಣೆ ಮಾಡಿರುವುದಕ್ಕೆ ಹೊಸಪೇಟೆಯ ಪುನೀತ್ ರಾಜಕುಮಾರ್ ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು. ಪ್ರತಿಭಟನಾ ಸ್ಥಳಕ್ಕೆ ಸಿನಿಮೀಯ ರೀತಿಯಲ್ಲಿ ಆಗಮಿಸಿದ ಸಚಿವ ಆನಂದ್ ಸಿಂಗ್, ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿದ್ದು ಕಂಡು ಆಕ್ರೋಶಗೊಂಡರು. ಅಲ್ಲದೇ ಫೈರ್ ಇಂಜಿನ್ ತರಿಸಿ ಬೆಂಕಿ ನಂದಿಸಿದರು. ಬಳಿಕ ಮಾತನಾಡಿದ ಆನಂದ್ ಸಿಂಗ್, ಇವೆಲ್ಲಾ ತಾಂತ್ರಿಕ ಸಮಸ್ಯೆಗಳು. ನಾನು ಒಪ್ಪಿದ ನಂತರವೇ ಉಸ್ತುವಾರಿ ಬದಲಾವಣೆ ಆಗಿದೆ. ಎಲ್ಲವನ್ನೂ ಹೊರಗಡೆ ಹೇಳುವ ಹಾಗಿಲ್ಲ ಎಂದು ಅಭಿಮಾನಿಗಳನ್ನ ಸಮಾಧಾನಪಡಿಸಿದರು. 

Cabinet Reshuffle: ಸಭೆಗೆ ನಾವು ಯಾರನ್ನೂ ಆಹ್ವಾನಿಸಿಲ್ಲ, ಸಂಚಲನಕ್ಕೆ ಉತ್ತರ ಕೊಟ್ಟ ಕತ್ತಿ

ನಂತರ ತಹಸೀಲ್ದಾರ್ ಕಚೇರಿವರೆಗೆ ಸಚಿವರ ಹಿಂದೆಯೇ ಬಂದ ಅಭಿಮಾನಿಗಳು, ನಾನು ಕೆಲವೊಂದನ್ನು ತಮ್ಮ ಬಳಿ ಹೇಳಲು ಆಗಲ್ಲ ಎಂದಾಗ ಉದ್ದೇಶವ ಪೂರ್ವಕವಾಗಿಯೇ ನಿಮ್ಮ ಬದಲಾವಣೆ ಆಗಿದೆ ಎಂದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಎಸ್ ಟಿ ಸೋಮಶೇಖರ್(ಮೈಸೂರು), ಬೈರತಿ ಬಸವರಾಜ್೯ ದಾವಣಗೆರೆ) ಮತ್ತು ಮುನಿರತ್ನ (ಕೋಲಾರ) ಅಶ್ವತ್ಥ್ ನಾರಾಯಣ(ರಾಮನಗರ), ಗೋಪಾಲಯ್ಯ(ಹಾಸನ) ಈ  ಹಿಂದೆ ಇದ್ದ ಜಿಲ್ಲಾ ಉಸ್ತುವಾರಿಯೇ ಮುಂದುವರೆಯಲಿದ್ದಾರೆ.

ಉಸ್ತುವಾರಿ ಬೇಡ: ಉಸ್ತುವಾರಿ ಅದಲು ಬದಲು ವಿಚಾರವಾಗಿ ಕೆಲ ಸಚಿವರು ಸೋಮವಾರ ತಡ ರಾತ್ರಿ ಸಿಎಂ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸಚಿವ ಎಂಟಿಬಿ ನಾಗರಾಜ್ (MTB Nagaraj) ನನಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಬೇಡ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಬೇಕೆಂದು ಸಿಎಂ ಬಳಿ ಪಟ್ಟು ಹಿಡಿದಿದ್ದಾರೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!