Koppal: ಶಾಸಕ ರಾಘವೇಂದ್ರ ಹಿಟ್ನಾಳ ಜೊತೆ ಸೆಲ್ಫಿಗೆ ಮುಗಿಬಿದ್ದ ವಿದ್ಯಾರ್ಥಿನಿಯರು!

By Suvarna News  |  First Published Mar 26, 2022, 8:46 PM IST

ಈ ಆ್ಯಂಡ್ರ್ಯಾಡ್ ಫೋನ್ ಬಂದಾಗಿನಿಂದ ಸೆಲ್ಫಿ ಕ್ರೇಜ್ ಅಂದ್ರೆ ಕ್ರೇಜ್ ನೋಡಿ. ನಿಂತ ನಿಂತಲ್ಲಿ, ಕೂತ ಕೂತಲ್ಲಿ ಎಲ್ಲಿಗೆ ಹೋದರೂ ಸೆಲ್ಫಿ ತೆಗೆದುಕೊಳ್ಳುವುದು ಒಂದು ಟ್ರೆಂಡ್ ಆಗಿದೆ.‌ ಹೀಗೆ ಇಂದು ಇಲ್ಲೊಂದು ಊರಲ್ಲಿ ಶಾಸಕರೊಬ್ಬರಿಗೆ ಸುತ್ತವರೆದ ವಿದ್ಯಾರ್ಥಿನಿಯರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.


ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಮಾ.26): ಈ ಆ್ಯಂಡ್ರ್ಯಾಡ್ ಫೋನ್ ಬಂದಾಗಿನಿಂದ ಸೆಲ್ಫಿ ಕ್ರೇಜ್ ಅಂದ್ರೆ ಕ್ರೇಜ್ ನೋಡಿ. ನಿಂತ ನಿಂತಲ್ಲಿ, ಕೂತ ಕೂತಲ್ಲಿ ಎಲ್ಲಿಗೆ ಹೋದರೂ ಸೆಲ್ಫಿ (Selfie) ತೆಗೆದುಕೊಳ್ಳುವುದು ಒಂದು ಟ್ರೆಂಡ್ ಆಗಿದೆ.‌ ಹೀಗೆ ಇಂದು ಇಲ್ಲೊಂದು ಊರಲ್ಲಿ ಶಾಸಕರೊಬ್ಬರಿಗೆ ಸುತ್ತವರೆದ ವಿದ್ಯಾರ್ಥಿನಿಯರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಅಷ್ಟಕ್ಕೂ ಯಾವ ಎಂಎಲ್‌ಎಗೆ ಸೆಲ್ಫಿ ತೆಗೆದುಕೊಳ್ಳಲು ವಿದ್ಯಾರ್ಥಿನಿಯರು ಮುಗಿಬಿದ್ದಿದ್ದು ಅಂತೀರಾ? ಹಾಗಾದರೆ ಈ ರಿಪೋರ್ಟ್ ನೋಡಿ.

Latest Videos

undefined

ಈಗ ಪರೀಕ್ಷೆ ಸಮಯ, ಹೀಗಾಗಿ ಬಹುತೇಕ ಶಾಲಾ,ಕಾಲೇಜುಗಳ ತರಗತಿಗಳು ಮುಗಿಯುವ  ಹಂತಕ್ಕೆ ಬಂದಿವೆ. ಈ ಹಿನ್ನಲೆಯಲ್ಲಿ ಈಗ ಏನಿದ್ದರೂ ಬಿಳ್ಕೋಡುಗೆ ಸಮಾರಂಭದ ಸಮಯ. ಹೀಗಾಗಿ ಇಂದು ಕೊಪ್ಪಳ ನಗರದ ತಾಲೂಕು ಪಂಚಾಯತಿ ಹತ್ತಿರ ಇರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯರ ಬಿಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಾಸಕ ರಾಘವೇಂದ್ರ ಹಿಟ್ನಾಳ್ (Raghavendra Hitnal) ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ  ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Koppal: ನಿರುದ್ಯೋಗ ನಿವಾರಣೆಗೆ ಉದ್ಯೋಗ ಮೇಳ: ಶಾಸಕ ಹಿಟ್ನಾಳ

