Bellary ಮೃತಪಟ್ಟ ಬಾಲಕನನ್ನು ಬದುಕಿಸಲು ಉಪ್ಪಿನಲ್ಲಿಟ್ರು, ನಂಬಿಕೆ ಹುಸಿಯಾಯ್ತು...!

By Suvarna News  |  First Published Sep 5, 2022, 2:26 PM IST

‌ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹ ಉಪ್ಪಿನ ರಾಶಿಯಲ್ಲಿ ಇಟ್ಟರೇ ಬದುಕುತ್ತಾನೆ ಎನ್ನುವ ಸುದ್ದಿ ಸಾಮಾಜಿ ಜಾಲತಾಣಗಳಲ್ಲಿ ಹರಿದಾಡಿತ್ತು. ಅದನ್ನು ಇಲ್ಲಿನ ಗ್ರಾಮಸ್ಥರು ಪರೀಕ್ಷೆ ಮಾಡಿ ನೋಡಿದ್ದು, ಅದು ಸುಳ್ಳಾಗಿದೆ.


ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ, (ಸೆಪ್ಟೆಂಬರ್.05):
ನೀರಿನ ಹೊಂಡದಲ್ಲಿ ಈಜಲು ತೆರಳಿದ್ದ ಬಾಲಕ ಮೃತಪಟ್ಟಿದ್ದು, ಉಪ್ಪಿನ ರಾಶಿಯಲ್ಲಿ ಮಲಗಿಸಿದರೆ ಬದುಕಿ ಉಳಿಯುತ್ತಾನೆ ಎಂಬ ನಂಬಿಕೆಯಿಂದ ಬಾಲಕನ ಮೃತದೇಹವನ್ನು ಗಂಟೆಗಟ್ಟಲೆ ಉಪ್ಪಿನ ರಾಶಿಯಲ್ಲಿಟ್ಟ ಘಟನೆ ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದಲ್ಲಿ ನಡೆದಿದೆ.

‌ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹ ಉಪ್ಪಿನ ರಾಶಿಯಲ್ಲಿ  ಇಟ್ಟರೇ ಬದುಕುತ್ತಾನೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿತ್ತು. ಅದರಂತೆ ಸಿರವಾರ ಗ್ರಾಮದ ಸುರೇಶ್(10) ಎನ್ನುವ ಬಾಲಕ ಸ್ನೇಹಿತರೊಂದಿಗೆ ಈಜಲು ಹೋಗಿ  ನೀರಿನ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಕೂಡಲೇ ಪೋಷಕರು ಹಾಗೂ ಗ್ರಾಮಸ್ಥರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕನ ಮೃತದೇಹವನ್ನು ಉಪ್ಪಿನ ರಾಶಿಯಲ್ಲಿಟ್ಟಿದ್ದಾರೆ.

Tap to resize

Latest Videos

undefined

ಸಮುದ್ರ ಮಧ್ಯದಲ್ಲಿ ಮುಳುಗಿದ ಹಡಗು: ಈಜು ಬರದಿದ್ದರೂ 11 ದಿನ ಬದುಕುಳಿದವನ ನೈಜ ಕಥೆ

ನಾಲ್ಕೈದು ಚೀಲದಲ್ಲಿ ಉಪ್ಪು ತಂದು ಮೃತ ದೇಹವನ್ನು ಉಪ್ಪಿನಲ್ಲಿಟ್ಟು ಜೀವ ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡಿದ್ದಾರೆ. ನಾಲ್ಕು ತಾಸುಗಳ ಕಾಲ ನೋಡಿದ್ದಾರೆ. ಆದ್ರೆ, ಬಾಲಕನ ಬರಲಿಲ್ಲ, ಕೊನೆಗೆ ಪೋಷಕರು ಬಾಲಕನ ಅಂತ್ಯಸಂಸ್ಕಾರ ಮಾಡಿದ್ದಾರೆ.

‌ಇದರೊಂದಿಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹ ಉಪ್ಪಿನ ರಾಶಿಯಲ್ಲಿ  ಇಟ್ಟರೇ ಬದುಕುತ್ತಾನೆ ಎನ್ನುವ ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡಿತ್ತು. ಆದ್ರೆ, ಇದೀಗ ಆ ಸುದ್ದಿ ನಿಜಾಂಶದಲ್ಲಿ ಸುಳ್ಳಾಗಿಸಿದೆ.

