ಜಾರ್ಖಂಡ್‌ನಲ್ಲಿ ಹೃದಯಾಘಾತದಿಂದ ಕರ್ತವ್ಯ ನಿರತ ಐಆರ್‌ಬಿ ಯೋಧ ಸಾವು

Published : Mar 27, 2022, 12:33 AM ISTUpdated : Mar 27, 2022, 12:52 AM IST
ಜಾರ್ಖಂಡ್‌ನಲ್ಲಿ ಹೃದಯಾಘಾತದಿಂದ ಕರ್ತವ್ಯ ನಿರತ ಐಆರ್‌ಬಿ ಯೋಧ ಸಾವು

ಸಾರಾಂಶ

ತಾಲೂಕಿನ ಬರಡೋಲ ಗ್ರಾಮದ ಮಾಜಿ ಸೈನಿಕ ಹಾಲಿ ಐಆರ್‌ಬಿ (ಭಾರತೀಯ ಸಶಸ್ತ್ರ ಪಡೆ)ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜಕುಮಾರ ಲಕ್ಷ್ಮಣ ಗೊಟ್ಯಾಳ(46) ಅವ​ರು ಜಾರ್ಖಂಡ ರಾಜ್ಯದ ತರಬೇತಿ ಕೇಂದ್ರದಲ್ಲಿ ಹೃದಯಾಘಾತದಿಂದ ಶನಿವಾರ ಬೆಳಗ್ಗೆ ಸಾವನಪ್ಪಿದ ಘಟನೆ ನಡೆದಿದೆ.

ವಿಜಯಪುರ (ಮಾ.27): ತಾಲೂಕಿನ ಬರಡೋಲ ಗ್ರಾಮದ ಮಾಜಿ ಸೈನಿಕ ಹಾಲಿ ಐಆರ್‌ಬಿ (ಭಾರತೀಯ ಸಶಸ್ತ್ರ ಪಡೆ)ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜಕುಮಾರ ಲಕ್ಷ್ಮಣ ಗೊಟ್ಯಾಳ(46) ಅವ​ರು ಜಾರ್ಖಂಡ ರಾಜ್ಯದ ತರಬೇತಿ ಕೇಂದ್ರದಲ್ಲಿ ಹೃದಯಾಘಾತದಿಂದ ಶನಿವಾರ ಬೆಳಗ್ಗೆ ಸಾವನಪ್ಪಿದ ಘಟನೆ ನಡೆದಿದೆ. 20 ವರ್ಷಗಳವರೆಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಅವರು, ಮೂರು ವರ್ಷಗಳಿಂದ ವಿಜಯಪುರ ಐಆರ್‌ಬಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮೂರು ತಿಂಗಳ ಹಿಂದೆ ತರಬೇತಿಗಾಗಿ ಜಾರ್ಖಂಡಗೆ ತೆರಳಿದ ರಾಜಕುಮಾರ ಅವರು, ಶನಿವಾರ ಬೆಳಗ್ಗೆ ರನ್ನಿಂಗ್‌ ಮಾಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. 

ಅವ​ರ ಪಾರ್ಥಿವ ಶರೀರ ಮಾ.27ರಂದು ಬೆಳಗ್ಗೆ ಸ್ವಗ್ರಾಮ ಬರಡೋಲಕ್ಕೆ ಆಗಮಿಸಲಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸ್ವಂತ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಮೃತ ಯೋಧ ರಾಜಕುಮಾರ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ, ತಂದೆ, ತಾಯಿ, ಸಹೋದರ, ಸಹೋದರಿ ಸೇರಿದಂತೆ ಅಪಾರ ಬಂಧು-ಬಳಗ ಇದೆ. ತಾಲೂಕಿನ ಬರಡೋಲ ಗ್ರಾಮದಲ್ಲಿ ಮೃತ ರಾಜಕುಮಾರ ಅವರ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಶ್ರೀನಗರದಲ್ಲಿ ಹಿಮಪಾತದಡಿ ಸಿಲುಕಿ ವಿರಾಜಪೇಟೆ ಯೋಧ ಸಾವು: ಸೇನೆಯಿಂದ ನಿವೃತ್ತಿಯಾಗಿ, ಮರಳಿ ದೇಶ ಸೇವೆಗೆ ಗಡಿಕಾಯಲು ಹೋಗಿದ್ದ ವಿರಾಜಪೇಟೆಯ ಯೋಧರೊಬ್ಬರು ಶ್ರೀನಗರದಲ್ಲಿ ಕರ್ತವ್ಯನಿರತರಾಗಿದ್ದಾಗ ಹಿಮಪಾತದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ವಿರಾಜಪೇಟೆ ಮೀನುಪೇಟೆಯ ಹುಲ್ಲು ವ್ಯಾಪಾರಿ ದಿವಂಗತ ಉಮ್ಮರ್‌ ಮತ್ತು ಆಶಿಯಾ ದಂಪತಿ ಪುತ್ರ ಹವಲ್ದಾರ್‌ ಯು.ಅಲ್ತಾಫ್‌ ಅಹಮ್ಮದ್‌ (37) ಮೃತ ಯೋಧ. ವಿರಾಜಪೇಟೆಯ ಕಾಲೇಜಲ್ಲಿ ಪಿಯುಸಿ ಮುಗಿಸಿದ್ದ ಅಲ್ತಾಫ್‌ ನಂತರ ಸೇನೆ ಸೇರಿಕೊಂಡಿದ್ದರು. 