ಈ ವೇಳೆ ವೇದಿಕೆ ಕಾರ್ಯಕ್ರಮ ಮುಕ್ತಾಯವಾಯಿತು. ಬಳಿಕ ಶಾಸಕ ರಾಘವೇಂದ್ರ ಹಿಟ್ನಾಳ್ ಹೊರಗಡೆ ತೆರಳುತ್ತಿದ್ದರು. ಆಗ ನೋಡಿ ಶಾಸಕ ಹಿಟ್ನಾಳ್‌ಗೆ ಸೆಲ್ಫಿ ಸಂಕಟ ಎದುರಾಗಿದ್ದು. ವೇದಿಕೆ ಮೇಲೆಯೇ ಬಂದ ನೂರಾರು ವಿದ್ಯಾರ್ಥಿನಿಯರು ಶಾಸಕ ರಾಘವೇಂದ್ರ ಹಿಟ್ನಾಳ್ ಅವರನ್ನ ಸುತ್ತುವರೆದು ನಿಂತರು. ಬಳಿಕ‌ ಒಬ್ಬೊಬ್ಬರಾಗಿ ಫೋನ್ ಹೊರಗಡೆ ತೆಗೆದು ಸೆಲ್ಫಿ ತೆಗೆದುಕೊಳ್ಳಲು ಆರಂಭ ಮಾಡಿದರು. ಆಗ ರಾಘವೇಂದ್ರ ಹಿಟ್ನಾಳ್‌ಗೆ ಫುಲ್ ಕನ್ಫೂಜನ್ ಅಂದರೆ ಕನ್ಫೂಜನ್.‌ ಯಾರ ಜೊತೆ ಸೆಲ್ಫಿ ತೆಗೆಸಿಕೊಳ್ಳಬೇಕು, ಯಾರಿಗೆ ಫೋಸ್ ಕೊಡಬೇಕು ಎಂದು ತೋಚಲಾರದೆ ಸುಮ್ಮನೇ ನಿಂತೇ ಬಿಟ್ಟರು. 

ಆಗ ಸ್ವತಃ ವಿದ್ಯಾರ್ಥಿನಿಯರೇ ತಮಗೆ ಇಷ್ಟ ಬಂದ ಹಾಗೆ ಸೆಲ್ಫಿ ತೆಗೆದುಕೊಳ್ಳಲು ಆರಂಭ ಮಾಡಿದರು. ಇದನ್ನು ನೋಡಿದ ಶಾಸಕ ರಾಘವೇಂದ್ರ ಸುಮ್ಮನೇ ಯಾರು ಫೋನ್ ತೆಗೆದುಕೊಂಡು ತಮ್ಮ‌ ಬಳಿ ಬರುತ್ತಾರೋ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುತ್ತಿದ್ದರು.‌ಆದರೂ ಸಹ ಶಾಸಕ ರಾಘವೇಂದ್ರ ಹಿಟ್ನಾಳ್ ಗೆ ನೂರಾರು ವಿದ್ಯಾರ್ಥಿನಿಯರು ಸುತ್ತವರದೇ ಇದ್ದರು. ಈ ವೇಳೆ ಕಾರ್ಯಕ್ರಮದ ಆಯೋಜಕರು ಶಾಸಕರಿಗೆ ದಾರಿ ಬಿಡಿ, ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಬೇಡಿ ಎಂದು ಮೈಕ್ ನಲ್ಲಿ ಅನೌನ್ಸ್ ಮಾಡುತ್ತಿದ್ದರೂ ಸಹ ವಿದ್ಯಾರ್ಥಿನಿಯರು ಮಾತ್ರ ಸೆಲ್ಫಿ ತೆಗೆದುಕೊಳ್ಳುತ್ತಲೇ ಇದ್ದರು. 

Kanakagiri Utsava 2022 ಕಣ್ಣಿದ್ದವರು ಕನಕಗಿರಿಯ ವಿಜೃಂಭಣೆಯ ಗರಡೋತ್ಸವ ನೋಡಬೇಕು

ಇತ್ತ ಶಾಸಕ ರಾಘವೇಂದ್ರ ಯಾವಾಗಾದರೂ ಇವರ ಸೆಲ್ಫಿ ಸಂಕಟ ಕೊನೆಗೊಳ್ಳುತ್ತೋ ದೇವರೆ ಎಂದು ಪ್ರಾರ್ಥಿಸುತ್ತಿದ್ದರು.  ಅಂತು ಇಂತು ಕೊನೆಗೂ ಶಾಸಕ ರಾಘವೇಂದ್ರ ಹಿಟ್ನಾಳ್ ವಿದ್ಯಾರ್ಥಿನಿಯರೊಂದಿಗೆ ಗ್ರೂಪ್ ಫೋಟೋ ತೆಗೆಯಿಸಿಕೊಂಡು ಕಾಲೇಜಿನಿಂದ ಹೊರಬಂದು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಒಟ್ಟಿಯಲ್ಲಿ ಸೆಲ್ಫಿ ಕ್ರೇಜ್ ಇರಲಿ, ಟ್ರೆಂಡ್ ಇರಲಿ ಏನೇ ಇರಲಿ ಶಾಸಕರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ವಿದ್ಯಾರ್ಥಿನಿಯರು ಮುಗಿಬಿದ್ದದ್ದನ್ನು‌ ನೋಡಿದರೆ ಅಭಿಮಾನ ಅನ್ನದೇ ಮತ್ತೇನು ಅನ್ನಲು ಸಾಧ್ಯವಿಲ್ಲ ಎಂದು ಹೇಳಬಹುದು.

click me!