ಮತ್ತೊಂದು ಯಡವಟ್ಟು : ಅಂತ್ಯಸಂಸ್ಕಾರವಾದ ಬಳಿಕ ಅದೇ ಹೆಸರಿನ ಮತ್ತೊಂದು ಮೃತದೇಹ!

Suvarna News   | Asianet News
Published : Aug 26, 2020, 04:38 PM IST
ಮತ್ತೊಂದು ಯಡವಟ್ಟು : ಅಂತ್ಯಸಂಸ್ಕಾರವಾದ ಬಳಿಕ ಅದೇ ಹೆಸರಿನ ಮತ್ತೊಂದು ಮೃತದೇಹ!

ಸಾರಾಂಶ

ಮೃತನ ಅಂತ್ಯಸಂಸ್ಕಾರದ ಬಳಿಕ ಅದೇ ಹೆಸರಿನ ಮೃತದೇಹ ಪ್ರತ್ಯಕ್ಷವಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಆಸ್ಪತ್ರೆಯಿಂದ ಮತ್ತೊಂದು ಯಡವಟ್ಟಾಗಿದೆ.

ಮಂಗಳೂರು (ಆ.26):  ಮೃತನ ಅಂತ್ಯಸಂಸ್ಕಾರದ ಬಳಿಕ ಆಸ್ಪತ್ರೆಯಲ್ಲಿ ಅದೇ ಹೆಸರಿನ ಮತ್ತೊಂದು ಮೃತದೇಹ ಪ್ರತ್ಯಕ್ಷವಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. 

ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಯಡವಟ್ಟು ನಡೆದಿದೆ. 

ಮೃತದೇಹ ಸುಟ್ಟು ಬೂದಿಯಾದ ಬೆನ್ನಲ್ಲೇ ಆಸ್ಪತ್ರೆ ಸಿಬ್ಬಂದಿಯಿಂದ ಮತ್ತೆ ಫೋನ್ ಕಾಲ್  ಬಂದಿದ್ದು, ನಿಮ್ಮವರ ಮೃತದೇಹ ತೆಗೆದುಕೊಂಡು ಹೋಗಿ ಎಂದು ಮತ್ತೆ ಮತ್ತೆ ಫೋನ್ ಕರೆ  ಮಾಡಿದ್ದಾರೆ.

ಎರಡನೇ ಹೆಂಡತಿ ಜೊತೆ ಸೇರಿ ಮೊದಲ ಹೆಂಡತಿ ಮಗಳನ್ನೇ ಕೊಂದ ಪಾಪಿ ತಂದೆ..

ಜಾಂಡೀಸ್ ಖಾಯಿಲೆಯಿಂದ ಅ.19ರಂದು ವೆನ್ ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ವಿನೋದ್  ಉಳಾಯಿ ಬೆಟ್ಟು ಎನ್ನುವರನ್ನು ಉಳಾಯಿಬೆಟ್ಟು ನಿವಾಸಿಗಳೇ ಅಂತ್ಯಕ್ರಿಯೆ ನೆರವೇರಿಸಿದ್ದರು.

ನಿವಾಸಿ ವಿನೋದ್ ಅನಾಥರಾಗಿರುವ ಕಾರಣ ಅ.19ರಂದೇ ಸ್ಥಳೀಯರು ಅಂತ್ಯಕ್ರಿಯೆ  ನೆರವೇರಿಸಿದ್ದರು. ಅಂತ್ಯಕ್ರಿಯೆ ಬೆನ್ನಲ್ಲೇ ಹಣ ಕಟ್ಟಿ ಶವ ತೆಗೆದುಕೊಂಡು ಹೋಗಿ ಎಂದು ಅ.20 ಮತ್ತು 21ಕ್ಕೆ    ಕರೆ ಮಾಡಿ ಕಿರಿಕ್ ಮಾಡಿದ್ದಾರೆ.

ವೆನ್ ಲಾಕ್ ಆಸ್ಪತ್ರೆ ಸಿಬ್ಬಂದಿ 4 ಸಾವಿರ ಕಟ್ಟಿ ಶವ ತೆಗೆದುಕೊಂಡು ಹೋಗಲು ಸೂಚಿಸಿದ್ದಾರೆ.  ಸರ್ಕಾರಿ ಆಸ್ಪತ್ರೆಯಲ್ಲಿ ಶವ ಕೊಡಲು ಹಣ ಕೇಳಿದ್ದು, ಸಿಬ್ಬಂದಿ  ಖಾಲಿ ಹಾಳೆಯಲ್ಲಿ ಬಿಲ್ ಬರೆದು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.   

PREV
click me!

Recommended Stories

ಬಾರ್ಕೂರು - ಬೆಣ್ಣೆಕುದ್ರು ಸೇತುವೆ ಮೇಲೆ ಗ್ರಹಗಳ ಪರೇಡ್ !
ಇಂದು ವರ್ಷದ ಮೊದಲ ರಕ್ತ ಚಂದ್ರಗ್ರಹಣ: ಬೆಂಗಳೂರಿನ ದೇವಸ್ಥಾನಗಳ ಸಮಯದಲ್ಲಿ ಬದಲಾವಣೆ