Kolar: ಮಾಲೂರಿನ ಪುಟ್ಟ ಕಂದನ ದೊಡ್ಡ ಪ್ರತಿಭೆ: ಪೋರನಿಗೆ ಸಿಕ್ಕಿದೆ 'ಇಂಡಿಯಾ ಬುಕ್ ಆಫ್ ರೆಕಾರ್ಡ್' ಗರಿ

By Suvarna News  |  First Published Mar 26, 2022, 9:20 PM IST

* ವಸ್ತುಗಳನ್ನ ಕರಾರುವಕ್ಕಾಗಿ ಗುರುತಿಸುತ್ತಾನೆ ಜಿಷ್ಣು ಕುಮಾರ್.
* ಪುಟ್ಟ ಪೋರನಿಗೆ ಪೋಷಕರ ನಿರಂತರವಾದ ಪ್ರೋತ್ಸಾಹ.
* ಅಚ್ಚರಿ ಮೂಡಿಸಿದ ಮಗುವಿನ ನೆನಪಿನ ಶಕ್ತಿ.


ವರದಿ: ದೀಪಕ್, ಏಷಿಯಾನೆಟ್ ಸುವಣ೯ ನ್ಯೂಸ್, ಕೋಲಾರ

ಕೋಲಾರ (ಮಾ.26): ಆ ಮಗು ಇನ್ನು ತಾಯಿಯ ಮಡಿಲಲ್ಲಿ ಹಾಲು ಕುಡಿಯುವ ವಯಸ್ಸು. ಆ ಮಗುವಿನ ವಯಸ್ಸು ಒಂದು ವರ್ಷ ಒಂಬತ್ತು ತಿಂಗಳು. ಅಪ್ಪ ಅಮ್ಮ ಅಂತ ತೊದಲುತ್ತಾ ಕೂಗುವ ದಿನಗಳು. ಆದರೆ, ಈ ಪುಟ್ಟ ಮಗುವಿನ ಜ್ಞಾನಕ್ಕೆ 'ಇಂಡಿಯಾ ಬುಕ್ ಆಫ್ ರೆಕಾರ್ಡ್'ನ (India Book of Records) ಗರಿ ಈಗಾಗಲೆ ಸಿಕ್ಕಿದೆ. ಅರೆ, ಈ ವಯಸ್ಸಿಗೆ ಆ ಮಗುವಿನ ಪ್ರತಿಭೆ ಏನೂ ಅಂತೀರಾ. ಈ ವರದಿ ನೋಡಿ. 

Latest Videos

undefined

ಇಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನ ಇಡ್ತಾಯಿರೋ ಬಾಲಕನ ಹೆಸರು ಜಿಷ್ಣು. ಕೋಲಾರದ ಮಾಲೂರು ಪಟ್ಟಣದ ಗಿರೀಶ್ ಮತ್ತು ಅಶ್ವಿನಿ ದಂಪತಿಯ ಪುತ್ರ. ತಾಯಿ ಮಡಿಲಲ್ಲಿಯೇ ನಲಿಯಬೇಕಾದ ಈ ದಿನಗಳಲ್ಲಿಯೇ  ಈ ಪುಟ್ಟ ಮಗು ಪ್ರತಿಭೆಯ ಮೂಲಕ 'ಇಂಡಿಯಾ ಬುಕ್ ಆಫ್ ರೆಕಾರ್ಡ್' ಸೇರಿದೆ. ರಾಷ್ಟ್ರದ ನಾಯಕರ ಪೋಟೋ ಗುರ್ತಿಸುವುದು ಜಿಷ್ಣುವಿಗೆ ಸರಾಗ. ಹಾಗೇನೆ ವಾಟ್ಸಾಪ್, ಗೂಗಲ್, ಫೇಸ್ಬುಕ್ ಸೇರಿದಂತೆ ಮೊಬೈಲ್ ಮತ್ತು ಕಂಪ್ಯೂಟರ್ ನಲ್ಲಿ ಬಳಸುವ ಅನೇಕ ಗುರುತುಗಳನ್ನ ಗುರುತಿಸುತ್ತಾನೆ ಈ ಹಾಲು ಗಲ್ಲದ ಪೋರಾ.

ಜಿಷ್ಣು ಹುಟ್ಟಿನಿಂದಲೇ ತಾನು ಕಂಡಿದ್ದನ್ನೆಲ್ಲಾ ಗ್ರಹಿಸುತ್ತಾನಂತೆ. ಪ್ರತಿಯೊಂದನ್ನು ಕೇಳಿಸಿಕೊಳ್ಳುವುದು, ಗ್ರಹಿಸುವುದು ನಂತ್ರ ಅದನ್ನ ಅರ್ಥ ಮಾಡಿಕೊಂಡು ಹೇಳುವುದು ಈ ಮಗುವಿನ ವಿಶೇಷತೆ. ಹಣ್ಣು, ತರಕಾರಿಗಳು, ಬಣ್ಣ, ರಾಷ್ಟ್ರೀಯ ನಾಯಕರನ್ನ ಗುರ್ತಿಸುವುದು, ಕೆಲವು ವಸ್ತುಗಳನ್ನ ಹೆಸರಿಸುತ್ತಿದ್ದ. ಇದನ್ನೆಲ್ಲಾ ಗುರುತಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ನವರು ಅತೀ ಚಿಕ್ಕ ವಯಸ್ಸಿನ ಬಾಲಕನ ಸಾಧನೆ ಅಂತ ಪ್ರಶಸ್ತಿ ನೀಡಿ ಗೌರವಿಸಿದೆ. ಒಟ್ಟಿನಲ್ಲಿ ಒಂದೂವರೆ ವರ್ಷ ವಯಸ್ಸಿನ ಪುಟ್ಟ ಕಂದನಲ್ಲಿ ಇಂಥದೊಂದು ಪ್ರತಿಭೆಯಿರುವುದು ಮತ್ತು ಇದನ್ನು ಚಿಕ್ಕ ವಯಸ್ಸಿನಲ್ಲಿಯೇ ಗುರುತಿಸಿರುವ ಪೋಷಕರಿಗೆ ಹ್ಯಾಟ್ಸಾಫ್ ಹೇಳಬೇಕಾಗಿದೆ.

