ಆರೋಗ್ಯ ಕೇಂದ್ರ ಬಂದ್‌: ತಮಿಳುನಾಡಿಗೆ ಅಲೆಯುತ್ತಿದ್ದಾರೆ ರೋಗಿಗಳು..!

By Kannadaprabha News  |  First Published Dec 7, 2019, 8:34 AM IST

ಹನೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಚ್ಚಾಗಿದ್ದು, ರೋಗಿಗಳು ತಮಿಳುನಾಡಿಗೆ ಹೋಗಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಬಂದಿದೆ. ಸರ್ಕಾರಿ ಆರೋಗ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಬಂದ್‌ ಆಗಿರುವುದರಿಂದ ಇಲ್ಲಿನ ಜನತೆ ಸ್ಥಿತಿ ನೂರಾರು ಕೀಲೋ ಮೀಟರ್‌ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕಾದ ಸ್ಥಿತಿ ಉಂಟಾಗಿರುವುದು ಚಿಂತೆಗೀಡು ಮಾಡುವಂತಾಗಿದೆ.


ಚಾಮರಾಜನಗರ(ಡಿ.07): ಗೋಪಿನಾಥಂನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಗಿತಗೊಂಡಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನತೆ ಆರೋಗ್ಯ ಕೆæಟ್ಟರೆ ನೆರೆಯ ತಮಿಳುನಾಡಿಗೆ ಹೋಗಬೇಕಾದ ಸ್ಥಿತಿ ಉಂಟಾಗಿದೆ. ಸಂಬಂಧಪಟ್ಟಜನಪ್ರತಿನಿಧಿಗಳು ಅಧಿಕಾರಿಗಳು ಇತ್ತ ಗಮಹರಿಸಿ ಕ್ರಮಕೈಗೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹನೂರು ತಾಲೂಕಿನ ಸಮೀಪದ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸುತ್ತಮುತ್ತಲಿನ ಹಳ್ಳಿಗಳಾದ ಮಾರುಕೊಟ್ಟೆ, ಆಲಂಬಾಡಿ, ಜಂಬುಕಪಟ್ಟಿ, ಕೋಟೆಯೂರು, ಪುದುರು, ಆತೂರು, ಈ ಗ್ರಾಮಗಳಲ್ಲಿ 9,000 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಗಡಿ ಗ್ರಾಮದ ಗೋಪಿನಾಥಂ ಸರ್ಕಾರಿ ಆರೋಗ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಬಂದ್‌ ಆಗಿರುವುದರಿಂದ ಇಲ್ಲಿನ ಜನತೆ ಸ್ಥಿತಿ ನೂರಾರು ಕೀಲೋ ಮೀಟರ್‌ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕಾದ ಸ್ಥಿತಿ ಉಂಟಾಗಿರುವುದು ಚಿಂತೆಗೀಡು ಮಾಡುವಂತಾಗಿದೆ.

Tap to resize

Latest Videos

ಬಂದ್‌ ಆಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರ:

ವೀರಪ್ಪನ್‌ ಹುಟ್ಟೂರು ಗೋಪಿನಾಥಂ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು ಇಲ್ಲದೆ ಜೊತೆಗೆ ಇದ್ದ ಒಬ್ಬ ಸಿಬ್ಬಂದಿ ನರ್ಸ್‌ನ್ನು ಸಹ ಮಲೆ ಮಹದೇಶ್ವರ ಬೆಟ್ಟಕ್ಕೆ ಆರೋಗ್ಯ ಇಲಾಖೆ ನಿಯೋಜನೆಗೊಳಿಸಿರುವುದರಿಂದ ಹಲವಾರು ತಿಂಗಳುಗಳಿಂದ ಆಸ್ಪತ್ರೆ ಬಂದ್‌ ಆಗಿರುವುದರಿಂದ ಜನತೆ ಸಂಕಷ್ಟಕ್ಕೆ ಒಳಾಗಿದ್ದಾರೆ.