ಸವದತ್ತಿ: ಪ್ರೀತಿಗಾಗಿ ಸಿಆರ್‌ಪಿಎಫ್‌ ಯೋಧ ಆತ್ಮಹತ್ಯೆ

ಎಓಸಿ ರೆಜಿಮೆಂಟ್‌ನಲ್ಲಿ ಕರ್ತವ್ಯದಲ್ಲಿದ್ದ ಅಲ್ತಾಫ್‌ ಅವರು 16 ವರ್ಷ ಸೇವೆ ಸಲ್ಲಿಸಿ ನಂತರ ನಿವೃತ್ತರಾಗಿದ್ದರು. ಬಳಿಕ ವಿರಾಜಪೇಟೆ ಪೆರುಂಬಾಡಿಯಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಾಣಕ್ಕೂ ಮುಂದಾಗಿದ್ದರು. ಈ ಮಧ್ಯೆ ನಾಲ್ಕು ವರ್ಷಗಳ ಅವಧಿಗೆ ಸೇನೆಗೆ ಮರು ಸೇರ್ಪಡೆಗೊಂಡು ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ತಾಫ್‌ ಅವರಿಗೆ ಇಬ್ಬರು ಪುಟ್ಟಮಕ್ಕಳಿದ್ದಾರೆ. ಅಲ್ತಾಫ್‌ ಅವರ ಅಂತಿಮ ವಿಧಿ-ವಿಧಾನಗಳು ವಿರಾಜಪೇಟೆಯ ಮಲಬಾರ್‌ ರಸ್ತೆಯಲ್ಲಿರುವ ಖಬರಿಸ್ತಾನದಲ್ಲಿ ಗುರುವಾರ ನೆರವೇರಲಿವೆ ಎಂದು ಹೇಳಲಾಗಿದೆ.

ಬಾದಾಮಿ ಯೋಧ ಅಮೃತಸರದಲ್ಲಿ ಸಾವು: ಕಳೆದ ಒಂದು ವಾರದ ಹಿಂದೆ ಸ್ವಗ್ರಾಮಕ್ಕೆ ರಜೆಯ ಮೇಲೆ ಬಂದು ಕರ್ತವ್ಯಕ್ಕೆ ಮರಳಿದ್ದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರ ಗ್ರಾಮದ ಬಿಎಸ್‌ಎಫ್‌ ಯೋಧ ಅನಾರೋಗ್ಯದಿಂದ ಪಂಜಾಬ್‌ನ ಅಮೃತಸರದ ಬಿಎಸ್‌ಎಫ್‌ ಕ್ಯಾಂಪ್‌ನಲ್ಲಿ ಮೃತಪಟ್ಟ ಘಟನೆ ಕಳೆದ ವರ್ಷದ ಆ.03 ರಂದು ನಡೆದಿತ್ತು. 

ಬೇಲೂರ ಗ್ರಾಮದ ಚಂದ್ರಶೇಖರ ಶಂಕ್ರಪ್ಪ ಕಿನ್ನಾಳ (53) ಮೃತಪಟ್ಟಿರುವ ಯೋಧ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವಿದೆ. ಕಳೆದ ಒಂದು ವಾರದ ಹಿಂದೆ ಸ್ವಗ್ರಾಮಕ್ಕೆ ರಜೆಯ ಮೇಲೆ ಬಂದು ಜು.26 ರಂದು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ಕರ್ತವ್ಯದ ವೇಳೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಬೇಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಂತ್ಯಕ್ರಿಯೆ ನಡೆದಿತ್ತು. 

ಮಣಿಪುರದಲ್ಲಿ ಹೃದಯಾಘಾತದಿಂದ ಬೆಳಗಾವಿ ಮೂಲದ ಯೋಧ ಸಾವು

ಹೃದಯಾಘಾತದಿಂದ BSF ಯೋಧ ಸಾವು: ರಜೆ ಮೇಲೆ ಬಂದಿದ್ದ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ತಾವರಗಿ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ಭರಮಗೌಡ ಹೊಸಮನಿ (39) ಮೃತ ಯೋಧರಾಗಿದ್ದಾರೆ.  ಭರಮಗೌಡ ಹೊಸಮನಿ ಕಳೆದ ಹದಿನೆಂಟು ವರ್ಷಗಳಿಂದ BSFನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಭರಮಗೌಡ ಹೊಸಮನಿ ಅವರು ರಜೆ ಮೇಲೆ ಊರಿಗೆ ಬಂದಿದ್ದರು ಎಂದು ತಿಳಿದು ಬಂದಿದೆ. ತಂದೆ ನಿಧನರಾಗಿದ್ದರಿಂದ ಭರಮಗೌಡ ಹೊಸಮನಿ ರಜೆ ಮೇಲೆ ಊರಿಗೆ ಬಂದಿದ್ದರು. ಮೇಘಾಲಯದ ಬಿಎಸ್ಎಫ್ ಬಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

PREV
Read more Articles on
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!