Vijayapuara ಆಸ್ಪತ್ರೆ ಅಧೀಕ್ಷಕನ ಕಮಿಷನ್ ದಂಧೆ ಬಯಲಿಗೆಳೆದ Suvarna News

By Suvarna News  |  First Published May 30, 2022, 4:35 PM IST
  • ತಾಲೂಕಾಸ್ಪತ್ರೆ ಅಧೀಕ್ಷಕನ ಕಮೀಷನ್‌ ದಂಧೆ ಬಯಲಿಗೆಳೆದ ಏಷ್ಯಾನೆಟ್‌ ಸುವರ್ಣ ನ್ಯೂಸ್!‌
  • ಇಂಡಿ ಆಸ್ಪತ್ರೆ ಸಿಬ್ಬಂದಿಯಿಂದ 35% ಕಮೀಷನ್‌ ವಸೂಲಿ ಪ್ರಕರಣ!
  • 72 ಗಂಟೆಯೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ ಡಿಸಿ!

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್ 

ವಿಜಯಪುರ (ಮೇ.30): ಜಿಲ್ಲೆಯ ಇಂಡಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ 35% ಕಮೀಷನ್‌ ದಂಧೆಯನ್ನ (commission deal ) ನಿಮ್ಮ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಯಲಿಗೆಳೆದಿದೆ. ಡಿ ದರ್ಜೆ ಸಿಬ್ಬಂದಿಗಳಿಗೆ ಬಂದಿದ್ದ ಕೋವಿಡ್‌ ರಿಸ್ಕ್‌ ಅಲೌನ್ಸ್‌ ನೀಡೋದಕ್ಕೂ ಆಸ್ಪತ್ರೆ ಕಚೇರಿ ಅಧೀಕ್ಷಕ 35% ಲಂಚ ಪಡೆದಿದ್ದ ಪ್ರಕರಣವನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಯಲಿಗೆ ತಂದಿದೆ.

Latest Videos

undefined

ಫೋನ್‌ ಪೇ ಮೂಲಕ ಲಂಚ ಪಡೆದ ಆಸ್ಪತ್ರೆ ಅಧೀಕ್ಷಕ!
ಇಂಡಿ ತಾಲೂಕು  ಆಸ್ಪತ್ರೆಯ (indi taluk hospital) ಕಚೇರಿ ಅಧೀಕ್ಷರ ಶಿವಾನಂದ ದೇವರ್‌ 12 ಕೋವಿಡ್ ನಲ್ಲಿ ಜೀವ ಪಣಕ್ಕಿಟ್ಟು ದುಡಿದ ಜನ ಡಿ ದರ್ಜೇ ಸಿಬ್ಬಂದಿಗಳಿಂದ ಫೋನ್‌ ಪೇ ಮೂಲಕ ತಲಾ 10 ಸಾವಿರದಂತೆ ಕಮೀಷನ್‌ ಪಡೆದಿದ್ದ. ಕೋವಿಡ್‌ ರಿಸ್ಕ್ ಅಲೌನ್ಸ್‌ ಆಗಿ ಪ್ರತಿಯೊಬ್ಬರಿಗೆ 28 ಸಾವಿರ ಹಣ ಬಂದಿತ್ತು. ಇದನ್ನ ಅಕೌಂಟ್‌ ಗೆ ಜಮೆ ಮಾಡಲು ತಲಾ 10 ಸಾವಿರದಂತೆ ಶೇ.35 ರಷ್ಟು ಕಮೀಷನ್‌ ಪಡೆದಿದ್ದ.