ಜನತೆಯ ಪರಿಪಾಟೀಲು:

ಗಡಿ ಗ್ರಾಮದ ವ್ಯಾಪ್ತಿಗೆ ಬರುವ ಹಳ್ಳಿಗಳಲ್ಲಿ ಬಡ ಕೂಲಿ ಕಾರ್ಮಿಕರು ಪರಿಶಿಷ್ಟವರ್ಗದವರು ಇನ್ನಿತರ ಜನಾಂಗದವೇ ಹೆಚ್ಚಾಗಿದ್ದು, ಹೆಚ್ಚಾಗಿ ಮಕ್ಕಳು ಸಹ ಇರುವುದರಿಂದ ಆರೋಗ್ಯ ಹದಗೆಟ್ಟಸಂದರ್ಭದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಣ್ಣಪುಟ್ಟಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಈಗ ಈ ಭಾಗದ ಜನತೆ ಆಸ್ಪತ್ರೆಗಳಿಗೆ ತೆರಳಬೇಕಾದರೆ ತಮಿಳುನಾಡಿನ ಮೆಟ್ಟೂರಿಗೆ 60 ಕೀಲೋ ಮೀಟರ್‌ ಖಾಸಗಿ ವಾಹನವನ್ನು ಬಳಸಿಕೊಳ್ಳಲು ಸಾವಿರಾರು ರು. ಹಣ ಭರಿಸಬೇಕಾಗಿದೆ. ಜೊತೆಗೆ ಮಲೆ ಮಹದೇಶ್ವರ ಬೆಟ್ಟದಲ್ಲೂ ಸಹ ನುರಿತ ವೈದ್ಯರು ಇಲ್ಲದ ಕಾರಣ ಹನೂರು ಮತ್ತು ಕೊಳ್ಳೆಗಾಲ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗಳಿಗೆ ನೂರಾರು ಕೀಲೋ ಮೀಟರ್‌ ಕ್ರಮಿಸಬೇಕಾಗಿದೆ.

 

ರಾತ್ರಿ ವೇಳೆ ಇಲ್ಲಿನ ಜನತೆ ಚಿಕಿತ್ಸೆಗಾಗಿ ಪರದಾಟ ಉಂಟಾಗಿದ್ದು, ಇಲ್ಲಿನ ಆರೋಗ್ಯ ಕೇಂದ್ರ ತೆರೆದು ಸೂಕ್ತ ವೈದ್ಯಾಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ನೇಮಕ ಮಾಡುವಂತೆ ಜನಪ್ರತಿನಿಧಿಗಳೂ ಹಾಗೂ ಜಿಲ್ಲಾಧಿಕಾರಿಗಳು ಇತ್ತ ಗಮನಹಿರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗೋಪಿನಾಥಂ ಗ್ರಾಮದಲ್ಲಿ ಹಲವಾರು ತಿಂಗಳುಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಮುಚ್ಚಿರುವುದರಿಂದ ಜನತೆ ಚಿಕಿತ್ಸೆಗಾಗಿ ಹೈರಾಣರಾಗಿದ್ದಾರೆ. ಕೂಡಲೇ ಸಂಬಂಧಪಟ್ಟಇಲಾಖಾ ಹಿರಿಯ ಅಧಿಕಾರುಗಳು ಇಲ್ಲಿನ ಜನಪ್ರತಿನಿಧಿಗಳೂ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿ ಜನತೆ ವೈದ್ಯಕೀಯ ಚಿಕಿತ್ಸೆ ನೀಡಲು ಅನುವು ಮಾಡಿಕೊಡಬೇಕು ಇಲ್ಲದಿದ್ದರೇ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಭಗತ್‌ಸಿಂಗ್‌ ಯುವಕರ ಸಂಘದ ಅಧ್ಯಕ್ಷ  ಶಿವಕುಮಾರ್‌ ಪಿ. ಹೇಳಿದ್ದಾರೆ.

- ದೇವರಾಜನಾಯ್ಡು

click me!