Crime News: ಎಲೆಬೇತೂರು ಗ್ರಾಮದಲ್ಲಿ ಜೋಡಿ ಕೊಲೆ: ವೃದ್ಧ ದಂಪತಿಗಳ ಸಾವು

Suvarna News   | Asianet News
Published : Jan 25, 2022, 11:23 AM ISTUpdated : Jan 25, 2022, 12:13 PM IST
Crime News: ಎಲೆಬೇತೂರು ಗ್ರಾಮದಲ್ಲಿ ಜೋಡಿ ಕೊಲೆ: ವೃದ್ಧ ದಂಪತಿಗಳ ಸಾವು

ಸಾರಾಂಶ

ತಡರಾತ್ರಿ ವೃದ್ಧ ದಂಪತಿಯ ಕೊಲೆ ಮಾಡಿರುವ ಘಟನೆ ತಾಲೂಕಿನ ಎಲೆ ಬೇತೂರು ಗ್ರಾಮದಲ್ಲಿ ನಡೆದಿದೆ. ಮಾರಕಾಸ್ತ್ರಗಳಿಂದ ವೃದ್ಧ ದಂಪತಿಯನ್ನು ದುಷ್ಕರ್ಮಿಗಳು ಕೊಚ್ಚಿಕೊಲೆ ಮಾಡಿದ್ದಾರೆ. 

ದಾವಣಗೆರೆ (ಜ.25): ತಡರಾತ್ರಿ ವೃದ್ಧ ದಂಪತಿಯ ಕೊಲೆ (Murder) ಮಾಡಿರುವ ಘಟನೆ ತಾಲೂಕಿನ ಎಲೆ ಬೇತೂರು ಗ್ರಾಮದಲ್ಲಿ ನಡೆದಿದೆ. ಮಾರಕಾಸ್ತ್ರಗಳಿಂದ ವೃದ್ಧ ದಂಪತಿಯನ್ನು (Elderly Couples) ದುಷ್ಕರ್ಮಿಗಳು ಕೊಚ್ಚಿಕೊಲೆ ಮಾಡಿದ್ದಾರೆ. ಗುರುಸಿದ್ದಯ್ಯ (80) ಸರೋಜಮ್ಮ (75) ಕೊಲೆಯಾದ ದಂಪತಿಗಳು. ಮೂರು ಹೆಣ್ಣು ಮಕ್ಕಳನ್ನ ಮದುವೆ ಮಾಡಿ ಕೊಟ್ಟಿದ್ದ ದಂಪತಿಗಳು ಇಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದರು. 

ದುಷ್ಕರ್ಮಿಗಳು ರಾತ್ರಿ ಮನೆಗೆ ನುಗ್ಗಿ ಬಾಗಿಲು ಹಾಕಿಕೊಂಡು ಕೊಲೆ ಮಾಡಿದ್ದು, ಅನಂತರ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದಾರೆ. ಪಕ್ಕದ ಮನೆಯವರಾದ ಸರೋಜಮ್ಮ ಬೆಳಿಗ್ಗೆ ಅವರನ್ನ ಭೇಟಿ ಮಾಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ದಾವಣಗೆರೆ (Davanagere) ಗ್ರಾಮಾಂತರ ಠಾಣೆಯ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಶ್ವಾನದಳ ಹಾಗೂ ಬೆರಳಚ್ಚು ತಜ್ಞತಂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ಮೇಸ್ತ್ರಿ ಜತೆ ಲವ್ವಿ-ಡವ್ವಿ, ಪತ್ನಿಯನ್ನು ಕೊಂದು ಪೊಲೀಸ್‌ ಠಾಣೆಗೆ ಹೋದ ಪತಿ

ಮದುವೆಗೆ ಒಪ್ಪದಿದ್ದಕ್ಕೆ ಕಿಡ್ನಾಪ್‌: ಮದುವೆ ಮಾಡಿಕೊಳ್ಳಲು ತನ್ನ 20 ವರ್ಷದ ನಾದಿನಿಯನ್ನು(ಪತ್ನಿ ತಂಗಿ) ಅಪಹರಿಸಿದ್ದ ಭಾವ ಹಾಗೂ ಆತನ ಇಬ್ಬರು ಸಂಬಂಧಿಕರನ್ನು ಕೊಡಿಗೇಹಳ್ಳಿ (Kodigehalli) ಠಾಣೆ ಪೊಲೀಸರು ಬಂಧಿಸಿದ್ದಾರೆ. ತುಮಕೂರು (Tumkur) ಜಿಲ್ಲೆ ಕುಣಿಗಲ್‌ ತಾಲೂಕಿನ ಹೆಬ್ಬೂರು ಹೋಬಳಿಯ ದೇವರಾಜ್‌, ಆತನ ಸಂಬಂಧಿಕರಾದ ನವೀನ್‌ ಹಾಗೂ ಕುಮಾರ್‌ ಬಂಧಿತರು. ಆರೋಪಿಗಳಿಂದ ಕಾರು ಜಪ್ತಿ ಮಾಡಲಾಗಿದೆ. ಅಪಹೃತಳನ್ನು ರಕ್ಷಿಸಿ ಆಕೆಯ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೊಡಿಗೇಹಳ್ಳಿ ಸಮೀಪದ ಸಂಜೀವಿನಿ ನಗರದಿಂದ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ಶನಿವಾರ ತನ್ನ ನಾದಿನಿಯನ್ನು ದೇವರಾಜ್‌ ಅಪಹರಿಸಿದ್ದ. 