ಅಗಾದ ನೆನಪಿನ ಶಕ್ತಿ: 2 ವರ್ಷದ ಪೋರನ ಹೆಸರು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಬಾಲಕ: ಮೂರುವರೆ ವರ್ಷದ ಆರ್ಯನ್‌ ದೇಸಾಯಿಗೌಡರ ಎಂಬ ಬಾಲಕನ ನೆನಪಿನ ಶಕ್ತಿಗೆ ಇಂಡಿಯಾ ಬುಕ್‌ ಆಫ್‌ರೆಕಾರ್ಡ್ಸ್‌(India Book of Records) ಸಂಸ್ಥೆಯು ತನ್ನ ರೆಕಾರ್ಡ್‌ ಬುಕ್‌ನಲ್ಲಿ ಈತನ ಹೆಸರನ್ನೂ ಸೇರ್ಪೆಡೆ ಮಾಡಿದೆ. ಈ ಕುರಿತು ಶನಿವಾರ ಬಾಲಕನ ತಾಯಿ ಉಮಾ, ತಂದೆ ಉಮೇಶಗೌಡ ದೇಸಾಯಿಗೌಡರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿ, ಕೋವಿಡ್‌(Covid19) ಹಿನ್ನೆಲೆಯಲ್ಲಿ ಆಗಸ್ಟ್‌ ತಿಂಗಳಲ್ಲಿ ಸಂಸ್ಥೆಗೆ ಬಾಲಕನ ನೆನಪಿನ ಶಕ್ತಿಯ ವೀಡಿಯೋಗಳನ್ನು ಅಪ್‌ಲೋಡ್‌ ಮಾಡಲಾಗಿತ್ತು. 

ಇವುಗಳನ್ನು ಗಮನಿಸಿದ ಸಂಸ್ಥೆಯು ಆ. 25ರಂದು ರೆಕಾರ್ಡ್‌ನಲ್ಲಿ ಹೆಸರು ಸೇರ್ಪಡೆ ಮಾಡಿದ್ದು, 2 ದಿನಗಳ ಹಿಂದೆ ಪ್ರಮಾಣಪತ್ರ ಹಾಗೂ ಮೆಡಲ್‌ ಕಳುಹಿಸಿದೆ ಎಂದರು. 3 ವರ್ಷ 7 ತಿಂಗಳ ಆರ್ಯನ್‌ 90 ದೇಶಗಳ ರಾಜಧಾನಿ, 18 ಪಕ್ಷಿಗಳು, 20 ಕಾಡು ಪ್ರಾಣಿಗಳು, ದೇಹದ 20 ಅವಯವಗಳು, 13 ಬಣ್ಣ, 16 ಸಾಕು ಪ್ರಾಣಿಗಳು, 18 ಆಹಾರ ಪದಾರ್ಥಗಳು, 106 ಬಹು ಚಿಹ್ನೆಗಳು (ಲೋಗೊ), 25 ತರಕಾರಿಗಳು ಹಾಗೂ 17 ವಾಹನಗಳನ್ನು ಕೆಲ ಕ್ಷಣಗಳಲ್ಲೇ ಗುರುತಿಸುವ ಸಾಮರ್ಥ್ಯ ಹೊಂದಿದ್ದಾನೆ. ಈ ವಸ್ತುಗಳನ್ನು ಗುರುತಿಸುವಂತಹ 47 ವೀಡಿಯೋಗಳನ್ನು ಸಂಸ್ಥೆಗೆ ಕಳುಹಿಸಲಾಗಿತ್ತು. 

ಕುಮಟಾ: ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ 3 ವರ್ಷದ ಬಾಲಕ

ಅವುಗಳನ್ನು ಗಮನಿಸಿ ಆತನ ಹೆಸರನ್ನು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸೇರ್ಪಡೆ ಮಾಡಿದ್ದಾರೆ ಎಂದರು. ತಾವು ಮನೋವಿಜ್ಞಾನ ವಿಷಯದ ಪ್ರಾಧ್ಯಾಪಕರು ಇರುವ ಕಾರಣ ಈತನಲ್ಲಿ ವಿಭಿನ್ನ ಪ್ರತಿಭೆ(Talent) ಅಡಗಿದೆ ಎಂಬುದನ್ನು 2ನೇ ವರ್ಷದಲ್ಲೇ ಗುರುತಿಸಿದ್ದೆವು. ಬಳಿಕ ಆತನಿಗೆ ಒಂದೊಂದೇ ವಸ್ತುಗಳನ್ನು ತೋರಿಸಿ ಅವುಗಳ ಪರಿಚಯ ಮಾಡಿ ಪದೇ ಪದೇ ಕೇಳಲಾಗುತ್ತಿತ್ತು. ಯಾವುದೇ ಸಂದರ್ಭದಲ್ಲಿ ಕೇಳಿದರೂ ಆತ ಥಟ್ಟನೆ ಹೇಳುತ್ತಿದ್ದ. ಇದೇ ಕಾರಣಕ್ಕೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ನೋಂದಣಿ ಮಾಡಲಾಗಿತ್ತು ಎಂದರು.

click me!