Cabinet Reshuffle: ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ: ಶಾಸಕ ಪಿ. ರಾಜೀವ್

By Suvarna News  |  First Published Jan 25, 2022, 11:49 AM IST

ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಸಂಬಂಧಿಸಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಮಾಧ್ಯಮಗಳ ಮುಂದೆ ಮಾತಾಡಿದ್ರೆ ನಾನೂ ಆಕಾಂಕ್ಷಿ ಅಂದರೆ ಸಚಿವ ಸ್ಥಾನ ಸಿಗಲ್ಲ, ಸಚಿವ ಸ್ಥಾನ ಬೇಕು ಅಂತ ಮಾಧ್ಯಮಗಳ ಮುಂದೆ ಮಾತಾಡೋದು ತರವಲ್ಲ ಎಂದು ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಶಾಸಕ ಪಿ. ರಾಜೀವ್ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. 


ಚಿಕ್ಕೋಡಿ (ಜ.25): ರಾಜ್ಯ ಸಚಿವ ಸಂಪುಟ (Cabinet Expansion) ಪುನಾರಚನೆ ವಿಚಾರಕ್ಕೆ ಸಂಬಂಧಿಸಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಮಾಧ್ಯಮಗಳ ಮುಂದೆ ಮಾತಾಡಿದ್ರೆ ನಾನೂ ಆಕಾಂಕ್ಷಿ ಅಂದರೆ ಸಚಿವ ಸ್ಥಾನ ಸಿಗಲ್ಲ, ಸಚಿವ ಸ್ಥಾನ ಬೇಕು ಅಂತ ಮಾಧ್ಯಮಗಳ ಮುಂದೆ ಮಾತಾಡೋದು ತರವಲ್ಲ ಎಂದು ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಶಾಸಕ ಪಿ. ರಾಜೀವ್ (P Rajeev) ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. 

ಸಚಿವ ಸ್ಥಾನ ಯಾರಿಗೆ ಕೊಡಬೇಕು ಎಂದು ಹೈಕಮಾಂಡ್ (Hogh Command) ತೀರ್ಮಾನ ಮಾಡುತ್ತೆ, ಅಲ್ಲಿರೋದೆ ನಾಲ್ಕು ಸಚಿವ ಸ್ಥಾನ ಅದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾನೂ ಆಕಾಂಕ್ಷಿಯಾಗಿದ್ದೇನೆ ಎಂದು ಮಾಧ್ಯಮಗಳ ಮುಂದೆ ಹೇಳಿದರೆ ಆಗುತ್ತಾ ಎಂದು ಶಾಸಕರು ಪ್ರಶ್ನೆ ಮಾಡಿದರು. ನೀವೂ ಸಹ ಸಚಿವ ಸ್ಥಾನದ ಆಕಾಂಕ್ಷಿಯಾ ಎಂಬ ಪ್ರಶ್ನೆಗೆ ಅದು ಅಪ್ರಸ್ತುತ ಎಂದ ಶಾಸಕ ಪಿ.ರಾಜೀವ್,  ಪಕ್ಷ ಎಲ್ಲವನ್ನೂ ಗಮನಿಸುತ್ತೆ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದನ್ನೂ ತೀರ್ಮಾನಮಾಡುತ್ತದೆ ಎಂದು ಕುಡಚಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Tap to resize

Latest Videos

ಉಸ್ತುವಾರಿ ಬೇಡ: ಉಸ್ತುವಾರಿ ಅದಲು ಬದಲು ವಿಚಾರವಾಗಿ ಕೆಲ ಸಚಿವರು ಸೋಮವಾರ ತಡ ರಾತ್ರಿ ಸಿಎಂ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಸಚಿವ ಎಂಟಿಬಿ ನಾಗರಾಜ್ (MTB Nagaraj) ನನಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಬೇಡ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಬೇಕೆಂದು ಸಿಎಂ ಬಳಿ ಪಟ್ಟು ಹಿಡಿದಿದ್ದಾರೆ.