UPSC RESULT 2021; ದಾವಣಗೆರೆಯ ಅವಿನಾಶ್ ದೇಶಕ್ಕೆ 31ನೇ ರ್ಯಾಂಕ್ , ರಾಜ್ಯದ 24 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಏಷ್ಯಾನೆಟ್‌ ಸುವರ್ಣ ನ್ಯೂಸ್ ಬಯಲಿಗೆಳೆದ ಪ್ರಕರಣ!
ಕೋವಿಡ್ ಸಮಯಲ್ಲಿ ಜೀವ ಒತ್ತೆ ಇಟ್ಟು ಹೋರಾಡಿದ ಡಿ ದರ್ಜೆ  ಸಿಬ್ಬಂದಿಗಳಿಗೆ ಆದ ಅನ್ಯಾಯದ ಪ್ರಕರಣವನ್ನ ಕೈಗೆತ್ತಿಕೊಂಡ ನಿಮ್ಮ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಸ್ತೃತವಾಗಿ ವರದಿ ಬಿತ್ತರಿಸಿತ್ತು. ಕೋವಿಡ್‌ ಸಮಯದಲ್ಲಿ ಜೀವಪಣಕ್ಕಿಟ್ಟು ಕೆಲಸ ಮಾಡಿದ್ದ ಸಿಬ್ಬಂದಿಗಳಿಗಾದ ಅನ್ಯಾಯವನ್ನ ಬಯಲಿಗೆ ತಂದಿತ್ತು. ನ್ಯಾಯ ಬೇಕು ಎಂದು ಸಿಬ್ಬಂದಿಗಳು ಸುವರ್ಣ ನ್ಯೂಸ್‌ ಎದುರು ಅಳಲು ತೋಡಿಕೊಂಡಿದ್ದರು.

ಸಿಬ್ಬಂದಿಗೆ ಅಟ್ರಾಸಿಟಿ ಹಾಕುವ ಧಮ್ಕಿ!
ಇನ್ನು ತಮ್ಮಿಂದ ಪಡೆದ 10ಸಾವಿರ ಯಾವ ಕಾರಣಕ್ಕಾಗಿ ಎಂದು ಸಿಬ್ಬಂದಿ ಶಿವಾನಂದ ದೇವರನ್ನ ಪ್ರಶ್ನಿಸಲು ಹೋದಾಗ ಸಿಬ್ಬಂದಿಗಳಿಗೆ ದೇವರ್‌ ಬೆದರಿಕೆ ಹಾಕಿದ್ದ. ಇದನ್ನ ಪ್ರಶ್ನಿಸಿದ್ರೆ ನಿಮ್ಮ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿ ಒಳಗೆ ಹಾಕಿಸೋ ಧಮ್ಕಿ ಹಾಕಿದ್ದ. ಇದರಿಂದ ಹೆದರಿದ್ದ 12 ಜನ ಡಿ ದರ್ಜೆ ನೌಕರರು ಭಯದಲ್ಲಿದ್ದರು.

UPSC ಸಿವಿಲ್ ಸರ್ವಿಸ್ ಫಲಿತಾಂಶ ಬಿಡುಗಡೆ, ಶ್ರುತಿ ಶರ್ಮಾ ದೇಶಕ್ಕೆ ಫಸ್ಟ್

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ
ಇಂಡಿ ತಾಲೂಕಾಸ್ಪತ್ರೆಯಲ್ಲಿ ಕಚೇರಿ ಅಧೀಕ್ಷಕ ನಡೆಸುತ್ತಿದ್ದ 35% ಕಮೀಷನ್‌ ದಂಧೆ ಸ್ಟೋರಿ ಪ್ರಸಾರವಾಗ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿತ್ತು. ನಮ್ಮ ಪ್ರತಿನಿಧಿ ಷಡಕ್ಷರಿ ಕಂಪೂನವರ್‌ ಜೊತೆಗೆ ಮಾತನಾಡಿದ ಅವರು ಸಿಬ್ಬಂದಿಗಳು ಹೆದರದಂತೆ ಅಭಯ ನೀಡಿದರು. ಅಲ್ಲದೆ ಸಿಬ್ಬಂದಿಗಳ ಜೊತೆಗೆ ಜಿಲ್ಲಾಡಳಿತ ಹಾಗೂ ನಾನು ಸಹ ಇದ್ದೇನೆ ಎಂದು ಡಿಸಿ ವಿಜಯಮಹಾಂತೇಶ ದಾನಮ್ಮನವರ್‌ ಹೇಳಿದರು..

