ಹಿರಿಯರು, ಗುರುಗಳೆಂದರೆ ಅವರಿಗೆ ಎಲ್ಲಿಲ್ಲದ ಗೌರವ| ಹಿಂದೆ ವಿದ್ಯಾರ್ಥಿಯಾಗಿದ್ದಾಗ ಯಾವ ರೀತಿ ಗೌರವ ಕೊಡುತ್ತಿದ್ದರೋ ಈಗಲೂ ಹಾಗೆಯೆ ಇದ್ದಾರೆ| ಅವನನ್ನು ನೋಡಲು ಹೈದ್ರಾಬಾದ್‌ಗೆ ಆತನ ಕಚೇರಿಗೆ ಹೋಗಿದ್ದೆ. ತನ್ನ ಎಲ್ಲ ಸಿಬ್ಬಂದಿ ಎದುರಲ್ಲೇ ನನ್ನ ಕಾಲು ಮುಟ್ಟಿ ನಮಸ್ಕರಿಸಲು ಬಂದಿದ್ದ|
ಹುಬ್ಬಳ್ಳಿ(ಡಿ.07): ‘ನನ್ನ ಶಿಷ್ಯ ವಿಶ್ವನಾಥ ಇಷ್ಟೊಂದು ದೊಡ್ಡ ಹುದ್ದೆಗೇರಿದರೂ ಆತನಿಗೆ ಅಹಂ ಮಾತ್ರ ಹತ್ತಿರವೂ ಸುಳಿದಿಲ್ಲ. ಈ ಕಾರಣಕ್ಕಾಗಿಯೇ ದೇಶ ಮೆಚ್ಚುವ ಕೆಲಸ ಮಾಡಲು ಆತನಿಗೆ ಸಾಧ್ಯವಾಗಿದೆ.’ ಐಪಿಎಸ್ ಅಧಿಕಾರಿ, ಸೈಬರಾಬಾದ್‌ನ ಕಮಿಷನರ್ ವಿಶ್ವನಾಥ ಕುರಿತು ಅವರ ಗುರುಗಳಾದ ಪ್ರಾಧ್ಯಾಪಕ ಬಸವರಾಜ ಶಿವನಗುತ್ತಿ ಅವರು ಹೇಳುವ ಮಾತಿದು.
ಇಲ್ಲಿನ ಜೆಜಿ ಕಾಮರ್ಸ್ ಕಾಲೇಜಿನಲ್ಲಿ ವಿಶ್ವನಾಥ ಬಿಕಾಂ ಪದವಿ ಓದುತ್ತಿದ್ದಾಗ ಶಿವನಗುತ್ತಿ ಸಂಖ್ಯಾಶಾಸ್ತ್ರ ಹೇಳುತ್ತಿದ್ದರು. ಸದ್ಯ ನಿವೃತ್ತಿ ಹೊಂದಿರುವ ಶಿವನಗುತ್ತಿ ಈಗಲೂ ತಮ್ಮ ಶಿಷ್ಯನ ಸಂಪರ್ಕದಲ್ಲಿದ್ದಾರೆ. ಪ್ರತಿ ಹಬ್ಬ ಹುಣ್ಣಿಮೆಯಂದು ತಪ್ಪದೇ ವಿಶ್ವನಾಥ ಇವರಿಗೆ ಪೋನ್ ಮಾಡಿ ವಿಷ್ ಮಾಡ್ತಾರಂತೆ. ಒಂದು ವೇಳೆ ಫೋನ್ ಮಾಡಲು ಸಾಧ್ಯವಾಗದಿದ್ದಲ್ಲಿ ಮೆಸೇಜ್ ಕಳುಹಿಸುತ್ತಾರಂತೆ. ಆದರೆ ಆಗಾಗ ನಿರಂತರ ಸಂಪರ್ಕದಲ್ಲಿದ್ದಾರೆ.
ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!