ನೀರಿನಲ್ಲಿ ಮುಳುಗಿ ಸತ್ತವರನ್ನು ಎರಡು ಗಂಟೆಗಳ ಒಳಗೆ ಉಪ್ಪಿನಲ್ಲಿ ಮುಳುಗಿಸಿಟ್ಟರೇ, ಅವರು ಮತ್ತೆ ಬದುಕು ತ್ತಾರೆ ಎನ್ನುವ ಪೋಸ್ಟ್ ನೋಡಿದ್ದ ಕೆಲ ಗ್ರಾಮಸ್ಥರು, ನೂರಕ್ಕೂ ಹೆಚ್ಚು ಕೆ.ಜಿ ಉಪ್ಪನ್ನು ತಂದು ಅದರಲ್ಲಿ ಮುಖವನ್ನಷ್ಟೆ ಕಾಣುವಂತೆ ಬಾಲಕನ ಶವವನ್ನು ಮುಚ್ಚಿಟ್ಟಿದ್ದಾರೆ. ಅದ್ರೇ,  ನಾಲ್ಕೈದು ಗಂಟೆಗಳ ಕಾಲ ಇಟ್ಟರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಬಾಲಕನ ಶವಸಂಸ್ಕಾರ ಮಾಡಿದ್ದೇವೆಂದು‌‌ ಎಂದು ಗ್ರಾಮದ ತಿಪ್ಪೇಸ್ವಾಮಿ ಮತ್ತು ಗಣೇಶ್  ಹೇಳಿದ್ದಾರೆ.

ಎಷ್ಟೇ ಹೊತ್ತಾದ್ರೂ‌ ಬದುಕುಳಿಯದ‌‌ ಬಾಲಕ
ಆರಂಭದಲ್ಲಿ ಈ ರೀತಿ ಮಾಡಲು ಪರವಿರೋಧ ಚರ್ಚೆಯಾಗಿದೆ. ಆದ್ರೇ, ಗ್ರಾಮಸ್ತರು ಹೇಳೋ ಪ್ರಕಾರನ ಹೇಗಿದ್ರೂ ಸಾವನ್ನಪ್ಪಿದ್ದಾನೆ. ಬದುಕಿಸೋ ಒಂದು ಪ್ರಯತ್ನವನ್ನು ಮಾಡೋಣವೆಂದು ನಿರ್ಧಾರ ಮಾಡಿದ್ರು ಆದ್ರೇ, ಅದು ಫಲಕಾರಿಯಾಗಲಿಲ್ಲವೆನ್ನುತ್ತಿದ್ದಾರೆ.  ಈ ರೀತಿಯ ಪ್ರಯತ್ನ ಮಾಡೋದಕ್ಕಾಗಿ ಕುಟುಂಬಸ್ಥರ ಮತ್ತು ಸ್ಥಳೀಯ ಪಂಚಾಯತಿ ಸದಸ್ಯರ ಅನುಮತಿ ಸೇರಿದಂತೆ ಗ್ರಾಮಸ್ಥರ ಒಮ್ಮತದ ನಿರ್ಧಾರದಿಂದ ಈ ರೀತಿ ಮಾಡಿದ್ರಂತೆ. ಅಲ್ಲದೇ  ಕಳೆದೊಂದು ತಿಂಗಳಿಂದ ಇಂತಾಹದ್ದೊಂದು ಪೋಸ್ಟ್ ಎಲ್ಲೇಡೆ ವೈರಲ್ ಆಗೋರೋ ಹಿನ್ನೆಲೆ ಇದನ್ನೊಮ್ಮೆ ಯಾಕೆ ಪ್ರಯತ್ನ ಮಾಡಬಾರದೆಂದು ಮಾಡಿದ್ದಾರೆ. ಆದ್ರೇ, ಇದೆಲ್ಲ ಪ್ರೋಸೆಸ್ ಮಾಡೋವರೆಗೂ ಕುಟುಂಬಸ್ಥರ ರೋದನೆ ಮಾತ್ರ ಮುಗಿಲು ಮುಟ್ಟಿತ್ತು ಎಂದು ಘಟನೆ ಬಗ್ಗೆ ಸಂಬಂಧಿಕರಾದ ವಿರೂಪಾಕ್ಷಿ  ವಿವರಿಸಿದ್ರು. 

ಎಷ್ಟಕ್ಕೆ ಬೇಕು ಅಷ್ಟನ್ನು ಮಾತ್ರ ನಂಬಿ
ಸಾಮಾಜಿಕ ಜಾಲ ತಾಣದಲ್ಲಿ ಬರೋ ಎಲ್ಲ ವಿಷಯಗಳು ನಿಜವಾಗಿರೋದಿಲ್ಲ ಹಾಗಂತ ಅಲ್ಲಿ ಬರೋ  ವಿಷಯಗಳೇಲ್ಲ ಸುಳ್ಳು ಎಂದೇನಲ್ಲ. ಆದ್ರೇ, ಯಾವುದನ್ನು ಎಷ್ಟಕ್ಕೆ ಬಳಸಬೇಕೋ ಎಷ್ಟಕ್ಕೆ ನಂಬಬೇಕೋ ಅಷ್ಟಕ್ಕೆ ಮಾತ್ರ ಸೀಮಿತವಾಗಿರಬೇಕು. ಅತಿಯಾಗಿ ನಂಬಿದ್ರೇ, ಈ ರೀತಿಯ ಅವಾಂತರವಾಗುತ್ತದೆ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

click me!