ಬಳಿಕ ಸಕಲೇಶಪುರಕ್ಕೆ ಕರೆದೊಯ್ದಿದ್ದ ಆತ, ಅಲ್ಲಿಂದ ಮರಳುವಾಗ ಅರಸಿಕೆರೆಯ ಗಡಸಿ ಸಮೀಪ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರೇಮಕ್ಕೆ ಪೋಷಕರ ವಿರೋಧ: ಎಂಟು ವರ್ಷಗಳ ಹಿಂದೆ ತನ್ನೂರಿನ ನೆರೆ ಗ್ರಾಮದ ಸಂತ್ರಸ್ತೆಯ ಸೋದರಿ ಜತೆ ದೇವರಾಜ್‌ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹೆಬ್ಬೂರು ಹೋಬಳಿಯಲ್ಲಿ ಕೋಳಿ ಅಂಗಡಿಗಳಿಗೆ ಕೋಳಿ ಪೂರೈಸುವ ಕೆಲಸವನ್ನು ದೇವರಾಜ್‌ ಮಾಡುತ್ತಿದ್ದ. ಕೆಲ ತಿಂಗಳ ಹಿಂದೆ ನಾದಿನಿ ಜತೆ ಆತನಿಗೆ ಪ್ರೇಮಾಂಕುರವಾಗಿತ್ತು. ಕೊನೆಗೆ ಮದುವೆ ಮಾಡಿಕೊಳ್ಳಲು ಇಬ್ಬರು ಮುಂದಾಗಿದ್ದರು. ಆದರೆ, ಸಂತ್ರಸ್ತೆಯ ಪೋಷಕರು ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಮುನಿಸಿಕೊಂಡ ಪ್ರಿಯತಮೆ ಓಲೈಕೆಗೆ ಅಣ್ಣನ ಕಿಡ್ನಾಪ್‌: ಪಾಗಲ್‌ ಪ್ರೇಮಿ ಅಂದರ್‌

ಮನೆ ಬಿಟ್ಟು ಪರಾರಿ: ಹೀಗಿರುವಾಗ ಕೆಲ ತಿಂಗಳ ಹಿಂದೆ ಮನೆ ಬಿಟ್ಟು ನಾದಿನಿ ಮತ್ತು ಭಾವ ಓಡಿ ಹೋಗಿದ್ದರು. ಆಗ ಹೆಬ್ಬೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅಂತಿಮವಾಗಿ ಇಬ್ಬರನ್ನು ಪತ್ತೆ ಹಚ್ಚಿದ ಪೊಲೀಸರು, ರಾಜಿ ಸಂಧಾನ ಮೂಲಕ ಸಂತ್ರಸ್ತೆಗೆ ಮನೆಗೆ ಕಳುಹಿಸಿದ್ದರು. ಬಳಿಕ ನಿನ್ನ ಅಕ್ಕನ ಸಂಸಾರವನ್ನು ಏಕೆ ಹಾಳು ಮಾಡುತ್ತೀಯಾ. ನಿನ್ನಿಂದ ಇಬ್ಬರು ಮಕ್ಕಳು ಬೀದಿ ಪಾಲಾಗುತ್ತವೆ ಎಂದು ಆಕೆಗೆ ಪೋಷಕರು ಬುದ್ಧಿಮಾತು ಹೇಳಿದ್ದರು. ಈ ಮಾತಿಗೆ ಒಪ್ಪಿದ ಆಕೆ, ಭಾವನಿಂದ ದೂರವಾಗಲು ಯತ್ನಿಸಿದ್ದಳು. ಆಗ ಊರಿನಲ್ಲೇ ಇದ್ದರೆ ನಾದಿನಿಗೆ ಭಾವ ಕಾಟ ಕೊಡಬಹುದು ಎಂದು ಆಕೆಯ ಪೋಷಕರು, ಎರಡು ತಿಂಗಳ ಹಿಂದೆ ಕೊಡಿಗೇಹಳ್ಳಿ ಸಮೀಪದ ಸಂಜೀವಿನಿ ನಗರದಲ್ಲಿರುವ ಆಕೆಯ ದೊಡ್ಡಪ್ಪನ ಮನೆಗೆ ಕರೆತಂದು ಬಿಟ್ಟಿದ್ದರು.

PREV
Read more Articles on
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!