Karnataka Cabinet Reshuffle: ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಚರ್ಚೆ ಬಿರುಸು

ಹೊಸಮುಖಗಳಿಗೆ ಸಚಿವ ಸ್ಥಾನ ನೀಡಲಿ: ಬಿಜೆಪಿ ಸರ್ಕಾರದಲ್ಲಿ ಎರಡು- ಮೂರು ಬಾರಿ ಸಚಿವರಾಗಿದ್ದವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಲಿ, ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಿ ಎಂದು ಮಾಜಿ ಸಚಿವ ರೇಣುಕಾಚಾರ್ಯ(MP Renukacharya) ಹೇಳಿದ್ದಾರೆ.  ಗುಜರಾತ್‌ (Gujarat) ಮಾದರಿಯಲ್ಲಿ ಸಂಪುಟ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕಾರ್ಯಕಾರಿಣಿ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಕುರಿತು ನಾವು ಪಕ್ಷದ ವರಿಷ್ಠರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು. 

ಇದೇ ವೇಳೆ ನನಗೆ ಸಚಿವನಾಗುವ (Minister) ಆಸೆ ಇಲ್ಲ. ಅದರ ಬಗ್ಗೆ ಅಪೇಕ್ಷಯೂ ಇಲ್ಲ. ನನಗೆ ಶಾಸಕ ಸ್ಥಾನದಲ್ಲಿ ತೃಪ್ತಿ ಇದೆ. ಬಿಜೆಪಿಯನ್ನು (BJP) ಗೆಲ್ಲಿಸಿಕೊಂಡು ಬರುವ ಕೆಲಸವನ್ನು ಹಿರಿಯರು ಮಾಡಬೇಕು. ಅಧಿಕಾರ ಅನುಭವಿಸಿದ ನಾಯಕರು ಸಚಿವ ಸ್ಥಾನ ತ್ಯಾಗ ಮಾಡಲಿ ಎಂದು ತಿಳಿಸಿದರು. ನನಗೇ ಸಚಿವ ಸ್ಥಾನ ಕೊಡಬೇಕೆಂದಿಲ್ಲ. ಯಾರಿಗೆ ಬೇಕಾದರೂ ಸಚಿವ ಸ್ಥಾನ ನೀಡಲಿ. ಹೊಸ ಮುಖಗಳಿಗೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು ಎಂದು ಅವರು ಹೇಳಿದರು.

Cabinet Reshuffle ಸಂಪುಟ ಪುನಾರಚನೆಗೆ ಡೆಡ್‌ಲೈನ್ ಕೊಟ್ಟ ಬಿಜೆಪಿ ಶಾಸಕ ಯತ್ನಾಳ್

ರಾಜೀನಾಮೆ ಕೇಳಿದ್ರೆ ಕೊಡಲು ಸಿದ್ಧ:  ಪಕ್ಷವು ರಾಜೀನಾಮೆ ಕೇಳಿದರೆ ಧಾರಾಳವಾಗಿ ಬಿಟ್ಟುಕೊಡಲು ತಯಾರಾಗಿದ್ದೇವೆ. ನನ್ನನ್ನು ತೆಗೆಯೋದಿದ್ದರೆ ನಾನು ಸಹ ತಯಾರಿದ್ದೇನೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ತಿಳಿಸಿದ್ದಾರೆ.  ಹಿರಿಯರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಶಾಸಕ ರೇಣುಕಾಚಾರ್ಯ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನದಿಂದ ಕೆಳಗಿಳಿದು ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ. ಅಧಿಕಾರ ಎಷ್ಟರ ಮಟ್ಟಿಗೆ ಒಳ್ಳೇದು ಕೆಟ್ಟದು ಎಂಬುದು ನಮಗೆ ಗೊತ್ತಿದೆ ಎಂದರು. ಇನ್ನು ಶಿವಮೊಗ್ಗದಲ್ಲಿ ಮುಂದಿನ ಹಿಂದುಳಿದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಅಲ್ಲಿ ನಾವು ಮುಂದಿನ ಚುನಾವಣೆಗಳ ಬಗ್ಗೆ ಸಂಘಟನೆ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು.

click me!