ಬೆಂಗಳೂರನ್ನು 73 ಕಿ.ಮೀ ಕಾಲ್ನಡಿಗೆಯಲ್ಲೇ ಸುತ್ತಿ ಭಾರತದ ಭೂಪಟ ಅರಳಿಸಿದ ರೂಪರೇಲಿಯಾ!

Published : Aug 23, 2023, 03:31 PM ISTUpdated : Aug 23, 2023, 03:38 PM IST
ಬೆಂಗಳೂರನ್ನು 73 ಕಿ.ಮೀ ಕಾಲ್ನಡಿಗೆಯಲ್ಲೇ ಸುತ್ತಿ ಭಾರತದ ಭೂಪಟ ಅರಳಿಸಿದ ರೂಪರೇಲಿಯಾ!

ಸಾರಾಂಶ

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಕಾಸ ರೂಪರೇಲಿಯಾ ಎನ್ನುವವರು ಬೆಂಗಳೂರು ನಗರದಲ್ಲಿ 13 ಗಂಟೆಗಳಲ್ಲಿ 73 ಕಿ.ಮೀ. ನಡೆಯುವ ಮೂಲಕ ಭಾರತದ ಭೂಪಟ ಬಿಡಿಸಿದ್ದಾರೆ.

ಬೆಂಗಳೂರು (ಆ.23): ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ (India 77th Independence day) ಅಂಗವಾಗಿ ವಿಕಾಸ ರೂಪರೇಲಿಯಾ ಎನ್ನುವವರು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕೇವಲ 13 ಗಂಟೆಗಳಲ್ಲಿ 73 ಕಿಲೋಮೀಟರ್‌ ನಡೆಯುವ ಮೂಲಕ ಭಾರತದ ಭೂಪಟವನ್ನು ಚಿತ್ರಿಸಿದ್ದಾರೆ.

ಹೌದು, ದೇಶಕ್ಕಾಗಿ ಹಾಗೂ ದೇಶದ ಮೇಲಿನ ಅಭಿಮಾನಕ್ಕಾಗಿ ಹಲವು ವಿಶೇಷ ಚಟುವಟಿಕೆಗಳನ್ನು ಮಾಡುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಭಾರತದ ಬಾವುಟವನ್ನು ಹಿಡಿದುಕೊಂಡು ಸಿಲಿಕಾನ್‌ ಸಿಟಿ ಬೆಂಗಳೂರಿನ ಮೂಲೆ, ಮೂಲೆಗಳು, ಗಲ್ಲಿಗಳು, ಕೊಳೆಗೇರಿ, ಕೆರೆ ದಂಡೆ, ರಾಜಕಾಲುವೆ ಹಾಗೂ ಕಸದ ರಾಶಿಗಳನ್ನು ದಾಟಿಕೊಂಡು 13 ಗಂಟೆಗಳಲ್ಲಿ ಬರೋಬ್ಬರಿ 73 ಕಿಲೋಮೀಟರ್‌ ನಡೆದಿದ್ದಾರೆ. ಈ ಮೂಲಕ ಬೆಂಗಳೂರಿನ ಸುತ್ತಲಿನ ಪ್ರದೇಶದಲ್ಲಿ ಭಾರತದ ಭೂಪಟವನ್ನು ರಚಿಸಿದ್ದಾರೆ. ಈ ಸಾಧನೆಯ ಬಗ್ಗೆ ಸ್ವತಃ ವಿಕಾಸ ರೂಪರೇಲಿಯಾ ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ವಿಕಾಸ ರೂಪರೇಲಿಯಾ (51) ಅವರು ನಡೆದುಕೊಂಡು ಹೋಗಿ ಬೆಂಗಳೂರಿನೊಳಗೆ ಭಾರತದ ನಕ್ಷೆಯನ್ನು ಅರಳಿಸಿ ಗಮನ ಸೆಳೆದಿದ್ದಾರೆ. ರಾಷ್ಟ್ರಧ್ವಜವನ್ನು ಹಿಡಿದು ಹಗಲು ಹಾಗೂ ರಾತ್ರಿಯೆಲ್ಲಾ ನಡೆದು ಅದನ್ನು ವೀಡಿಯೋ ಮಾಡಿ ಭಾರತದ ನಕ್ಷೆಯನ್ನು (India map on Bengaluru) ಗುರುತಿಸಿದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಗರದ ವಿವಿಧ ಮಾರ್ಗದಲ್ಲಿ ನಡೆಯುತ್ತ ಸಾಗಿದ ದಾರಿಯನ್ನು ನೋಡಿದಾಗ ಅದು ಭಾರತದ ನಕ್ಷೆಯಂತೆಯೇ ಕಂಡುಬಂದಿದೆ. ಇನ್ನು ಹೀಗೆ ಭಾರತದ ನಕ್ಷೆಯನ್ನು ನಿರ್ಮಿಸಲು ಹಾಗೂ ಯಾವ ಪ್ರದೇಶದಲ್ಲಿ ಹೋಗಬೇಕು ಎನ್ನುವುದರ ಬಗ್ಗೆ ಸಾಕಷ್ಟು ಪೂರ್ವತಯಾರಿ ನಡೆಸಿದ ಯೋಜನೆಯನ್ನು ರೂಪಿಸಿಕೊಂಡಿದ್ದರು.

