ಹಾರಂಗಿ ಜಲಾಶಯದಲ್ಲಿ ಈ ಬಾರಿ ನೀರಿನ ಸಂಗ್ರಹ ಏರಿಕೆ

By Kannadaprabha News  |  First Published May 28, 2020, 11:03 AM IST

ಹಾರಂಗಿ ಜಲಾಶಯದಲ್ಲಿ ಈ ಬಾರಿ ನೀರಿನ ಸಂಗ್ರಹ ಪ್ರಮಾಣ ಕಳೆದ ಬಾರಿಗಿಂತ ಅಧಿಕವಾಗಿರುವುದನ್ನು ಕಾಣಬಹುದು. ಜಲಾಶಯದಲ್ಲಿ ಪ್ರಸಕ್ತ 3.4 ಟಿಎಂಸಿ ನೀರಿನ ಸಂಗ್ರಹವಿದ್ದು 2831 ಅಡಿಗಳಷ್ಟುನೀರಿನ ಪ್ರಮಾಣ ಕಂಡುಬಂದಿದೆ.


ಕುಶಾಲನಗರ(ಮೇ 28): ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ಈ ಬಾರಿ ನೀರಿನ ಸಂಗ್ರಹ ಪ್ರಮಾಣ ಕಳೆದ ಬಾರಿಗಿಂತ ಅಧಿಕವಾಗಿರುವುದನ್ನು ಕಾಣಬಹುದು. ಜಲಾಶಯದಲ್ಲಿ ಪ್ರಸಕ್ತ 3.4 ಟಿಎಂಸಿ ನೀರಿನ ಸಂಗ್ರಹವಿದ್ದು 2831 ಅಡಿಗಳಷ್ಟುನೀರಿನ ಪ್ರಮಾಣ ಕಂಡುಬಂದಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಅಣೆಕಟ್ಟಿನ ನೀರು 2805.9 ಅಡಿಗಳಷ್ಟಿತ್ತು. ಈ ಬಾರಿ ಸುಮಾರು 25 ಅಡಿಗಳಷ್ಟುಹೆಚ್ಚುವರಿ ನೀರಿನ ಸಂಗ್ರಹ ಜಲಾಶಯದಲ್ಲಿದೆ. ಜಲಾಶಯದ ಗರಿಷ್ಠ ಮಟ್ಟ2859 ಅಡಿಗಳಾಗಿದ್ದು ಇನ್ನು 28 ಅಡಿಗಳಷ್ಟುನೀರು ಹರಿದುಬಂದಲ್ಲಿ ಅಣೆಕಟ್ಟೆಭರ್ತಿಯಾಗಲಿದೆ.

Tap to resize

Latest Videos

ಮನೆ ಕೇರಳದಲ್ಲಿ, ರಸ್ತೆ ಕರ್ನಾಟಕದಲ್ಲಿ: ಅತಂತ್ರ ಸ್ಥಿತಿಯಲ್ಲಿ 700 ಕನ್ನಡಿಗರ ಕುಟುಂಬ!

ಈ ಬಾರಿ ಬೇಸಿಗೆ ಅವಧಿಗೆ ನೀರನ್ನು ಸಂಗ್ರಹ ಮಾಡುವಲ್ಲಿ ಅಣೆಕಟ್ಟು ಅಧಿಕಾರಿಗಳು ಮುತುವರ್ಜಿ ವಹಿಸಿದ್ದರು. ಪ್ರಸಕ್ತ ನದಿಗೆ 94 ಕ್ಯುಸೆಕ್‌ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ನದಿಗೆ 20 ಕ್ಯುಸೆಕ್‌ ಹಾಗೂ ಕಾಲುವೆ ಮೂಲಕ 50 ಕ್ಯುಸೆಕ್‌ ಪ್ರಮಾಣದ ನೀರು ಹರಿಸಲಾಗುತ್ತಿದೆ. ಜಲಾಶಯಕ್ಕೆ ಕಳೆದ ಸಾಲಿನಲ್ಲಿ ಒಟ್ಟು 32.03 ಟಿಎಂಸಿ ಪ್ರಮಾಣದ ನೀರು ಹರಿದುಬಂದಿದ್ದು ನದಿಗೆ 14.08 ಟಿಎಂಸಿ ಪ್ರಮಾಣದ ನೀರು ಹರಿಸಲಾಗಿದೆ. ಕಾಲುವೆ ಮೂಲಕ 15.52 ಟಿಎಂಸಿ ನೀರು ಹರಿದಿದೆ ಎಂದು ಅಣೆಕಟ್ಟೆಉಸ್ತುವಾರಿ ಅಧಿಕಾರಿ ನಾಗರಾಜ್‌ತಿಳಿಸಿದ್ದಾರೆ.

click me!