Weather Today: ಕೊಡಗಿನಲ್ಲಿ ತೀವ್ರ ಗಾಳಿ: ಮಳೆ ಪ್ರಮಾಣ ಇಳಿಮುಖ

By Kannadaprabha News  |  First Published Aug 12, 2022, 8:45 AM IST

ಕೊಡಗಿನಲ್ಲಿ ತೀವ್ರ ಗಾಳಿ ಇದ್ದು ಮಳೆ ಪ್ರಮಾಣ ಇಳಿಮುಖವಾಗಿದೆ. ಮಳೆಯಿಂದ ಜಿಲ್ಲೆಯ ಎರಡು ಕಡೆಗಳಲ್ಲಿ ಭೂಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 275ರ ಮೇಲೆ ಜರಿದ ಮಣ್ಣು, ತೆರವು ಕಾರ್ಯಾಚರಣೆ ನಡೆಯುತ್ತಿದೆ


ಮಡಿಕೇರಿ (ಆ.12) : ಕೊಡಗು ಜಿಲ್ಲೆಯಾದ್ಯಂತ ಗುರುವಾರ ಮಳೆ ಪ್ರಮಾಣ ಇಳಿಮುಖವಾಗಿತ್ತು. ಆದರೆ ಜೋರಾಗಿ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸಿದ್ದಾಪುರ, ವಿರಾಜಪೇಟೆ, ಸುಂಟಿಕೊಪ್ಪ, ಕುಶಾಲನಗರ, ಸೋಮವಾರಪೇಟೆ ಮತ್ತಿತರ ಕಡೆಗಳಲ್ಲಿ ಕೆಲ ಕಾಲ ಬಿಸಿಲಿನ ವಾತಾವರಣ ಕಂಡುಬಂತು. ಭಾರಿ ಗಾಳಿ ಹಿನ್ನಲೆಯಲ್ಲಿ ಕೆಲವೆಡೆಗಳಲ್ಲಿ ಮರ ಬಿದ್ದು, ಹಾನಿಯಾಯಿತು. ಶ್ರೀಮಂಗಲ ಹೋಬಳಿಯ ಟಿ.ಶೆಟ್ಟಿಗೇರಿ ಗ್ರಾಮದ ರಮೇಶ್‌ ಅವರ ಮನೆಯ ಗೋಡೆ ಕುಸಿದಿದೆ.

ಕೊಡಗಿನಲ್ಲಿ ಮತ್ತೆ ಪ್ರವಾಹ; ಮತ್ತೆ ಮರುಕಳಿಸಲಿದೆಯಾ 2018ರ ಕರಾಳ ದಿನ..?

Tap to resize

Latest Videos

ಮತ್ತೆ ಭೂಕುಸಿತ(Landslide) ಉಂಟಾಗಿದೆ. ಸೋಮವಾರಪೇಟೆ(Somavarapete)ತಾಲೂಕಿನ ಊರುಗುತ್ತಿಯಲ್ಲಿ ಭೂ ಕುಸಿತವಾಗಿದೆ. ಸೋಮವಾರಪೇಟೆ ಭಾಗದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆ ಹಿನ್ನೆಲೆ ಸುಮಿತ್ರ ವೆಂಕಟೇಶ್‌ ಎಂಬುವರ ಕಾಫಿ ತೋಟದಲ್ಲಿ ಭೂಕುಸಿತ ಉಂಟಾಗಿದ್ದು, ಅರ್ಧ ಎಕರೆಯಷ್ಟುಕಾಫಿ ತೋಟ ಕೊಚ್ಚಿಹೋಗಿದೆ. ಬುಧವಾರ ಹರಪಳ್ಳಿಯಲ್ಲಿ ಭೂಕುಸಿತವಾಗಿತ್ತು.

