ಸಾಮಾಜಿಕ ಜಾಲತಣಾದಲ್ಲಿ ‘ಹುಬ್ಬಳ್ಳಿ ಹುಲಿಯಾ’ ಸಜ್ಜನರ ವೈರಲ್

By Suvarna News  |  First Published Dec 7, 2019, 8:35 AM IST

ವಾಟ್ಸ್ ಆ್ಯಪ್, ಫೇಸ್‌ಬುಕ್ ಸ್ಟೇಟಸ್‌ಗಳಲ್ಲಿ ಮಿಂಚುತ್ತಿರುವ ವಿಶ್ವನಾಥ| ಹುಲಿಯಾ, ಸಿಂಗಂ ಆದ ವಿಶ್ವನಾಥ| ಹೌದೋ ಹುಲಿಯಾ-ಫುಲ್ ವೈರಲ್|ಕೇಂದ್ರ ಸರ್ಕಾರ ಎಲ್ಲ ರೇಪ್ ಕೇಸ್‌ಗಳನ್ನು ನಮ್ಮ ಹುಬ್ಬಳ್ಳಿ ಹುಲಿಯಾಗೆ ಹಸ್ತಾಂತರಿಸಲಿ|


ಹುಬ್ಬಳ್ಳಿ(ಡಿ.07): ತೆಲಂಗಾಣದ ಸೈಬರಾಬಾದ್‌ನಲ್ಲಿ ಅತ್ಯಾಚಾರಿಗಳನ್ನು ಎನ್‌ಕೌಂಟರ್ ಮಾಡುತ್ತಿದ್ದಂತೆ ಇತ್ತ ವಾಟ್ಸ್‌ಆ್ಯಪ್, ಫೇಸ್‌ಬುಕ್ ಸ್ಟೇಟಸ್‌ಗಳಲ್ಲಿ ವಿಶ್ವನಾಥ ರಾರಾಜಿಸುತ್ತಿದ್ದರು. ಜತೆಗೆ ‘ಹುಬ್ಬಳ್ಳಿ ಹುಲಿಯಾ’, ‘ಗಂಡು ಮೆಟ್ಟಿನ ನಾಡಿನ ಸಿಂಗಂ’ ‘ನೆಚ್ಚಿನ ಅಣ್ಣ’ ಎಂಬೆಲ್ಲ ಅಣಿಮುತ್ತುಗಳು ರಾರಾಜಿಸುತ್ತಿವೆ. 

ಯುವಸಮೂಹದ ವ್ಯಾಟ್ಸ್ ಆ್ಯಪ್ ಸ್ಟೇಟಸ್‌ಗಳಲ್ಲಿ ಬರೀ ವಿಶ್ವನಾಥ ಭಾವಚಿತ್ರಗಳದ್ದೇ ಸದ್ದು. ಅತ್ಯಾಚಾರಿಗಳಿಗೆ ತಕ್ಕ ಪಾಠ ಕಲಿಸಿದ ಎನ್ ಕೌಂಟರ್ ಎಂದೇ ಬಿಂಬಿತವಾಗಿರುವ ತೆಲಂಗಾಣದ ಸೈಬರಾಬಾದ್‌ನಲ್ಲಿ ನಡೆದ ಎನ್‌ಕೌಂಟರ್ ನ ನೇತೃತ್ವ ವಹಿಸಿದ್ದು ಇಲ್ಲಿನ ಮೂಲದ ವಿಶ್ವನಾಥ ಸಜ್ಜನರ. 

Tap to resize

Latest Videos

ವೈದ್ಯೆ ರೇಪ್, ಕೊಲೆ ಪ್ರಕರಣ: ನಾಲ್ವರೂ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗೆ ಬಲಿ!

ಈ ವಿಷಯ ಬೆಳಗ್ಗೆ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದ್ದಂತೆ ಇತ್ತ ಯುವ ಸಮೂಹದ ಸಂತಸಕ್ಕೆ ಪಾರವೇ ಇರಲಿಲ್ಲ. ತಮ್ಮ ತಮ್ಮ ವಾಟ್ಸ್‌ಆ್ಯಪ್ ಗಳಲ್ಲಿನ ಹಳೆಯ ಸ್ಟೇಟಸ್‌ಗಳನ್ನೆಲ್ಲ ಕಿತ್ಹಾಕಿ ಹೊಸದಾಗಿ ವಿಶ್ವನಾಥ ರನ್ನು ಅಲ್ಲಿ ಕೂಡಿಸಿದರು. ಇನ್ನೂ ಕೆಲವರಂತೂ ‘ಉತ್ತರ ಕರ್ನಾಟಕ ಅಂದರೆ ಸುಮ್ಮನೆನಾ ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಇದು ಮೊದಲಿನಿಂದ ನಡೆದುಕೊಂಡು ಬಂದಿದ್ದು. ಇದಕ್ಕೆ ಸಾಕ್ಷಿ ನೀಡಿದ್ದಾರೆ ನಮ್ಮ ವಿಶ್ವನಾಥ ಎಂದೆಲ್ಲ ಬರೆದುಕೊಂಡಿದ್ದಾರೆ. 
ಇನ್ನು ಇತ್ತೀಚಿಗೆ ಅಥಣಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆ ವೇಳೆ ಮಾಡಿದ ಭಾಷಣದಲ್ಲಿ ಕುಡುಕನೊಬ್ಬ ‘ಹೌದು ಹುಲಿಯಾ’ ಎಂದು ಸಂಬೋಧಿಸಿದ್ದು ಇದೀಗ ವಿಶ್ವನಾಥ ಅವರಿಗೆ ಬಳಕೆಯಾಗುತ್ತಿದೆ. ಹೌದು ಹುಲಿಯಾ ಎಂಬುದನ್ನು ‘ಹುಬ್ಬಳ್ಳಿ ಹುಲಿಯಾ’ ಎಂದೋ ನೋಡಿ ‘ನಮ್ಮ ಹುಬ್ಬಳ್ಳಿ ಹುಲಿಯಾನ ಶಕ್ತಿ’ ಹೇಳಿರುವ ವ್ಯಾಟ್ಸ್ ಆ್ಯಪ್ ಸ್ಟೇಟಸ್ ಹಾಕಲಾಗುತ್ತಿದೆ. 