ಇಷ್ಟೊಂದು ಉನ್ನತ ಹುದ್ದೆಗೆ ವಿಶ್ವನಾಥ ಏರಿದ್ದರೂ ಒಂದಿಷ್ಟು ಅಹಂ ಅವರ ಬಳಿ ಸುಳಿದಿಲ್ಲ. ಈಗಲೂ ಹಿರಿಯರು, ಗುರುಗಳೆಂದರೆ ಅವರಿಗೆ ಎಲ್ಲಿಲ್ಲದ ಗೌರವ. ಹಿಂದೆ ವಿದ್ಯಾರ್ಥಿಯಾಗಿದ್ದಾಗ ಯಾವ ರೀತಿ ಗೌರವ ಕೊಡುತ್ತಿದ್ದರೋ ಈಗಲೂ ಹಾಗೆಯೆ ಇದ್ದಾರೆ. ಅವನನ್ನು ನೋಡಲು ಹೈದ್ರಾಬಾದ್‌ಗೆ ಆತನ ಕಚೇರಿಗೆ ಹೋಗಿದ್ದೆ. ತನ್ನ ಎಲ್ಲ ಸಿಬ್ಬಂದಿ ಎದುರಲ್ಲೇ ನನ್ನ ಕಾಲು ಮುಟ್ಟಿ ನಮಸ್ಕರಿಸಲು ಬಂದಿದ್ದ. ಅಂಥ ಸಜ್ಜನ ವ್ಯಕ್ತಿ ನಮ್ಮ ವಿಶ್ವನಾಥ. ‘ನನ್ನ ಮಗಾ ಸಿವಿಲ್ ಸರ್ವಿಸ್ ಸೇರಬೇಕಂಥ ಪ್ರಯತ್ನ ನಡಿಸುತ್ತಿದ್ದಾನೆ. ಅವರಿಗೆ ವಿಶ್ವನಾಥ ಅವರೇ ಎಲ್ಲಿ ಕೋಚಿಂಗ್ ತೆಗೆದುಕೊಳ್ಳಬೇಕು, ಹೇಗೆ ಅಧ್ಯಯನ ನಡೆಸಬೇಕು ಎಂಬುದನ್ನು ವಿಶ್ವನಾಥನೇ ಮಾರ್ಗದರ್ಶನ ಮಾಡುತ್ತಿದ್ದಾರೆ. ಸದ್ಯ ನನ್ನ ಪುತ್ರ ಹೈದ್ರಾಬಾದ್‌ನಲ್ಲಿ ಕೋಚಿಂಗ್ ತೆಗೆದುಕೊಳ್ಳುತ್ತಿದ್ದಾನೆ’ ಎಂದರು.
ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!
ಇಂದು ಕಲಬುರ್ಗಿಯಲ್ಲಿ ವಿಶ್ವನಾಥ ಸಜ್ಜನರ ಸಂಬಂಧಿ ಮದುವೆ ಇತ್ತು. ಈ ಮದುವೆಗೆ ಬರುತ್ತೇನೆ ಎಲ್ಲರೂ ಸೇರೋಣಾ ಎಂದು ಮೊದಲೇ ಹೇಳಿದ್ದರು. ಆದರೆ, ದಿಢೀರ್ ಇಂತಹ ಮಹತ್ತರ ಕಾರ್ಯದ ಹಿನ್ನೆಲೆಯಲ್ಲಿ ಸೇರಲಾಗಿಲ್ಲ. 2014ರಲ್ಲಿ ಹಳೆ ವಿದ್ಯಾರ್ಥಿಗಳೆಲ್ಲ ಒಟ್ಟಾಗಿ ಸೇರಿ ಕಾರ್ಯಕ್ರಮ ನಡೆಸಿದ್ದೆವು. ಆಗ ಆತನೂ ಬಂದಿದ್ದ. ಈಗಲೂ ನಮ್ಮೆಲ್ಲರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದರು ಸಹಪಾಠಿ ಮಹೇಂದ್ರ ಧಲಭಂಜ.