ಮುರುಘಾಶ್ರೀ ಜೈಲಲ್ಲಿದ್ದರೂ ನಡೆಯುತ್ತಿದೆ ಮುರುಘಾಮಠದಲ್ಲಿ ಸಾಮೂಹಿಕ ವಿವಾಹ

By Ravi Nayak  |  First Published Sep 5, 2022, 12:22 PM IST

ಚಿತ್ರದುರ್ಗ ಮುರುಘಾ ಮಠದಲ್ಲಿ ಪ್ರತಿ ತಿಂಗಳು ಮುರುಘಾರಾಜೇಂದ್ರ ಬೃಹನ್ಮಠದಲ್ಲಿ ಇಂದು (ಸೆ.5) ಸಾಮೂಹಿಕ ವಿವಾಹ ನಡೆಯಲಿದೆ. ಇದೇ ಮೊದಲ ಬಾರಿಗೆ ಮುರುಘಾ ಶರಣರು ಇಲ್ಲದೇ ಕಾರ್ಯಕ್ರಮ ನಡೆಯುತ್ತಿರುವುದರಿಂದ ಅನುಭವ ಮಂಟಪದಲ್ಲಿ ಎಂದಿನ ಸಂಭ್ರಮ ಮರೆಯಾಗಿದೆ.


ಚಿತ್ರದುರ್ಗ (ಸೆ.5:) : ಚಿತ್ರದುರ್ಗ ಮುರುಘಾ ಮಠದಲ್ಲಿ ಪ್ರತಿ ತಿಂಗಳು ಮುರುಘಾರಾಜೇಂದ್ರ ಬೃಹನ್ಮಠದಲ್ಲಿ ಇಂದು (ಸೆ.5) ಸಾಮೂಹಿಕ ವಿವಾಹ ನಡೆಯಲಿದೆ. ಇದೇ ಮೊದಲ ಬಾರಿಗೆ ಮುರುಘಾ ಶರಣರು ಇಲ್ಲದೇ ಕಾರ್ಯಕ್ರಮ ನಡೆಯುತ್ತಿರುವುದರಿಂದ ಅನುಭವ ಮಂಟಪದಲ್ಲಿ ಎಂದಿನ ಸಂಭ್ರಮ ಮರೆಯಾಗಿದೆ.

ನಾನು ಮುಂದೆನೂ ಮುರುಘಾ ಮಠಕ್ಕೆ ಹೋಗ್ತೀನಿ; ಮಾಜಿ ಸಚಿವ ಎಂ.ಬಿ.ಪಾಟೀಲ್

Latest Videos

undefined

\ಮುರುಘಾ(Murughashree) ಶರಣರನ್ನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪದ ಹಿನ್ನೆಲೆ ಶ್ರೀಗಳನ್ನು ಬಂಧಿಸಿದ್ದಾರೆ ಹೀಗಾಗಿ ಈ ಬಾರಿ ಮುರುಘಾಶ್ರೀ ಇಲ್ಲದ ಸಾಮೂಹಿಕ ವಿವಾಹ ಭಕ್ತರ ಮನಸಿನಲ್ಲಿ ಬೇಸರವುಂಟು ಮಾಡಿದೆ. ಅದ್ಯಾಗೂ ಭಕ್ತರು ಎಂದಿನಂತೆ ಸಹಕರಿಸುವಂತೆ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಹೆಬ್ಬಾಳು ವಿರಕ್ತಮಠದ ರುದ್ರೇಶ್ವರ ಸ್ವಾಮಿಗಳು ಮನವಿ ಮಾಡಿಕೊಂಡಿದ್ದಾರೆ.

ಪೋಕ್ಸೋ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಬಂಧಿತರಾಗಿದ್ದರೂ ಸಹ ಮುರುಘಾ ಮಠದಲ್ಲಿ ಪ್ರತಿ ತಿಂಗಳು ನಡೆಯುವಂತೆ ಸಾಮೂಹಿಕ ಕಲ್ಯಾಣ ಮಹೋತ್ಸವಕ್ಕೆ ನಡೆಯಲಿದೆ. ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತದಲ್ಲಿ ನಡೆಯುತ್ತಿರುವ ಕಲ್ಯಾಣ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಆರು  ಜೋಡಿ ವಧು–ವರರು ಅನುಭವ ಮಂಟಪದಲ್ಲಿ ಸಿದ್ಧರಾಗಿದ್ದಾರೆ.

ಏಳು ಜೋಡಿಗಳು ನೋಂದಣಿಯಾಗಿದ್ದರೂ.ಕೊನೆಗೆ ಆರು ಜೋಡಿಗಳು ಮಾತ್ರ ವೇದಿಕೆ ಮೇಲೆ ಅಸೀನರಾಗಿದ್ದಾರೆ. ವಧು-ವರರ ಜೊತೆ ಕುಟುಂಬಸ್ಥರು ಸಹ ಸಭಾಂಗಣದಲ್ಲಿ ನೆರೆದಿದ್ದಾರೆ ಗುರುಮಠಕಲ್‌ ಶಾಖಾ ಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಉಪಸ್ಥಿತಿ. ಮಠದಲ್ಲಿ 32 ವರ್ಷಗಳಿಂದ ಪ್ರತಿ ತಿಂಗಳ 5ರಂದು  ಬಸವ ಕೇಂದ್ರ ಮುರುಘರಾಜೇಂದ್ರ ಬೃಹನ್ಮಠ, ಎಸ್ ಜೆಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್ ನಿಂದ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ

ಗ್ರಹಣ, ಅಮಾವಾಸ್ಯೆ ದಿನವೂ ಸಾಮೂಹಿಕ ವಿವಾಹ ಸ್ಥಗಿತಗೊಂಡಿರಲಿಲ್ಲ. ಆದರೆ ಮುರುಘಾಶ್ರೀ ಇಲ್ಲದೆ ನಡೆಯುತ್ತಿರುವ ಸಾಮೂಹಿಕ ವಿವಾಹ ಇಂದು ಸಂಭ್ರಮ ಕಾಣುತ್ತಿಲ್ಲ.POCSO Case: ಮುರುಘಾಶ್ರೀ ವಿರುದ್ಧ ಪ್ರಕರಣ ದಾಖಲು, ಮೊದಲ ಬಾರಿಗೆ ಸಿಎಂ ಪ್ರತಿಕ್ರಿಯೆ

click me!