ಹುಬ್ಬಳ್ಳಿಯ ಸಿಂಗಂ, ಗಂಡು ಮೆಟ್ಟಿನ ನಾಡಿನ ಸಿಂಗಂ, ನೆಚ್ಚಿನ ಅಣ್ಣ, ‘ಹುಬ್ಬಳ್ಳಿಯ ಹೆಬ್ಬುಲಿ ಮುಟ್ಟಿದರೆ ಬಲಿ’ ಎಂದೆಲ್ಲ ಸ್ಟೇಟಸ್ ಹಾಕಲಾಗುತ್ತಿದೆ.ಇನ್ನು ಕೆಲವರಂತೂ ಇವತ್ತು ನಿಮ್ಮ ಮದುವೆ, ಜನ್ಮ ದಿನ, ಇಂತಹ ಸ್ಟೇಟಸ್ ಹಾಕದೇ ಬರೀ ನಮ್ಮ ಸಿಂಗಂ ಸ್ಟೇಟಸ್‌ನ್ನು ಹಾಕಿ ಎಂದು ಮನವಿ ಮಾಡಿದ ಸ್ಟೇಟಸ್‌ಗಳಿಗೂ ಕಮ್ಮಿಯಿಲ್ಲ. ಇನ್ನು ಮಹಿಳೆಯರು ಕೂಡ ಸ್ಟೇಟಸ್ ಹಾಕುವಲ್ಲಿ ಹಿಂದೆ ಬಿದ್ದಿಲ್ಲ. ‘ರೇಪ್ ಮಾಡಿ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದ ರೇಪಿಸ್ಟ್ ಗಳಿಗೆ ಇದೇ ಸರಿಯಾದ ಶಿಕ್ಷೆ. ಹುಲಿಯಾ ನಿ ಸುಮ್ಮನೆ ಕೂಡಬೇಡ. 

ಹೈದರಾಬಾದ್ ರಾಕ್ಷಸರಿಗೆ ಕನ್ನಡಿಗನಿಂದ ಎನ್‌ಕೌಂಟರ್!

ಕೇಂದ್ರ ಸರ್ಕಾರ ಎಲ್ಲ ರೇಪ್ ಕೇಸ್‌ಗಳನ್ನು ನಮ್ಮ ಹುಬ್ಬಳ್ಳಿ ಹುಲಿಯಾಗೆ ಹಸ್ತಾಂತರಿಸಲಿ. ದೇಶದಲ್ಲಿ ಯಾವೊಬ್ಬ ರೇಪಿಸ್ಟ್ ಗಳು ಇಲ್ಲದಂತೆ ಮಾಡುತ್ತಾರೆ ಅವರು..’ ‘ಎಲ್ಲೆಲ್ಲಿ ರೇಪ್‌ಗಳಾಗಿವೆಯೋ ಅಲ್ಲಿ ಒಂದೊಂದು ದಿನ ವಿಶ್ವನಾಥ ಅವರನ್ನು ನೇಮಿಸಿ’ ಎಂದು ಕೂಡ ಬರೆದು ಸ್ಟೇಟಸ್ ಹಾಕಿರುವುದು ಕಣ್ಣಿಗೆ ರಾಚುತ್ತಿದೆ. ಫೇಸ್‌ಬುಕಲ್ಲೂ ಇಂತಹದ್ದೇ ಸ್ಟೇಟಸ್‌ಗಳು ಕಾಣಿಸುತ್ತಿವೆ. ಒಟ್ಟಿನಲ್ಲಿ ಹೌದು ಹುಲಿಯಾ ಎಂಬ ಮಾತು ಇದೀಗ ಹುಬ್ಬಳ್ಳಿ ಹುಲಿಯಾ ಆಗಿ ಬದಲಾ ವಣೆಯಾಗಿದೆ. ಎಲ್ಲೆಡೆ ವಿಶ್ವನಾಥ ಹುಲಿಯಾ ಆಗಿ, ಸಿಂಗಂ ಆಗಿ ಮಿಂಚುತ್ತಿರುವುದಂತೂ ಸತ್ಯ.! 
 

click me!