ಚಿನ್ನದ ಗಣಿ ಮುಚ್ಚಲು ಕಾರಣ ಕಾಂಗ್ರೆಸ್‌ : ಶೀಘ್ರ ಕೆಜಿಎಫ್‌ ಚಿನ್ನದ ಗಣಿ ಆರಂಭ

Kannadaprabha News   | Asianet News
Published : Oct 11, 2021, 03:36 PM ISTUpdated : Oct 11, 2021, 03:44 PM IST
ಚಿನ್ನದ ಗಣಿ ಮುಚ್ಚಲು ಕಾರಣ ಕಾಂಗ್ರೆಸ್‌ : ಶೀಘ್ರ ಕೆಜಿಎಫ್‌ ಚಿನ್ನದ ಗಣಿ ಆರಂಭ

ಸಾರಾಂಶ

ಕೆಜಿಎಫ್‌ ಚಿನ್ನದ ಗಣಿಯನ್ನು ಮುಚ್ಚಲು ಕಾಂಗ್ರೆಸ್‌ ಕಾರಣವೇ ಹೊರತು ಬಿಜೆಪಿ ಅಲ್ಲ  ಗಣಿಯನ್ನು ಪುನರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದ ಸಂಸದರು

 ಕೋಲಾರ (ಅ.11) :  ಕೆಜಿಎಫ್‌ (KGF) ಚಿನ್ನದ ಗಣಿಯನ್ನು (Gold Mines) ಮುಚ್ಚಲು ಕಾಂಗ್ರೆಸ್‌ (Congress) ಕಾರಣವೇ ಹೊರತು ಬಿಜೆಪಿ (BJP) ಅಲ್ಲ ಎಂದು ಸಂಸದ ಎಸ್‌.ಮುನಿಸ್ವಾಮಿ (S Muniswamy) ತಿಳಿಸಿದರು.

ಕೋಲಾರದಲ್ಲಿ (Kolar) ತಮ್ಮನ್ನು ಭೇಟಿ ಮಾಡಿದ ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ಚಿನ್ನದ ಗಣಿ ಮುಚ್ಚಲು ಕಾಂಗ್ರೆಸ್‌ನವರೇ (Congress) ಕಾರಣ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ (KH Muniyapp) ಬಿಜೆಪಿಯವರ ಮೇಲೆ ಆರೋಪಿಸುತ್ತಿದ್ದಾರೆ ಎಂದು ಟೀಕಿಸಿದರು.

ಮೊಮ್ಮೊಕ್ಕಳನ್ನು ಆಡಿಸಿಕೊಂಡಿರಲಿ

ಮುನಿಯಪ್ಪ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರು 30 ವರ್ಷಗಳ ಕಾಲ ಕ್ಷೇತ್ರದ ಜನರನ್ನು ಯಾಮಾರಿಸಿ ಸಂಸದರಾದರೇ ಹೊರತು ಅವರು ಎಂದೂ ಕೂಡ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ (Loksabha) ಬಾಯಿ ತೆರೆದು ಮಾತಾಡಿಲ್ಲ. ಅವರಿಗೆ ವಯಸ್ಸಾಗಿದೆ ರಾಜಕೀಯ  (Politics) ಬಿಟ್ಟು ಮನೆಯಲ್ಲಿ ಮೊಮ್ಮಕ್ಕಳನ್ನು ಆಡಿಸಿಕೊಂಡು ಇದ್ದರೆ ಒಳ್ಳೆಯದು ಎಂದು ಕಿಡಿಕಾರಿದರು.

ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿದ ಕೈ ಮುಖಂಡ : ಸಂಸದಗೆ ಸವಾಲು

ನಾನು ಸಂಸದನಾಗಿ ಆಯ್ಕೆ ಆದ ಮೇಲೆ ಚಿನ್ನದ ಗಣಿ ಆರಂಭಿಸುವಂತೆ ಮನವಿ ಸಲ್ಲಿಸಲಾಯಿತು. ಅದರಂತೆ ಗಣಿಯನ್ನು ಪುನರಾರಂಭಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಂಸದರು ತಿಳಿಸಿದರು.

ಶ್ರೀನಿವಾಸಪುರದಲ್ಲಿ (Shrinivaspura) ರೈಲ್ವೆ ಕೋಚ್‌ ಫ್ಯಾಕ್ಟರಿ ಆರಂಭಿಸುವುದಾಗಿ ಜಿಲ್ಲೆಯ ಜನರಿಗೆ ಮಂಕು ಬೂದಿ ಎರಚಿ ಎರಡು ಬಾರಿ ಸಂಸದರಾದರು, ರೈಲ್ವೆ ಕೋಚ್‌ಗಾಗಿ ಯಾವುದೇ ಜಮೀನು ನಿಗದಿಯಾಗಿರಲಿಲ್ಲ. ಮುನಿಯಪ್ಪ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸಿ ಅನೇಕರಿಗೆ ನಾಮ ಹಾಕಿದ್ದಾರೆ ಎಂದು ಆರೋಪಿಸಿದರು.

'ಚಿಲ್ಲರೆ ಕೆಲಸ ಬಿಡು': ಅಧಿಕಾರಿ ವಿರುದ್ಧ ಮುನಿಸ್ವಾಮಿ ಗರಂ..!

ಸದ್ಯ ಶ್ರೀನಿವಾಸಪುರದ ಬಳಿ ರೈಲ್ವೆ ವರ್ಕ್ಶಾಪ್‌ ಮಾಡಲು ಶ್ರಮಿಸಲಾಗುತ್ತಿದೆ ಈಗಾಗಲೇ ಇದಕ್ಕಾಗಿ 80 ಹೆಕ್ಟೇರ್‌ ಜಮೀನು (Land) ಗುರ್ತಿಸಲಾಗಿದೆ ಎಂದು ಮುನಿಸ್ವಾಮಿ ತಿಳಿಸಿದರು.

ಮುಳಬಾಗಿಲು ತಾಲೂಕು ನಂಗಲಿಯಿಂದ ಬೆಂಗಳೂರಿನ ಕೃಷ್ಣರಾಜಪುರದವರೆಗೆ 6 ಮಾರ್ಗದ ರಾಷ್ಟ್ರೀಯ ಹೆದ್ದಾರಿ 75 ಅಗಲೀಕರಣಕ್ಕಾಗಿ ಕೇಂದ್ರ ಸರ್ಕಾರದಿಂದ ಭರವಸೆ ಸಿಕ್ಕಿದೆ ಇದೇ ರಸ್ತೆಯಲ್ಲಿ ಸುಮಾರು 365 ಕೋಟಿ ರೂ ವೆಚ್ಚದಲ್ಲಿ ಅಂಡರ್‌ ಬ್ರಿಡ್ಜ್‌ ನಿರ್ಮಿಸಲು ಹಣ ಮಂಜೂರು ಮಾಡಲಾಗಿದೆ. ಈಗಾಗಲೇ ಕೆಲವು ಕಡೆ ಕಾಮಗಾರಿಗಳೂ ಆರಂಭವಾಗಿವೆ ಎಂದು ತಿಳಿಸಿದರು.

PREV
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