Heavy Rain: ಅತಿವೃಷ್ಟಿ ಹಾನಿಗೆ ಹಂತ ಹಂತವಾಗಿ ಪರಿಹಾರ

By Kannadaprabha NewsFirst Published Sep 5, 2022, 1:44 PM IST
Highlights

ಪ್ರಸತ್ತ ಮುಂಗಾರು ಅವಧಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅತಿವೃಷ್ಟಿಹಾಗೂ ಪ್ರವಾಹ ಪರಿಸ್ಥಿತಿಗಳಿಂದ ಉಂಟಾದ ಹಾನಿಗೆ ಹಂತ ಹಂತವಾಗಿ ಪರಿಹಾರ ಇತರಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಆಡಳಿತ ಅಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಯರಾಮ… ರಾಯಪುರ ಹೇಳಿದರು

ಮಂಡ್ಯ (ಸೆ.5) : ಪ್ರಸತ್ತ ಮುಂಗಾರು ಅವಧಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅತಿವೃಷ್ಟಿಹಾಗೂ ಪ್ರವಾಹ ಪರಿಸ್ಥಿತಿಗಳಿಂದ ಉಂಟಾದ ಹಾನಿಗೆ ಹಂತ ಹಂತವಾಗಿ ಪರಿಹಾರ ಇತರಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಆಡಳಿತ ಅಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಯರಾಮ… ರಾಯಪುರ ಹೇಳಿದರು. ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲೆಯಲ್ಲಿ ಅತಿವೃಷ್ಟಿಹಾಗೂ ಪ್ರವಾಹ ಪರಿಸ್ಥಿತಿಗಳಿಂದ ಉಂಟಾದ ಹಾನಿ ಮತ್ತು ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತಂತೆ ಅಧಿಕಾರಿಗಳ ಮಟ್ಟದ ಪ್ರಗತಿಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

Crop Damage: ಬೆಳೆಹಾನಿ ಪರಿಹಾರಕ್ಕೆ ಶೀಘ್ರ ಕ್ರಮವಹಿಸಿ: ಸಚಿವ ಬಿ.ಸಿ.ಪಾಟೀಲ್‌ ಸೂಚನೆ

ಮಳೆಯಿಂದ ಮಂಡ್ಯ ತಾಲೂಕು ಮತ್ತು ನಾಗಮಂಗಲ ತಾಲೂಕಿನಲ್ಲಿ ಇಬ್ಬರು ಸಾವನ್ನಪ್ಪಿದ್ದು ಅವರಿಗೆ 10 ಲಕ್ಷ ರು. ಪರಿಹಾರ ವಿತರಿಸಲಾಗಿದೆ. ಭಾರೀ ಮಳೆಯಿಂದ 42 ಮನೆಗಳು ಸಂಪೂರ್ಣ, 159 ಮನೆಗಳು ತೀವ್ರ ಹಾಗೂ 707 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಈ ಎಲ್ಲ ಮನೆಗಳಿಗೆ 5,44,65,100 ರು., 8 ದೊಡ್ಡ ಜಾನುವಾರು, 46 ಸಣ್ಣ ಜಾನುವಾರುಗಳು, 4200 ಕೋಳಿಗಳು ಸಾವನ್ನಪ್ಪಿರುವುದಕ್ಕೆ 3,88,000 ರು. ಪರಿಹಾರ ವಿತರಿಸಲಾಗಿದೆ ಎಂದು ವಿವರಿಸಿದರು. ಜಿಲ್ಲೆಯಲ್ಲಿ ಮಳೆಯಿಂದಾಗಿ ಸುಮಾರು 750 ಕೋಟಿ ರು.ಗಳಷ್ಟುಹಾನಿಯಾಗಿದೆ. ಸರ್ಕಾರ ಹಂತ ಹಂತವಾಗಿ ಪರಿಹಾರ ಬಿಡುಗಡೆ ಮಾಡುತ್ತಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಲ್ಲಿ 19 ಕೋಟಿ ರು. ಹಣ ಇದ್ದು ಹಾನಿಗೆ ಅನುಗುಣವಾಗಿ ಇಲಾಖಾವಾರು ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡುತ್ತಿದೆ ಎಂದರು. ಕೆ.ಆರ್‌.ಪೇಟೆ ತಾಲೂಕಿನ ಅಘಲಯ, ದೊಡ್ಡಕ್ಯಾತನಹಳ್ಳಿ ಕೆರೆ, ಮಾವಿನ ಕೊಪ್ಪಲು ಕೆರೆ ಹಾಗೂ ಲೋಕನಹಳ್ಳಿ ಕೆರೆಗಳು ಭಾಗಶಃ ಹಾನಿಗೊಳಗಾಗಿವೆ. ಈ ಕೆರೆಗಳ ವೀಕ್ಷಣೆ ನಡೆಸಲಾಗಿದೆ. ಕೆರೆಗಳ ಕೋಡಿಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುವ ಬದಲು ಶಾಶ್ವತ ಪರಿಹಾರ ದೊರಕಿಸುವ ನೆಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಅತಿವೃಷ್ಟಿ ಹಾನಿ: ಸರ್ಕಾರ ಪ್ರತಿ ಹೆಕ್ಟೇರ್‌ಗೆ 50,000 ರೂ. ಪರಿಹಾರ ನೀಡಲಿ

ಮಳೆಯಿಂದ ಲೋಕೋಪಯೋಗಿ ಇಲಾಖೆ ರಸ್ತೆಗಳು, ಗ್ರಾಮೀಣ ರಸ್ತೆಗಳು, ಕಿರು ಸೇತುವೆಗಳು ಸೇರಿದಂತೆ ನಾಲ ರಚನೆಗಳಿಗೂ ಆನೆ ಉಂಟಾಗಿದೆ. ಇವೆಲ್ಲವನ್ನೂ ಮುಂದಿನ ಜನವರಿ ತಿಂಗಳವರೆಗೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಮೊದಲಿನ ಸ್ಥಿತಿಗೆ ತರಲಾಗುವುದು ಎಂದು ಭರವಸೆ ನೀಡಿದರು. ಪ್ರವಾಹ ಹಾಗೂ ಮಳೆಯಿಂದಾಗಿ ಶಾಲೆಗಳ ದೊರಸ್ತಿಗೆ 46 ಲಕ್ಷ ರು. ಅಂಗನವಾಡಿ ಕೇಂದ್ರಕ್ಕೆ 2 ಲಕ್ಷ ರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 55.6 ಲಕ್ಷರು. ಅನುದಾನ ಬಿಡುಗಡೆಗೆ ಸರ್ಕಾರ ಅನುಮೋದನೆ ನೀಡಿದೆ. ಪ್ರತಿ ಶಾಲೆಗಳನ್ನು ಎರಡರಿಂದ ಮೂರು ಹೆಚ್ಚುವರಿ ಕೊಠಡಿ, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲು ನಿರ್ಧರಿಸಲಾಗಿದ್ದು ಶೌಚಾಲಯ ನಿರ್ಮಾಣಕ್ಕೆ 2.10 ಕೋಟಿ ರು ಹಾಗೂ ಕೊಠಡಿಗಳ ನಿರ್ಮಾಣಕ್ಕೆ 3 ರಿಂದ 4 ಕೋಟಿ ರೂ ಬಿಡುಗಡೆ ಮಾಡಲಾಗುವುದು ಎಂದರು.

click me!