ಚಿಕ್ಕಮಗಳೂರು: ಅಂತ್ಯಸಂಸ್ಕಾರಕ್ಕೆ ಜಾಗವಿಲ್ಲದೆ ಪಂಚಾಯಿತಿ ಮುಂದೆ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ

By Girish GoudarFirst Published Oct 30, 2024, 8:57 PM IST
Highlights

ಮೃತ ರಂಗನಾಥ್ ಗ್ರಾಮಸ್ಥರೇ ಆದರೂ ಮನೆಯವರು ಇಲ್ಲ, ಸ್ವಂತ ಜಾಗವೂ ಇಲ್ಲ. ಗ್ರಾಮಸ್ಥರೇ ಅಂತ್ಯ ಸಂಸ್ಕಾರಕ್ಕೆ ಮುಂದಾದರೂ ಜಾಗವಿಲ್ಲ. ಹತ್ತಾರು ಬಾರಿ ಗ್ರಾಪಂ ಗಮನಕ್ಕೆ ತಂದರೂ ಯಾವುದೇ ಪ್ರಯೋಜನಾಗಿಲ್ಲ. ಮೃತದೇಹವನ್ನು ಪಂಚಾಯಿತಿ ಮುಂದಿಟ್ಟು ಪ್ರತಿಭಟನೆ ನಡೆಸಿದ ಗ್ರಾಮಸ್ಥರು 

ಚಿಕ್ಕಮಗಳೂರು(ಅ.30):  ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಗ್ರಾಮಸ್ಥರು ಮೃತದೇಹವಿಟ್ಟ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಉಡೇವಾ ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. 1200 ಮನೆಗಳ ಗ್ರಾಮಕ್ಕೆ ಹೆಣ ಊಳಲು ಸ್ಮಶಾನವೇ ಇಲ್ಲ. ಹೀಗಾಗಿ ಇಲ್ಲಿನ ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಂಗನಾಥ್ (75) ಎಂಬುವರು ವಯೋಸಹಜ ಕಾಯಿಲೆಯಿಂದ ಇಂದು ಸಾವನ್ನಪ್ಪಿದ್ದರು. ಹೆಣ ಊಳಲು ಜಾಗವಿಲ್ಲದೆ ಉಡೇವಾ ಗ್ರಾಮಸ್ಥರು ಹೆಣವನ್ನ ಗ್ರಾ.ಪಂ ಮುಂದೆ ಇಟ್ಟಿದ್ದಾರೆ. ಸ್ಮಶಾನದ ಜಾಗವಿದೆ, ಉಳ್ಳವರು ಒತ್ತುವರಿ ಮಾಡಿ ತೋಟ ಮಾಡಿದ್ದಾರೆ. ಕಳೆದ 50 ವರ್ಷಗಳಿಂದಲೂ ಗ್ರಾಮದಲ್ಲಿ ಸ್ಮಶಾನವಿಲ್ಲ. ಇಷ್ಟು ವರ್ಷ ಸಾವನ್ನಪ್ಪಿದವರನ್ನ ಮನೆಯವರು ತಮ್ಮ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡ್ತಿದ್ರು. 

Latest Videos

ಪ್ರಧಾನಿಯಿಂದ ಕ್ಷೇತ್ರದ ಜನರ ಚಿಕಿತ್ಸೆಗೆ ಅರ್ಧ ಕೋಟಿ ಹಣ ತಂದ ಸಂಸದ ಕೋಟಾ!c

ಮೃತ ರಂಗನಾಥ್ ಗ್ರಾಮಸ್ಥರೇ ಆದರೂ ಮನೆಯವರು ಇಲ್ಲ, ಸ್ವಂತ ಜಾಗವೂ ಇಲ್ಲ. ಗ್ರಾಮಸ್ಥರೇ ಅಂತ್ಯ ಸಂಸ್ಕಾರಕ್ಕೆ ಮುಂದಾದರೂ ಜಾಗವಿಲ್ಲ. ಹತ್ತಾರು ಬಾರಿ ಗ್ರಾಪಂ ಗಮನಕ್ಕೆ ತಂದರೂ ಯಾವುದೇ ಪ್ರಯೋಜನಾಗಿಲ್ಲ. ಮೃತದೇಹವನ್ನು ಪಂಚಾಯಿತಿ ಮುಂದಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.  

click me!