ಶೀಘ್ರದಲ್ಲೆ ತನಿಖೆ ನಡೆಸಿ ಕ್ರಮಕ್ಕೆ ಆದೇಶ ನೀಡಿದ ಡಿಸಿ ದಾನಮ್ಮನವರ್ 
ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮೂಲಕ ಪ್ರಕರಣ ಹೊರಬೀಳ್ತಿದ್ದಂತೆ ಕೇವಲ 72 ಗಂಟೆಗಳಲ್ಲಿ ತನಿಖೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್‌. ಅಲ್ಲದೆ ಈಗಾಗಲೇ ಸಂಜೆಯೊಳಗೆ ತನಿಖೆ ನಡೆಸಿ ವರದಿ ನೀಡಲು ಇಂಡಿ ಉಪವಿಭಾಗಾಧಿಕಾರಿಗಳಿಗೆ ಸೂಚನೆಯನ್ನ ನೀಡಿದ್ದೇನೆ. ಸಂಜೆ ಅಂತಾ ನಾಳೆ ವರದಿ ಪಡೆದುಕೊಳ್ಳುತ್ತೇನೆ. ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ..

ವಿಜಯಪುರ ವರದಿಗಾರರಿಂದ ದಾಖಲಾತಿ ಪಡೆದ ಡಿಸಿ 
ಏಷ್ಯಾನೆಟ್‌ ಸುವರ್ಣ ನ್ಯೂಸ್‌ ನಲ್ಲಿ ದಾಖಲೆ ಸಹಿತ ವರದಿ ಪ್ರಸಾರವಾಗ್ತಿದ್ದಂತೆ, ಜಿಲ್ಲಾಧಿಕಾರಿಗಳು ಪೂರಕ ದಾಖಲಾತಿಗಳನ್ನ ವರದಿಗಾರರಿಂದ ಪಡೆದುಕೊಂಡಿದ್ದಾರೆ. ಫೋನ್‌ ಮಾಡಿದ ಸ್ಕ್ರೀನ್‌ ಶಾಟ್‌ ಸೇರಿದಂತೆ ಇತರೆ ಮಹತ್ವದ ದಾಖಲಾತಿಗಳನ್ನ ಪಡೆದುಕೊಂಡಿದ್ದಾರೆ. ಈ ದಾಖಲಾತಿಗಳನ್ನ ಇಂಡಿ ಎಸಿಯವರಿಗೆ ರವಾನಿಸಿದ್ದಾರೆ. ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

ತಾಲೂಕಾಸ್ಪತ್ರೆ ವೈದ್ಯಾಧಿಕಾರಿಗೂ ದೂರು!
ಅನ್ಯಾಯಕ್ಕೊಳಗಾದ 12 ಜನ ಸಿಬ್ಬಂದಿ ಈಗಾಗಲೇ ತಾಲೂಕಾಸ್ಪತ್ರೆ ವೈದ್ಯಾಧಿಕಾರಿಗೆ ದೂರು ಸಹ ನೀಡಿದ್ದಾರೆ.. ತಮಗೆ ಆದ ಅನ್ಯಾಯವನ್ನ ಸರಿ ಪಡೆದಿ ಕ್ರಮಕ್ಕೆ ಮನವಿ ಮಾಡಿದ್ದಾರೆ. ಆದ್ರು ಪ್ರಯೋಜನವಾಗಿಲ್ಲ. ಸಧ್ಯ ಸ್ವತಃ ಜಿಲ್ಲಾಧಿಕಾರಿಗಳೇ ಮರು ತನಿಖೆಗೆ ಆದೇಶ ನೀಡಿದ್ದಾರೆ..

click me!