ಜೆಡಿಎಸ್‌ ಅಧಿಕಾರಕ್ಕೆ ತರಲು ಶ್ರಮಿಸಿ: ತಿಮ್ಮರಾಯಪ್ಪ

By Kannadaprabha News  |  First Published Aug 23, 2023, 8:18 AM IST

ರೈತ ಹಾಗೂ ಜನಸಾಮಾನ್ಯರ ಹಿತದೃಷ್ಟಿಹಿನ್ನಲೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಜನತೆ ಅಪಾರ ಭರವಸೆಯಿಟ್ಟಿದ್ದು ಸಂಘಟಿತರಾಗಿ ಪಕ್ಷ ಬಲಪಡಿಸುವ ಮೂಲಕ ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ತರುವಂತೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.


 ಪಾವಗಡ :  ರೈತ ಹಾಗೂ ಜನಸಾಮಾನ್ಯರ ಹಿತದೃಷ್ಟಿಹಿನ್ನಲೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಜನತೆ ಅಪಾರ ಭರವಸೆಯಿಟ್ಟಿದ್ದು ಸಂಘಟಿತರಾಗಿ ಪಕ್ಷ ಬಲಪಡಿಸುವ ಮೂಲಕ ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ತರುವಂತೆ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.

ತಾಲೂಕು ಜಾತ್ಯತೀತದ ವತಿಯಿಂದ ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್‌ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಹಾಗೂ ಜೆಡಿಎಸ್‌ ಬೆಂಬಲಿತ ಗ್ರಾಪಂ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಭಿನಂದನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

Latest Videos

undefined

ರಾಜ್ಯದಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ ಜಾರಿ ಪರಿಣಾಮ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‌ ಸೌಲಭ್ಯವಿಲ್ಲದೇ ಪರದಾಟ ಶುರುವಾಗಿದೆ. ತಾಲೂಕಿನಲ್ಲಿ ಕುಡಿವ ನೀರು ಹಾಗೂ ಬರಗಾಲ ವ್ಯಾಪಿಸಿಕೊಂಡಿದ್ದು ಸಮಸ್ಯೆ ಎದುರಾಗಿದೆ. ರೈತ ಮತ್ತು ಜನಸಾಮಾನ್ಯರ ಸಮಸ್ಯೆ ನಿವಾರಣೆಯತ್ತ ಸರ್ಕಾರ ಹೆಚ್ಚು ನಿಗಾವಹಿಸಬೇಕು. ಇಲ್ಲಿನ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಹಂತ ಹಂತವಾಗಿ ಹೋರಾಟ ನಡೆಸಬೇಕಿದೆ. ಇದಕ್ಕೆ ಕಾರ್ಯಕರ್ತರು ಸಜ್ಜಾಗುವಂತೆ ಸಲಹೆ ನೀಡಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಸಿ.ಅಂಜಿನಪ್ಪ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್‌ ಸದೃಢವಾಗಿ ಕಟ್ಟುವ ಹಿನ್ನಲೆಯಲ್ಲಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದ್ದು, ಈ ಹಿಂದೆ ತಾಲೂಕು ಜೆಡಿಎಸ್‌ ಕಾರ್ಯಾಧ್ಯಕ್ಷರಾಗಿ ನ್ಯಾಯದಗುಂಟೆ ಎನ್‌.ಎ.ಈರಣ್ಣರನ್ನು ತಾಲೂಕು ಜೆಡಿಎಸ್‌ ಘಟಕದ ನೂತನ ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಿರುವುದಾಗಿ ಘೋಷಿಸಿದರು. ಜೆಡಿಎಸ್‌ ಗೌರವಾಧ್ಯಕ್ಷರಾಗಿ ರಾಜಶೇಖರಪ್ಪ, ಕಾರ್ಯಾಧ್ಯಕ್ಷರಾಗಿ ಗೋವಿಂದಬಾಬು, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸೊಗಡು ವೆಂಕಟೇಶ್‌, ಪ್ರಧಾನ ಕಾರ್ಯದರ್ಶಿಯಾಗಿ ಅಂಜಿನ ನಾಯಕ, ಜೆಡಿಎಸ್‌ ಘಟಕದ ಉಪಾಧ್ಯಕ್ಷರಾಗಿ ನಲ್ಲಪ್ಪ, ಕೆ.ಎನ್‌.ರಾಮಕೃಷ್ಣರೆಡ್ಡಿ, ನಾಗರಾಜ್‌ ಹಾಗೂ ವಕ್ತಾರರನ್ನಾಗಿ ಅಕ್ಕಲಪ್ಪನಾಯ್ಡ್‌ರನ್ನು ಆಯ್ಕೆಗೊಳಿಸಿರುವುದಾಗಿ ಹೇಳಿದರು.

ರಾಜ್ಯ ಜೆಡಿಎಸ್‌ ಘಟಕದ ಉಪಾಧ್ಯಕ್ಷ ಎನ್‌.ತಿಮ್ಮಾರೆಡ್ಡಿ, ಪಕ್ಷದ ನೂತನ ಅಧ್ಯಕ್ಷ ಎನ್‌.ಎ.ಈರಣ್ಣ ಪಕ್ಷ ಸಂಘಟನೆ ಕುರಿತು ಮಾತನಾಡಿದರು. ತಾಲೂಕು ಜೆಡಿಎಸ್‌ ಮಾಜಿ ಅಧ್ಯಕ್ಷ ಬಲರಾಮರೆಡ್ಡಿ, ಮುಖಂಡರಾದ ಎಸ್‌.ವಿ.ಗೋವಿಂದಪ್ಪ, ವಿ.ಸಿ.ಚನ್ನಕೇಶವರೆಡ್ಡಿ, ಎಸ್‌.ಕೆ.ರೆಡ್ಡಿ, ಚನ್ನಮಲ್ಲಯ್ಯ, ಸೊಗಡು ವೆಂಕಟೇಶ್‌, ರಾಮಕೃಷ್ಣರೆಡ್ಡಿ, ಲಕ್ಷ್ಮೇನರಸಿಂಹಪ್ಪ, ಪುರಸಭೆ ಮಾಜಿ ಸದಸ್ಯರಾದ ಮನುಮಹೇಶ್‌, ಗುಟ್ಟಹಳ್ಳಿ ಮಣಿ, ಜಿ.ಎ.ವೆಂಕಟೇಶ್‌, ಲೋಕೇಶ್‌ ಪಾಳೇಗಾರ್‌, ಅಪ್‌ಬಂಡೆ ಗೋಪಾಲ್‌, ರೈತ ಸಂಘದ ಅಧ್ಯಕ್ಷ ಗಂಗಾಧರ್‌ನಾಯ್ಡ್‌, ಕಾವಲಗೆರೆ ರಾಮಾಂಜಿನಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕಾರಮೇಶ್‌, ರಂಗಮ್ಮ, ಕೆ.ಟಿ.ಹಳ್ಳಿ ಮಂಜುನಾಥ್‌ ಇತರರಿದ್ದರು.

click me!