ಪೌರ ಕಾರ್ಮಿಕರ ಸನ್ಮಾನ : ತಮ್ಮ ಪೀಠದ ಕೂರಿಸಿ ಸಿಹಿ ತಿನ್ನಿಸಿದ ವಿನಯ್ ಗುರೂಜಿ

By Kannadaprabha News  |  First Published Oct 11, 2021, 4:24 PM IST
  • ಹೋರಾಟಗಳಲ್ಲಿ ಬಲಿಯಾಗುವ ಕಾರ್ಯಕರ್ತರಿಗೆ ಸರ್ಕಾರ ವಿಮಾ ಯೋಜನೆ ಜಾರಿಗೊಳಿಸಲಿ
  • ಬಡ ಕುಟುಂಬಗಳಿಗೆ ಅದರ ಪರಿಹಾರದ ಮೊತ್ತ ಸಿಗುವಂತೆ ಮಾಡಬೇಕು ಎಂದು ಕೊಪ್ಪದ ಗೌರಿಗದ್ದೆಯ ಶ್ರೀ ವಿನಯ ಗುರೂಜಿ ಒತ್ತಾಯ

 ಉಡುಪಿ (ಅ.11):  ದತ್ತ ಪೀಠದ (Datta Peetha) ಬಗ್ಗೆ ನ್ಯಾಯಾಲಯದ ತೀರ್ಪು, ಅದಕ್ಕಾಗಿ ಹೋರಾಡಿದ ಹಿಂದೂ (Hindu) ಕಾರ್ಯಕರ್ತರ ರಕ್ತ ತರ್ಪಣದ ಫಲ. ಇಂತಹ ಹೋರಾಟಗಳಲ್ಲಿ ಬಲಿಯಾಗುವ ಕಾರ್ಯಕರ್ತರಿಗೆ ಸರ್ಕಾರ ವಿಮಾ ಯೋಜನೆ (Insurance policy) ಜಾರಿಗೊಳಿಸಿ, ಅವರ ಬಡ ಕುಟುಂಬಗಳಿಗೆ ಅದರ ಪರಿಹಾರದ ಮೊತ್ತ ಸಿಗುವಂತೆ ಮಾಡಬೇಕು ಎಂದು ಕೊಪ್ಪದ ಗೌರಿಗದ್ದೆಯ ಶ್ರೀ ವಿನಯ ಗುರೂಜಿ (Vinay guruji) ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಭಾನುವಾರ ಇಲ್ಲಿನ ಪೆರ್ಣಂಕಿಲದ ಪಡುಬೆಟ್ಟುನಲ್ಲಿ ಸಾಮಾಜಿಕ ರಾಜಕೀಯ (Politics) ಮುಂದಾಳು ಶಂಕರ ನಾಯಕ್‌ ಹೆಸರಿನಲ್ಲಿ ಅವರ ಕುಟುಂಬಸ್ಥರು ಆರಂಭಿಸಿದ ಪೆರ್ಣಂಕಿಲ ಶಂಕರ ಪ್ರತಿಷ್ಠಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೂ ಧರ್ಮ ಹಾಳಾಗುವುದಕ್ಕೆ ಕಾರಣವೇ ಹಿಂದೂಗಳ ನಡುವೆ ಇರುವ ತಾರತಮ್ಯ. ದೇಶ ಕಟ್ಟಬೇಕಾದರೇ ಮೊದಲು ಎಲ್ಲರೂ ಒಗ್ಗಟ್ಟಾಗಬೇಕು ಎಂದರು.

Latest Videos

undefined

ಇದೇ ಸಂದರ್ಭದಲ್ಲಿ ಗುರೂಜಿ ಅವರು ಕಾಪು ಪುರಸಭೆಯ ಪೌರಕಾರ್ಮಿಕರನ್ನು (Municpolity Workers), ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಕೆರೆ ಪುನಶ್ಚೇತನಕ್ಕೆ ಚಾಲನೆ ನೀಡಿದರು, ವಿವಿಧ ಗಿಡಗಳನ್ನು (Plants) ವಿತರಿಸಿದರು.

ನಮ್ಮನ್ನು ನಾವು ತಿದ್ದಿ ನಡೆಯೋಣ : ವಿನಯ್ ಗುರೂಜಿ ಕಿವಿಮಾತು

ಸಮಾಜ ಕಲ್ಯಾಣ ಮತ್ತು ಹಿಂ.ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ (Shrinivas poojary), ಕ.ಅ.ಪ್ರಾ.ದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ಶಾಸಕ ಲಾಲಾಜಿ, ಬಿಜೆಪಿ (BJP) ಜಿಲ್ಲಾಧ್ಯಕ್ಷ ಸುರೇಶ್‌ ನಾಯಕ್‌ ಕುಯಿಲಾಡಿ, ಕಿದಿಯೂರು ಚಾರಿಟೇಬಲ್‌ ಟ್ರಸ್ವ್‌ನ ಕೆ. ಉದಯಕುಮಾರ್‌ ಶೆಟ್ಟಿ, ಕಾಪು ಗುರ್ಮೆ ಫೌಂಡೇಶನ್‌ನ ಗುರ್ಮೆ ಸುರೇಶ್‌ ಶೆಟ್ಟಿ, ಬೆಂಗಳೂರಿನ ಶಿಲ್ಪ ಪೌಂಡೇಶನ್‌ನ ಅಚ್ಯುತ ಗೌಡ, ರಾ.ಸ್ವ. ಸಂಘದ ಪ್ರಮೋದ್‌ ಜಿ., ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲದಾಸ ನಾಯಕ್‌, ಕೊಡಿಬೆಟ್ಟು ಗ್ರಾಪಂ ಅಧ್ಯಕ್ಷೆ ಆಶಾ ಶೆಟ್ಟಿಆಗಮಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಸ್ವೀಕಾರ್‌ ನಾಯಕ್‌ ಮತ್ತಿತರರಿದ್ದರು. ಕಾರ್ಯದರ್ಶಿ ಶ್ರೀಶ ನಾಯಕ್‌ ಸ್ವಾಗತಿಸಿದರು.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬೆಳಗ್ಗೆ ಆಗಮಿಸಿ ನೂತನ ಪ್ರತಿಷ್ಠಾನಕ್ಕೆ ಆಶೀರ್ವದಿಸಿದರು.

ನ್ನ ಪೀಠದ ಮೇಲೆ ಪೌರಕಾರ್ಮಿಕರಿಗೆ ಸನ್ಮಾನ

ಶ್ರೀ ವಿನಯ ಗುರೂಜಿ ಅವರು ಎಲ್ಲಾ ಪೌರಕಾರ್ಮಿಕರನ್ನು ತಾನು ಕುಳಿತಿದ್ದ ಪೀಠದ ಮೇಲೆ ಕುಳ್ಳಿರಿಸಿ ಶಾಲು ಹೊದೆಸಿ ಸನ್ಮಾನಿಸಿದರು. ನಂತರ ಊಟದ ಸಂದರ್ಭದಲ್ಲಿ ಅವರಿಗೆ ಸ್ವತಃ ಜಿಲೇಬಿ ತಿನ್ನಿಸಿದರು. ನಮ್ಮನ್ನೆಲ್ಲಾ ಸ್ವಚ್ಛವಾಗಿಟ್ಟುಕೊಳ್ಳುವವರು ನೀವು ಎಂದು ಕೊಂಡಾಡಿದರು.

click me!