ತಮಿಳುನಾಡಿಗೆ ಕೇವಲ 24 ಟಿಎಂಸಿ ಕಾವೇರಿ ನೀರು ಬಿಟ್ಟಿದ್ದೇವೆ: ಸಿಎಂ ಸಿದ್ದರಾಮಯ್ಯ ಮಾಹಿತಿ

ಸ್ಟ್ರಾವಾ ಅಪ್ಲಿಕೇಷನ್‌ ಬಳಕೆ: ಇನ್ನು ರೂಪರೇಲಿಯಾ ಅವರು ತಮ್ಮ ಸಾಧನೆಗೆ ಸ್ಟ್ರಾವಾ ಅಪ್ಲಿಕೇಶನ್​ (Strava GPS Cycling and Running App) ಬಳಕೆ ಮಾಡಿದ್ದಾರೆ. ಈ ಅಪ್ಲಿಕೇಷನ್ ನಿಗದಿತ ವೇಳೆಯಲ್ಲಿ ನಿಗದಿತ ಗುರಿ ತಲುಪಲು ಮಾರ್ಗದರ್ಶನ ಮಾಡುತ್ತದೆ. ಜೊತೆಗೆ ನಡಿಗೆ, ಓಟ ಹಾಗೂ ಸೈಕಲ್‌ ಸವಾರಿಯ ಬಗ್ಗೆಯೂ ಸಲಹೆ ನೀಡುತ್ತದೆ. ಅದರಂತೆ, ವಿಕಾಸ್‌ ರೂಪರೇಲಿಯಾ ಅವರು ತಮ್ಮ ನಿಗದಿತ ಗುರಿಯಂತೆ ನಡೆದುಕೊಂಡು ಹೋಗುವ ಮೂಲಕ ನಕ್ಷೆಯನ್ನು ಬಿಡಿಸಿದ್ದಾರೆ. 

ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು: ಈ ಕುರಿತು ಮಾಹಿತಿ ಹಂಚಿಕೊಂಡಿರುವ ರೂಪರೇಲಿಯಾ ಅವರು, "ಒಂದೇ ದಿನದಲ್ಲಿ ನಾನು ಅಂದುಕೊಂಡಿದ್ದನ್ನು ಪೂರೈಸಬಹುದೇ ಎಂಬ ಅನುಮಾನವಿತ್ತು. ಏಕೆಂದರೆ ಇದು ಸಣ್ಣ ಸಾಹಸವಲ್ಲ. ಇದು ಪರಿಪೂರ್ಣಗೊಳ್ಳಲು ನನ್ನ ಸ್ನೇಹಿತು ಮತ್ತು ಕುಟುಂಬದವರು ಸಹಕರಿಸಿದ್ದಾರೆ. ಅವರಿಗೆ ವಿಶೇಷ ಧನ್ಯವಾದಗಳು ಮತ್ತು ನಿಮಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು" ಎಂದು ಟ್ವೀಟಿನಲ್ಲಿ ತಿಳಿಸಿದ್ದಾರೆ. ಇನ್ನು ಸ್ವಾತಂತ್ರ್ಯ ದಿನಾಚರಣೆಯ ನಂತರ ಟ್ವೀಟ್ ವೈರಲ್ ಆಗುತ್ತಿದೆ. ಇವರ ಈ ವಿಡಿಯೋ ಅನ್ನು ಈವರೆಗೆ 7,800ಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 183 ಜನರು ಲೈಕ್ ಮಾಡಿದ್ದಾರೆ.

ಮಳೆ ಕೈಕೊಟ್ಟಾಗೆಲ್ಲಾ ತಮಿಳುನಾಡಿನಿಂದ ವಿವಾದ ಸೃಷ್ಟಿ: ಮಾಜಿ ಸಿಎಂ ಡಿವಿಎಸ್‌ ಆಕ್ರೋಶ

ದೇಶಪ್ರೇಮಕ್ಕೆ ಪ್ರೇರಣೆಯಾದ ನಡಿಗೆ: ಇನ್ನು ವಿಕಾಸ ರೂಪರೇಲಿಯಾ ಅವರು 51 ವರ್ಷ ವಯಸ್ಸಿನಲ್ಲಿಯೂ ಉತ್ಸಾಹದ ಮೂಲಕ ಭಾರತದ ನಕ್ಷೆಯನ್ನು ಚಿತ್ರಿಸುವ ಸಂಕಲ್ಪವನ್ನು ಈಡೇರಿಸಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಜೊತೆಗೆ, ದೇಶ ಪ್ರೇಮಕ್ಕೆ ಇದು ಸಾಕ್ಷಿಯಾಗಿದ್ದು, ಅನೇಕರಿಗೆ ದೇಶ ಪ್ರೇಮವನ್ನು ತೋರಿಸುವ ವಿವಿಧ ಬಗೆಯ ಚಟುವಟಿಕೆಗಳನ್ನು ಮಾಡಲು ಪ್ರೇರಣೆಯಾಗಿದೆ. ಇನ್ನು ಹಲವರು ನೀವು ಪ್ರಯಾಣ ಮಾಡುವುದಕ್ಕೂ ಮುನ್ನವೇ ಮಾಡಿಕೊಂಡ ಸಿದ್ಧತೆಗಳನ್ನು ತಿಳಿಸುವಿರಾ? ಎಂದು ಕೇಳಿದ್ದಾರೆ.

PREV
Read more Articles on
click me!

Recommended Stories

ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು
ರೈತ, ಆಟೋ ಚಾಲಕರ ಹೆಣ್ಮಕ್ಕಳಿಗೆ ಗವಿಮಠದಿಂದ ಫ್ರೀ ಕಾಲೇಜು, ಹಾಸ್ಟೆಲ್‌