ಹೆದ್ದಾರಿಯಲ್ಲಿ ಮಣ್ಣು ಕುಸಿತ: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಬೆಟ್ಟಬಿರುಕುಬಿಟ್ಟಿದ್ದು, ಗುರುವಾರ ಸ್ವಲ್ಪ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದಿದೆ. ಇಡೀ ಬಿರುಕು ಬಿಟ್ಟಿರುವ ಗುಡ್ಡ ಕುಸಿದರೆ ಅಪಾಯವೆಂದು ಅರಿತು ಹೆದ್ದಾರಿ ಇಲಾಖೆಯಿಂದ ಮಣ್ಣು ತೆರವು ಮಾಡಲಾಗುತ್ತಿದೆ. ಎರಡು ಹಿಟಾಚಿ, ನಾಲ್ಕು ಟಿಪ್ಪರ್‌ಗಳ ಮೂಲಕ ಮಣ್ಣು ತೆಗೆಯಲಾಗುತ್ತಿದೆ. ಬಿರುಕು ಬಿಟ್ಟಿರುವ ಅಷ್ಟೂಮಣ್ಣನ್ನು ತೆಗೆಯಲು ನಿರ್ಧರಿಸಲಾಗಿದೆ. ಮಳೆ ಹೆಚ್ಚಾದಲ್ಲಿ ಅಪಾರ ಮಣ್ಣು ರಸ್ತೆಗೆ ಬೀಳುವ ಸಾಧ್ಯತೆ ಹಿನ್ನೆಲೆ ಎಲ್ಲಾ ಮಣ್ಣನ್ನು ತೆಗೆಯಲು ನಿರ್ಧರಿಸಲಾಗಿದೆ. ಈ ಭಾಗದಲ್ಲಿ ರಸ್ತೆಯ ಒಂದು ಬದಿಗೆ ಬ್ಯಾರಿಕೇಡ್‌ ಹಾಕಿ ಸಂಚಾರ ನಿಯಂತ್ರಣ ಮಾಡಲಾಗುತ್ತಿದೆ.

ಕೊಡಗಿನಲ್ಲಿ ಮಳೆಯಬ್ಬರ : ಧರೆ ಕುಸಿತ

  • ಕರಾವಳಿ ಮತ್ತು ಮಲೆನಾಡಿನ ಒಟ್ಟು ಐದು ಜಿಲ್ಲೆಗಳ

ಹೆದ್ದಾರಿ ಪಕ್ಕ ಗುಡ್ಡ ಕುಸಿತ ಪ್ರದೇಶದಲ್ಲಿ ಯಾವುದೇ ಆತಂಕವಿಲ್ಲ. ಮಣ್ಣು ತೆರವು ಮಾಡಲಾಗುತ್ತದೆ. ಯಾವುದೇ ಸಮಸ್ಯೆ ಇಲ್ಲದಂತೆ ಮಣ್ಣು ತೆಗೆಯಲಾಗುತ್ತಿದೆ.

-ಮುರುಗೇಶ್‌, ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಹಾಯಕ ಎಂಜಿನಿಯರ್‌.

ಕೊಡಗಿನಲ್ಲಿ 51.86 ಮಿ.ಮೀ. ಮಳೆ ದಾಖಲು:

ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 51.86 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.02 ಮಿ.ಮೀ. ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಸರಾಸರಿ 51.08 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ 54.78 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ಮಳೆ 49.73 ಮಿ.ಮೀ. ಮಳೆಯಾಗಿದೆ. ಹೋಬಳಿವಾರು ವಿವರ: ಮಡಿಕೇರಿ ಕಸಬಾ 34.60, ನಾಪೋಕ್ಲು 55.20, ಸಂಪಾಜೆ 4.50, ಭಾಗಮಂಡಲ 110, ವಿರಾಜಪೇಟೆ ಕಸಬಾ 14, ಹುದಿಕೇರಿ 57.80, ಶ್ರೀಮಂಗಲ 109, ಪೊನ್ನಂಪೇಟೆ 85, ಅಮ್ಮತ್ತಿ 33.50, ಬಾಳೆಲೆ 29.40, ಸೋಮವಾರಪೇಟೆ ಕಸಬಾ 53.40, ಶನಿವಾರಸಂತೆ 38, ಶಾಂತಳ್ಳಿ 120, ಕೊಡ್ಲಿಪೇಟೆ 65, ಕುಶಾಲನಗರ 8, ಸುಂಟಿಕೊಪ್ಪ 14 ಮಿ.ಮೀ. ಮಳೆಯಾಗಿದೆ

click me!